ದೇವದುರ್ಗ ತಾಲೂಕಿನ ಕಾಕರ್ ಗಲ್ ಬಳಿ ಟೋಲ್ ಗೇಟ್ ಕೇಂದ್ರದಿಂದ ಹಣ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಶಾಸಕಿ ಪುತ್ರ ಸಂತೋಷ್ ನಾಯಕ ಹಾಗೂ ಬೆಂಬಲಿಗರು ಸೇರಿ ಟೋಲ್ ನಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ ಘಟನೆ ನಡೆದಿದೆ.
ಕಲ್ಮಲಾ -ತಿಂಥಿಣಿ ಬ್ರಿಡ್ಜ್ ಹೆದ್ದಾರಿಗೆ ನಿರ್ಮಿಸಿರುವ ಕಾಕರಗಲ್ ಟೋಲ್ ಗೇಟ್ ತೆರವುಗೊಳಿಸಲು ಪ್ರಕ್ರಿಯೆ ನಡೆದರೂ ಹಣ ವಸೂಲಿಗೆ ಮುಂದಾಗಿದ್ದಾರೆ ಎಂದು ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ ಪುತ್ರ ಸಂತೋಷ್ ನಾಯಕ ಹಾಗೂ ಬೆಂಬಲಿಗರು ಸುಮಾರು ಮೂವತ್ತು ಜನ ಸೇರಿ ಹಣ ವಸೂಲಿ ಮಾಡುತ್ತಿದ್ದು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದಾಗ ಟೋಲ್ ನಲ್ಲಿದ್ದ ವಸ್ತುಗಳನ್ನು ಧ್ವಂಸಗೊಳಿಸಲಾಗಿದೆ.
ಗಲಾಟೆಯ ವೇಳೆ ಮೌಲ್ಯದ ವಸ್ತುಗಳನ್ನು ಧ್ವಂಸ ಮಾಡಿದ ಆರೋಪದ ಮೇಲೆ ಟೋಲ್ ಅಧಿಕಾರಿ ನವೀನ್ ಕುಮಾರ ಸುಮಾರು 19 ಲಕ್ಷ್ಯ ಹಾನಿಯಾಗಿದೆ ಎಂದು ದೂರಿನ ಅನ್ವಯ ಪ್ರಕಾರ ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಅವರ ಪುತ್ರ ಸಂತೋಷ ನಾಯಕ್ ಸೇರಿದಂತೆ 14 ಜನರ ವಿರುದ್ಧ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು| ಕಾಡುಹಂದಿ ದಾಳಿ;ಕುರಿಗಾಯಿ ತೀವ್ರ ಗಾಯ
ದೇವದುರ್ಗ ತಾಲೂಕಿನಲ್ಲಿ ಎರಡು ಟೋಲ್ ಗೇಟ್‌ಗಳನ್ನು ಆರಂಭಿಸಿದೆ. ಕಲ್ಮಲಾ ಗ್ರಾಮದಿಂದ ತಿಂಥಿಣಿ ಬ್ರಿಡ್ಜ್ ವರೆಗೂ ಎರಡು ಟೋಲ್ ಗಳನ್ನು ನಿರ್ಮಿಸಲಾಗಿದೆ.ಒಂದು ಕಾಕರಗಲ್ ಗ್ರಾಮ ಹಾಗೂ ಜಾಲಹಳ್ಳಿ ಗ್ರಾಮದಲ್ಲಿ ಬಳಿ ಸ್ಥಾಪಿಸಲಾಗಿದೆ.
ಅವೈಜ್ಞಾನಿಕ ಟೋಲ್ ವಿರುದ್ಧ ಈ ಟೋಲ್ ಗೇಟ್‌ಗಳಿಂದ ಹಣ ಸಂಗ್ರಹಿಸುವುದರ ವಿರುದ್ಧ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ರೈತರು ರಸ್ತಾ ರೋಕೋ ಬಂದ್ ಮಾಡಿ ಪ್ರತಿಭಟಿಸಿದ್ದರು.





