ತುಂಗಭದ್ರ ಹಂಗಾಮಿ ನೌಕರರಿಗೆ 08 ತಿಂಗಳಿನಿಂದ ಸಂಬಳವಿಲ್ಲ ವೇತನ ಪಾವತಿಗೆ ಕೊಪ್ಪಳ ಮತ್ತು ರಾಯಚೂರು ಉಸ್ತುವಾರಿ ಸಚಿವರುಗಳು ನಿಗಮದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿ ಬಾಕಿ ವೇತನ ಪಾವತಿಸುವ ವ್ಯವಸ್ಥೆ ಮಾಡಬೇಕು. ಇಲ್ಲದೇ ಹೋದರೆ ಜನವರಿ 26 ರಂದು ಕಪ್ಪು ಪಟ್ಟಿ ಪ್ರದರ್ಶಿಸಲಾಗುವುದು ಎಂದು ತುಂಗಭದ್ರ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘದ ಆಧಕ್ಷ ಆರ್.ಮಾನಸಯ್ಯ ಹೇಳಿದರು
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ ಉತ್ಸವಗಳ ಮೇಲೆ ಉತ್ಸವಗಳು ನಡೆಯುತ್ತಿವೆ. ಆದರೆ ಜನರು, ರೈತರು, ಕಾರ್ಮಿಕರ ಸಮಸ್ಯೆಗಳು ಮಾತ್ರ ಪರಿಹಾರವಾಗದೇ ಉಳಿದಿವೆ. ತುಂಗಭದ್ರ ಯೋಜನೆಯಡಿ ಕ್ರಸ್ಟಗೇಟ್ ಅಳವಡಿಸುವುದರಿಂದ ನೀರು ಹರಿಸುವದು ಬಂದ್ ಆಗಿದೆ. ಕಾರ್ಮಿಕರಿಗೆ ಕೆಲಸವೂ ಇಲ್ಲ, ಬಾಕಿಯಿರುವ 8 ತಿಂಗಳ ವೇತನವು ಇಲ್ಲ ಕೂಡಲೇ ಕೊಪ್ಪಳ ಮತ್ತು ರಾಯಚೂರು ಉಸ್ತುವಾರಿ ಸಚಿವರುಗಳು ಮಧ್ಯಪ್ರವೇಶಿಸಿ ಬಾಕಿ ವೇತನವನ್ನು ನೀಡುವಂತೆ ಒತ್ತಾಯಿಸಬೇಕೆಂದರು.
ಬಾಕಿಯಿರುವ 8 ತಿಂಗಳ ವೇತನಕ್ಕೆ ಕೊಪ್ಪಳ ಮತ್ತು ರಾಯಚೂರು ಉಸ್ತುವಾರಿ ಸಚಿವರುಗಳು ಅಧಿಕಾರಿಗಳಿಗೆ ಪತ್ರ ಬರೆದು ಬಾಕಿ ವೇತನ ನೀಡುವಂತೆ ಸೂಚಿಸಿದ್ದರು ನಿಗಮದ ಅಧಿಕಾರಿಗಳು ವೇತನ ಪಾವತಿಸುತ್ತಿಲ್ಲ. ಈ ಹಿಂದೆ ವರ್ಷವಿಡಿ ಕೆಲಸ ಕೊಡುವುದಾಗಿ ನಿಗಮದ ಆದೇಶವಾಗಿತ್ತು ಆದರೆ ವೇತನವಿಲ್ಲ, ಕೆಲಸವುವಿಲ್ಲ ಹಾಗೂ ಬೆಳೆಯು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ತುಂಗಭದ್ರ ಯೋಜನೆಯಡಿ 6 ಲಕ್ಷ ಎಕರೆ ನೀರುಣಿಸುವದು, ಎರಡು ಮಹಾನಗರಪಾಲಿಕೆ, ಮೂರು ಪಟ್ಟಣ ಪಂಚಾಯತಿ 180 ಗ್ರಾಮಗಳ ಕುಡಿಯುವ ನೀರು ಸರಬರಾಜ ಅವಲಂಬಿತರಾಗಿದ್ದು ವೇತನವಿಲ್ಲದೇ ಕಾರ್ಮಿಕರು ಕೆಲಸ ಮಾಡುವಂತಾಗಿದೆ ವೇತನವಿಲ್ಲದೇ ದುಡಿಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ಖಂಡನೀಯ. ದುಡಿಯಲು ಬಿಡುತ್ತಿಲ್ಲ,ಕೂಲಿಯೂ ಕೊಡುತ್ತಿಲ್ಲ. ಭತ್ತಕ್ಕೆ ವೈರಸ್ ರೋಗದೊಂದಿಗೆ ಬೆಲೆಯಿಲ್ಲದೇ ರೈತರು ಸಂಕಷ್ಟದಲ್ಲಿದ್ದರು ಸರಕಾರ ಜಿಲ್ಲೆಉತ್ಸವ ಮಾಡಲು ಹೊರಟಿರುವುದಕ್ಕೆ ಧಿಕ್ಕಾರವಿರಲಿ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಟ್ರಾಕ್ಟರ್ ಗೆ ಟಿಪ್ಪರ್ ಡಿಕ್ಕಿ; ಓರ್ವ ಸಾವು
ಈ ಸಂದರ್ಭದಲ್ಲಿ ಸಂಘದ ಪ್ರಧಾನಕಾರ್ಯದರ್ಶಿ ಅಡವಿರಾವ್, ಮುಖಂಡರುಗಳಾದ ಲೋಕಪ್ಪ, ರಾಧಾಕೃಷ್ಣ, ಮುದುಕಪ್ಪ, ಸಿದ್ದಪ್ಪ, ಶಂಕರಪ್ಪ, ನಾಗರಾಜ, ಮಹದ ಸಫಿಯುದ್ದೀನ್, ಇದ್ದರು.





