ಮನೆಯ ಕಾಮಗಾರಿಯ ನಿರ್ಮಾಣ ಹಂತದ ಕಟ್ಟಡದ ಮೆಟ್ಟಿಲುಗಳು ಕುಸಿದು ಬಿದ್ದು ದಂಪತಿ ಸಾವನ್ನಪ್ಪಿದ ಘಟನೆ ಲಿಂಗಸುಗೂರು ತಾಲ್ಲೂಕು ಯಲಗಟ್ಟ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ದೇವಣ್ಣ ಹಾಗೂ ಅವರ ಪತ್ನಿ ಶಿವಮ್ಮ ಎಂದು ಗುರುತಿಸಲಾಗಿದೆ.
ಮನೆಯ ಕಟ್ಟಡದ ನಿರ್ಮಾಣ ಕಾರ್ಯ ನಡೆಯುತ್ತಿತ್ತು, ಕೆಲಸ ಮಾಡುವಾಗ ಏಕಾಏಕಿ ಮೆಟ್ಟಿಲು ಕುಸಿದು ಬಿದ್ದಾಗ ದಂಪತಿ ಅದರಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಮುಕ್ಕುಂದ ಗ್ರಾಮದಲ್ಲಿ ಕುರಿ ಶೆಡ್‌ಗೆ ಬೆಂಕಿ; 700 ಕುರಿಗಳು ಸಜೀವ ದಹನ
ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆ ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ





