ರಾಯಚೂರು ನಗರದ ಯರಗೇರಾ ರಸ್ತೆ ಬಳಿಯ ಸರ್ವೆ ನಂಬರ್ 1179/1ರ ಹಜರತ್ ಕರಿಮುಲ್ಲಾ ಖಾದ್ರಿ ದರ್ಗಾದ 12 ಎಕರೆ ಜಮೀನು ಹೊಂದಿದೆ. ವಕ್ಫ್ ಮಂಡಳಿಯ ಕಾಯ್ದೆ ಅಡಿ ವಿಚಾರಣೆ ನಡೆಸಿ ಆದೇಶಿಸಿ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿದ್ದಾರೆ. ಆದರೆ ಆದೇಶ ಉಲ್ಲಂಘಿಸಿ ಕಾಮಗಾರಿ ನಡೆಸಿದ್ದು, ಕೂಡಲೇ ಕ್ರಮ ವಹಿಸಬೇಕು ಎಂದು ಆಮ್ ಆದ್ಮಿ ಪಕ್ಷದಿಂದ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
“ಹಜರತ್ ಕರಿಮುಲ್ಲಾ ಖಾದ್ರಿ ದರ್ಗಾದಲ್ಲಿನ ಒಟ್ಟು ಜಮೀನು 12 ಎಕರೆ ಜಮೀನು ವಕ್ಫ್ ಮಂಡಳಿ ಕಾಯ್ದೆಯಡಿ ವಿಚಾರಣೆ ನಡೆಸಿ 2024ರ ಫೆಬ್ರವರಿ 20ರಂದು ಮಧ್ಯಂತರ ಆದೇಶ ಹೊರಡಿಸಿ ಯಥಾಸ್ಥಿತಿ ಕಾಪಾಡುವಂತೆ ಜಿಲ್ಲಾ ವಕ್ಫ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗೆ ಆದೇಶಿಸಿದೆ. ಜಿಲ್ಲಾಧಿಕಾರಿಯವರೂ ಕೂಡಾ ಯಾಥಾಸ್ಥಿತಿಯಲ್ಲಿ ಕಾಪಾಡುವಂತೆ ಆದೇಶಿದ್ದಾರೆ. ಆದರೆ ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ ಮಾಡಿ ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿದೆ. ಆದೇಶ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ವಹಿಸಬೇಕು, ವಕ್ಫ್ ಆಸ್ತಿ ರಕ್ಷಣೆಗೆ ಮುಂದಾಗಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಹಿಂದು ಕಾರ್ಯಕರ್ತನ ಮೇಲೆ ಬಿಜೆಪಿಗರ ಹಲ್ಲೆ
ಅಧ್ಯಕ್ಷ ಡಿ ವೀರೇಶ, ಮುಖಂಡರುಗಳಾದ ಡಾ ಎಂ ಡಿ ಹೀದ್, ಶಕ್ಷಾವಲಿ, ಮಕ್ಬುಲ್ ಪಾಷಾ, ಸೈಯದ್ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ





