ನಗರದ ಹರಿಜನವಾಡ ಬಡಾವಣೆಯ ಗಾಜಗಾರಪೇಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ದುರಸ್ತಿ ಮತ್ತು ಕೆಡವುವ (ಡೆಮಾಲಿಷನ್) ಕೆಲಸದ ವೇಳೆಅವಶೇಷ ಮೈ ಮೇಲೆ ಬಿದ್ದು ಸ್ಥಳದಲ್ಲಿಯೇ ಕಾರ್ಮಿಕ ಮೃತಪಟ್ಟ ಘಟನೆ ಇಂದು ನಡೆದಿದೆ.
ಮೃತನನ್ನು ರಾಯಚೂರು ತಾಲೂಕಿನ ಮಿಟ್ಟಿಮಲ್ಕಾಪೂರ ಗ್ರಾಮದ ಮಲ್ಲೇಶ ಎಂದು ತಿಳಿದು ಬಂದಿದೆ. ಶಾಲೆಯ ಕೆಲವು ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವ ಕಾರಣ ನೆಲಸಮ ಮಾಡುವ ಕೆಲಸ ನಡೆಯುತ್ತಿದ್ದು, ಜೆಸಿಬಿ ಮೂಲಕ ಗೋಡೆಗಳು ನೆಲಸಮ ಮಾಡಿದ್ದು, ಅವಶೇಶಗಳನ್ನು ಡ್ರಿಲ್ಲಿಂಗ್ ಮಶೀನ್ ಮೂಲಕ ವಿಲೇವಾರಿ ಮಾಡುವಾಗ ಗೋಡೆಯ ಭಾಗ ಬೆನ್ನಿನ ಮೇಲೆ ಬಿದ್ದಿದ್ದು ಅದನ್ನು ಅವಶೇಶಗಳಡಿ ಸಿಲುಕಿದ ಕಾರ್ಮಿಕ ಒದ್ದಾಡುತ್ತಿದ್ದಾಗ ಜೆಸಿಬಿಯಿಂದ ಅವಶೇಷಗಳನ್ನು ತೆಗೆಯುವಷ್ಟರಲ್ಲಿ ಕಾರ್ಮಿಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಾರು-ಬೈಕ್ ಮುಖಾಮುಖಿ: ಬೈಕ್ ಸವಾರ ಸ್ಥಳದಲ್ಲೇ ಸಾವು, ಇನ್ನೋರ್ವ ಗಾಯ
ಸ್ಥಳೀಯ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಇದುವರೆಗೆ ದೂರು ದಾಖಲಾಗಿಲ್ಲ ಎಂದು ಗೊತ್ತಾಗಿದೆ.





