ರಾಯಚೂರು | ಮಾದಿಗ ಜನಾಂಗಕ್ಕೆ ಸ್ಮಶಾನ ಭೂಮಿ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ

Date:

ರಾಯಚೂರು ಜಿಲ್ಲೆ ಯಕ್ಲಾಸಪೂರು ಸೀಮಾಂತರದ 2ಎಕರೆ 7 ಗುಂಟೆ ಜಮೀನನ್ನು ಪರಿಶಿಷ್ಟ ಜಾತಿ ಮಾದಿಗ ಜನಾಂಗದ ಸ್ಮಶಾನ ಉಪಯೋಗಕ್ಕಾಗಿ ನೀಡುವಂತೆ ಒತ್ತಾಯಿಸಿ ಮಾದಿಗ ದಂಡೋರ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಗಾಯರಾಣ ಭೂಮಿಯನ್ನು ಸ್ಮಶಾನಕ್ಕಾಗಿ ಮೀಸಲಿಡುವಂತೆ ಹಲವಾರು ಭಾರೀ ಮನವಿ ಸಲ್ಲಿಸಿದರೂ ಯಾರೂ ಸ್ಪಂಧಿಸಿಲ್ಲ. ಈಗಿರುವ ಸ್ಮಶಾನ ಭೂಮಿ ಕೇವಲ ಒಂದು ಎಕರೆ 30ಗುಂಟೆ ಇದೆ. ಸಿಯಾತಲಾಬ್, ಯಕ್ಲಾಸಪೂರು, ಕುಲಸುಂಬಿ ಕಾಲೋನಿ, ಡ್ಯಾಡಿ ಕಾಲೋನಿ, ನಿಜಲಿಂಗಪ್ಪ ಕಾಲೋನಿ ಸೇರಿದಂತೆ ಸುಮಾರು 25ಸಾವಿರ ಜನಸಂಖ್ಯೆಗೆ ಒಂದೇ ಸ್ಮಶಾನ ಭೂಮಿ ಇದೆ. ಸರ್ವೆ ನಂ.73/2ರಲ್ಲಿ ಮಾದಿಗ ಸಮುದಾಯಕ್ಕೆ‌ ಸರ್ವೆ ನಂ.73/2ರಲ್ಲಿರುವ 7ಎಕರೆ 24ಗುಂಟೆ ಪೈಕಿ,  2ಎಕರೆ 7ಗುಂಟೆ ಸ್ಮಶಾನ ಭೂಮಿ ಮಂಜೂರು ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಹೇಮರಾಜ ಅಸ್ಕಿಹಾಳ, ಜಿಲ್ಲಾಧ್ಯಕ್ಷ ಜಿ.ನರಸಿಂಹಲು ಮರ್ಚೆಟ್ಹಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉರುಕುಂದಿ ಸಿಯಾತಲಾಬ್, ನರಸಿಂಹಲು ಪೋತಗಲ್, ಉರುಕುಂದಪ್ಪ ಜಗ್ಲಿ, ಪ್ರಭುರಾಜ ಮರ್ಚೆಟ್ಹಾಳ, ತಾಯಣ್ಣ ಗಧಾರ, ನರಸಿಂಹಲು ಪೋತಗಲ್, ಲಕ್ಷ್ಮಣ್ ಕಲ್ಲೂರು ಸೇರಿದಂತೆ ಅನೇಕರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...