ರಾಯಚೂರು ಜಿಲ್ಲೆಯ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ ಯುವಕನೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾಗಿ ಅಶ್ಲೀಲ ವಿಡಿಯೊಗಳನ್ನು ವೀಕ್ಷಿಸುತ್ತಿದ್ದ ಆರೋಪದಡಿ ಸೈಬರ್ ಕ್ರೈಂ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಹಗಲು–ರಾತ್ರಿ ಎನ್ನದೇ ನಿರಂತರವಾಗಿ ಅಶ್ಲೀಲ ವಿಷಯಗಳನ್ನು ವೀಕ್ಷಿಸುತ್ತಿದ್ದ ಎನ್ನಲಾಗಿದೆ.
ವೆಬ್‌ಸೈಟ್‌ಗೆ ಲಿಂಕ್ ಆಗಿದ್ದ ಇ-ಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿದ ವೇಳೆ ಯುವಕನ ಕೃತ್ಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸಿದ ಬಳಿಕ ಯುವಕ ತನ್ನ ಮೊಬೈಲ್‌ನಲ್ಲಿ ಹಿಸ್ಟರಿ ಅಳಿಸುತ್ತಿದ್ದನು. ಆದರೆ, ಆತ ವೀಕ್ಷಿಸಿದ್ದ ವಿಡಿಯೋಗಳ ವಿವರಗಳು ಸಂಬಂಧಿತ ವೆಬ್‌ಸೈಟ್‌ನ ದತ್ತಾಂಶದಲ್ಲಿ ದಾಖಲಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಲಿಂಗಸೂಗೂರು | ಬೆಂಕಿ ಅವಘಡ: ₹70 ಸಾವಿರ ಮೌಲ್ಯದ ಬಣವೆಗಳು ಭಸ್ಮ
ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿ ಖಾತರಿ ಪಡಿಸಿಕೊಂಡ ಬಳಿಕ, ಮಕ್ಕಳ ಲೈಂಗಿಕ ಶೋಷಣೆ ವಸ್ತುಗಳು (CSAM) ಸೈಬರ್ ಕ್ರೈಂ ಕಾಯ್ದೆಯಡಿ 9 ಪ್ರಕರಣಗಳು ಸೇರಿದಂತೆ ಒಟ್ಟು 32 ಪ್ರಕರಣಗಳನ್ನು ದಾಖಲಿಸಿದ್ದಾರೆ. ಆರೋಪಿಯ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.





