ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ವಿಶೇಷವಾಗಿ ಯುವಕರು ಇಂತಹ ವಂಚನೆಗಳಿಗೆ ಬಲಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ನೂರಾರು ಯುವಕರು ದಿಢೀರನೇ ಶ್ರೀಮಂತ ಆಗಬೇಕೆಂಬ ಆಸೆಯಿಂದ ಸಾಲ ಮಾಡಿ ಆತ್ಮಹತ್ಯೆಗೆ ಗುರಿಯಾಗಿದ್ದು ಹಲವು ಪ್ರಕರಣಗಳು ನೋಡಿದ್ದೇವೆ.
ರಾಯಚೂರು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 83 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಸುಮಾರು 36 ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆನ್‌ಲೈನ್ ಉದ್ಯೋಗ, ಹೂಡಿಕೆ, ಷೇರು ಮಾರುಕಟ್ಟೆ, ಕ್ರಿಪ್ಟೋ ಕರೆನ್ಸಿ, ಲಾಟರಿ, ಕಸ್ಟಮರ್ ಕೇರ್ ಕರೆಗಳು, ನಕಲಿ ಲಿಂಕ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ವಂಚನೆಗಳು ಹೆಚ್ಚಾಗಿ ಕಂಡು ಬರುತ್ತಿವೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಯುವಕರನ್ನು ಆಕರ್ಷಿಸುವುದು ವಂಚಕರ ಪ್ರಮುಖ ತಂತ್ರವಾಗಿದೆ.
ಬಹುತೇಕ ಪ್ರಕರಣಗಳಲ್ಲಿ ಯುವಕರು ಮೊಬೈಲ್ ಆ್ಯಪ್‌ಗಳು, ನಕಲಿ ವೆಬ್‌ಸೈಟ್‌ಗಳು ಹಾಗೂ ವಾಟ್ಸ್‌ಆಪ್, ಟೆಲಿಗ್ರಾಂ ಲಿಂಕ್‌ಗಳ ಮೂಲಕ ಹಣ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಕೆಲವರು ಉದ್ಯೋಗ ಸಿಗುತ್ತದೆ ಎಂಬ ಭರವಸೆಗೆ, ಇನ್ನೂ ಕೆಲವರು ಆನ್‌ಲೈನ್ ಟ್ರೇಡಿಂಗ್ ಹಾಗೂ ಕ್ರಿಪ್ಟೋ ಹೂಡಿಕೆಯ ಹೆಸರಿನಲ್ಲಿ ವಂಚನೆಗೆ ಒಳಗಾಗಿದ್ದಾರೆ.
ಅಧಿಕೃತ ಮಾಹಿತಿ ಪ್ರಕಾರ ರಾಯಚೂರು ಜಿಲ್ಲೆಯಲ್ಲಿ 2023ರಲ್ಲಿ 33 ಪ್ರಕರಣ, 20 ಪತ್ತೆ 1.66 ಕೋಟಿ, 58,393 ವಂಚನೆ ಆಗಿದೆ. 2024 ರಲ್ಲಿ 32 ಪ್ರಕರಣ, 12 ಪತ್ತೆ 13.64 ಕೋಟಿ, 11,640 ವಂಚನೆ ಆಗಿದೆ. 2025 ನವೆಂಬರ್ 15 ರವರೆಗೆ 18 ಪ್ರಕರಣ 04 ಪತ್ತೆ 3.62 ಕೋಟಿ, 73,027 ವಂಚನೆ ಆಗಿದೆ. ಸೈಬರ್ ಅಪರಾಧದಲ್ಲಿ ಕ್ರಮಕೈಗೊಂಡರೂ ಸಹ ನಿಯಂತ್ರಣವಾಗದೇ ಇರುವುದು, ಶೀಘ್ರ ಆರೋಪಿಗಳ ಬಂಧನ ಮಾಡಿಲ್ಲ ಎಂಬುದು ನಾಗರಿಕರ ಅಭಿಪ್ರಾಯ.
ರಾಯಚೂರು ಜಿಲ್ಲೆಯಲ್ಲಿ ಸೈಬರ್ ವಂಚನೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದ್ದು, ಯುವಕರೇ ಪ್ರಮುಖ ಬಲಿಪಶುಗಳಾಗುತ್ತಿದ್ದಾರೆ. ಸಾರ್ವಜನಿಕ ಜಾಗೃತಿ ಹಾಗೂ ಎಚ್ಚರಿಕೆಯಿಂದ ಮಾತ್ರ ಇಂತಹ ವಂಚನೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತೆ. ರಾಜ್ಯ ಸೇರಿ ಜಿಲ್ಲೆಯಲ್ಲಿಯೂ ಕೂಡ ಸಾಲಿದಾರಿಟಿ ಸಂಘಟನೆಯ ವತಿಯಿಂದ ಇಡೀ ರಾಜ್ಯಾದ್ಯಂತ ಆನಲೈನ್ ಹಾಗೂ ದುಶ್ಚಟಕ್ಕೆ ಬಲಿಯಾಗುತ್ತಿರುವ ನಿಟ್ಟಿನಲ್ಲಿ ಯುವಕರಲ್ಲಿ ಜಾಗೃತಿ ಮೂಡಿಸುವುದಕ್ಕೆ ಹಲವು ಕಡೆ ಕಾರ್ಯಕ್ರಮಗಳು ಆಯೋಜಿಸುವಲ್ಲಿ ಸಕ್ರಿಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಕೆಲವು ದಿನಗಳ ಹಿಂದೆ ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಗಳನ್ನು ಹೊಂದಿರುವ ವ್ಯವಸ್ಥಾಪಕರು ಅಲರ್ಟ್ ಮೆಸೇಜ್‌ಗಾಗಿ ಒಂದೇ ಮೊಬೈಲ್ ನಂಬರ್ ಲಿಂಕ್ ಮಾಡಿಸಿದ್ದರು. ಅನ್‌ಲೈನ್ ಗೇಮಿಂಗ್ ಮೋಹಕ್ಕೆ ಒಳಗಾಗಿ ಇದೀಗ ಎಲ್ಲ ಹಣವನ್ನೂ ಕಳೆದುಕೊಂಡು ಬೆತ್ತಲಾಗಿರುವ ಘಟನೆ ನಡೆದಿತು.
ವಂಚನೆಗೊಳಗಾದ ಹೈ ಫಿರೋಜ್ ಮಾತನಾಡಿ, ವಾಟ್ಸಪ್ ಗ್ರೂಪ್‌ಗಳಲ್ಲಿ ಎಪಿಕೆ ಫೈಲ್‌ಗಳು, ಬಂಪರ್ ಆಫರ್‌ಗಳ ಹೆಸರಿನಲ್ಲಿ ಬರುತ್ತಿರುವ ಲಿಂಕ್‌ಗಳ ಮೂಲಕ ಸೈಬರ್ ವಂಚನೆ ಹೆಚ್ಚಾಗಿದೆ. ಇಂತಹ ಒಂದು ಲಿಂಕ್ ಅನ್ನು ಕ್ಲಿಕ್ ಮಾಡಿದ ಪರಿಣಾಮ ನಾನು ಸಾವಿರಾರು ರೂಪಾಯಿ ಕಳೆದುಕೊಂಡಿದ್ದೇನೆ ಎಂದು ಅಳಲು ತೋಡಿಕೊಂಡರು. ಈ ರೀತಿಯ ಲಿಂಕ್‌ಗಳನ್ನು ಒಬ್ಬರು ಕ್ಲಿಕ್ ಮಾಡಿದರೆ ಅದು ಅವರ ಸಂಪೂರ್ಣ ಸಂಪರ್ಕ ಪಟ್ಟಿಗೆ ಹರಡುತ್ತದೆ. ಪರಿಣಾಮವಾಗಿ ಅನೇಕ ಜನರು ಹಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ವಂಚಕ ಲಿಂಕ್‌ಗಳ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕಿದ್ದು, ಈ ಪ್ರಕರಣಗಳಿಗೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ : ರಾಯಚೂರು | 10 ತಿಂಗಳಲ್ಲಿ 736 ಅಪಘಾತ 264 ಮಂದಿ ಮೃತ್ಯು
ಆರಂಭದಲ್ಲಿ ಸ್ವಲ್ಪ ಸ್ವಲ್ಪ ಹಣ ಬಂದಂತೆ ಆಗಿದೆ. ಇದರಿಂದಾಗಿ ವ್ಯವಸ್ಥಾಪಕರಿಗೆ ಮೋಸಗಾರರ ಮೇಲೆ ನಂಬಿಕೆಯೂ ಹೆಚ್ಚಾಗಿದೆ. ಅಧಿಕ ಹಣ ತೊಡಗಿಸಿದ ನಂತರ ಡಿಸೆಂಬರ್ 2ರಂದು ಗೇಮ್ ಸೈಟ್‌ನಲ್ಲಿ ಇದ್ದ ಲಾಗಿನ್ ಖಾತೆ ಇದ್ದಕ್ಕಿದ್ದಂತೆಯೇ ಬ್ಲಾಕ್ ಆಯಿತು. ಸಂಬಂಧಪಟ್ಟವರನ್ನು ಸಂಪರ್ಕಿಸಲು ಅಲ್ಲಿ ಯಾವುದೇ ನಂಬರ್ ಸಹ ಇರಲಿಲ್ಲ. ನಂತರ ಅವರಿಗೆ 70 ಲಕ್ಷ ಹೋಗಿರುವುದು ಮನವರಿಕೆಯಾಗಿದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್




