ಹತ್ತಿ ತುಂಬಿದ ಟ್ರಾಕ್ಟರ್ ಗೆ ಟಿಪ್ಪರ್ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ ಘಟನೆ ರಾಯಚೂರು ನಗರದ ಹೊರವಲಯದ ಲಿಂಗಸೂಗೂರು ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ನಾಗರಾಜ( )ಮಾನ್ವಿ ತಾಲ್ಲೂಕು ಗೋರ್ಕಲ್ ಗ್ರಾಮದ ವ್ಯಕ್ತಿ ಎನ್ನಲಾಗಿದೆ. ಹತ್ತಿ ಮಾರಾಟಕ್ಕೆ ರಾಯಚೂರು ನಗರಕ್ಕೆ ತೆರಳುವಾಗ ಹಿಂಬದಿಯಿಂದ ಟಿಪ್ಪರ್ ಡಿಕ್ಕಿಯಾದ ರಭಸಕ್ಕೆ ಟ್ರಾಕ್ಟರ್ ಮೇಲೆ ಕೂತಿದ್ದ ವ್ಯಕ್ತಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಬೈಕ್ ಡಿಕ್ಕಿ; ಪಾದಚಾರಿ ಗಂಭೀರ ಗಾಯ
ಇದೇ ಮಾರ್ಗವಾಗಿ ಕೆಲಸದ ನಿಮಿತ್ಯ ಸಚಿವರಾದ ಎನ್.ಎಸ್.ಬೋಸರಾಜು ಅವರು ತೆರಳುತ್ತಿದ್ದರು ಈ ವೇಳೆ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವನ ತಿಳಿಸಿದರು.





