ಗುತ್ತಿಗೆ ಸಂಸ್ಥೆಯಿಂದ ವೇತನ ಕಡಿತಗೊಳಿಸಿ ಪಿಎಫ್,ಎಸ್ ಐ ಹಣ ವನ್ನು ಸರಿಯಾಗಿ ಜಮಾ ಮಾಡದೇ ಡಿಗ್ರುಪ್ ನೌಕರರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿ ರಿಮ್ಸ್ ಆಸ್ಪತ್ರೆಯ ಆವರಣದ ಮುಂದೆ ಹೊರಗುತ್ತಿಗೆ ನೌಕರರು ಗುರುವಾರ ಕೆಲಸಕ್ಕೆ ಗೈರಾಗಿ ಪ್ರತಿಭಟನೆ ನಡೆಸಿದರು.
ಮೈಸೂರು ಮೂಲದ ಸ್ವಿಸ್ ಎಂಬ ಗುತ್ತಿಗೆ ಸಂಸ್ಥೆ ಡಿ ಗ್ರುಪ್ ನೌಕರರ ಮೇಲೆ ಮಾನಸಿಕ ಹಿಂಸೆ ನೀಡುತ್ತಿದೆ, ತಿಂಗಳಿಗೊಮ್ಮೆ ವೇತನ ಜಮಾ ಮಾಡದೇ ಮೂರ್ನಾಲ್ಕು ತಿಂಗಳಿಗೆ ವೇತನ ಜಮಾ ಮಾಡಲಾಗುತ್ತಿದೆ ಎಂದು ದೂರಿದರು.
ಎರೆಡು ತಿಂಗಳ ವೇತನ ಬಾಕಿ ಇಟ್ಟು ಇತ್ತೀಚೆಗೆ ವೇತನ ಪಾವತಿ ಮಾಡಿದ್ದು ಅನೇಕರಿಗೆ 3-5 ಸಾವಿರ ವೇತನ ಕಡಿತಗೊಳಿಸಿದ್ದಾರೆ, ಏಜೆನ್ಸಿ ಅವರಿಗೆ ಕೇಳಿದರೆ ಸಮವಸ್ತ್ರ ಬದಲಾಬಣೆಗೆ ಕಡಿತಗೊಳಿಸಿದ್ದೇವೇ ಎಂದು ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಗುತ್ತಿಗೆ ನೌಕರರಿಗೆ ಅತ್ಯಂತ ಕಡಿಮೆ ವೇತನ ಪಾವತಿ ಮಾಡಲಾಗುತ್ತಿದ್ದು ಅದರಲ್ಲಿಯೂ ಸಮವಸ್ತ್ರದ ಹೆಸರಿನಲ್ಲಿ 5ಸಾವಿರ ಕಡಿತಗೊಳಿಸಿದರೆ ಕುಟುಂಬ ನಿರ್ವಹಣೆ ಮಾಡುವುದಾದರು ಹೇಗೆ ಎಂದು ಏಜೆನ್ಸಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ( ರಿಮ್ಸ್) ಭೋದಕ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡಲು ಸಿಬ್ಬಂದಿಯ ಕೊರತೆಇದೆ ಮೂವರ ಕೆಲಸ ಒಬ್ಬರೇ ಮಾಡಬೇಕಿದೆ, ಗುತ್ತಿಗೆ ಸಂಸ್ಥೆಯವರು ಗೌರವಯುತವಾಗಿ ನಡೆದುಕೊಳ್ಳದೇ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಲಿಂಗಸುಗೂರು | ರಾಜ್ಯದಲ್ಲಿನ ಖಾಲಿ ಹುದ್ದೆಗಳನ್ನು ಒಳ ಮೀಸಲಾತಿ ಆಧರಿಸಿ ಭರ್ತಿಗಾಗಿ ಒತ್ತಾಯಿಸಿ ಪ್ರತಿಭಟನೆ
ಪ್ರತಿಭಟನೆಯಲ್ಲಿ ಹೊರಗುತ್ತಿಗೆ ನೌಕರರಾದ ಆನಂದ, ಪ್ರಶಾಂತ, ರಮೇಶ, ಸಂದೀಪ, ನರೇಶ, ಮಲ್ಲಿಕಾರ್ಜುನ, ವಿನೋದ,ಅನುರಾದ,ಸುನೀತ, ಪುಷ್ಪ, ಈರಮ್ಮ, ಶ್ರೀನಿವಾಸ, ಅಮರಮ್ಮ, ವಿಶ್ವನಾಥ,ನವೀನ ಕುಮಾರ ಉಪಸ್ಥಿತರಿದ್ದರು.





