ಸಮಾಜ ಕಲ್ಯಾಣ ಸಚಿವರನ್ನು ಹೊಡೆಯುವುದಾಗಿ ಬಹಿರಂಗವಾಗಿ ಹೇಳಿದ ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಬಲಗೈ ಸಮಾಜದ ಒಕ್ಕೂಟದಿಂದ ಪ್ರತಿಭಟಿಸಿದರು.
ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಶಿವನಗೌಡ ಅವರ ಬ್ಯಾನರ್ ಸುಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗ ಸಮಾವೇಶದಲ್ಲಿ ಶಿವನಗೌಡ ಮಾತನಾಡುತ್ತಾ, ಸಮಾಜ ಕಲ್ಯಾಣ ಸಚಿವ ಹೆಚ್ ಸಿ.ಮಹಾದೇವಪ್ಪ ಅವರಿಗೆ ಮುಖಕ್ಕೆ ಹೊಡೆಯುತ್ತಿದ್ದೆ ಎಂದು ಹೇಳಿರುವುದು ತೀವ್ರ ಖಂಡನೀಯ. ಈಗಾಗಲೇ ಶಿವನಗೌಡ ನಾಯಕ ವಿರುದ್ಧ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದ್ದು, ಎಫ್‍ಐಆರ್ ದಾಖಲಿಸುವ ಹಾಗೂ ತನಿಖೆ ನಡೆಸುವ ಕುರಿತು ನ್ಯಾಯಾಲಯದ ಆದೇಶ ಬರುವುದು ಬಾಕಿ ಇದೆ ಎಂದು ಆಗ್ರಹಿಸಿದರು.
ಕೆ.ಶಿವನಗೌಡ ನಾಯಕ ಅವರು ರಾಜಕೀಯ ನಾಯಕರ ಎದುರು ಕಾಲಿಗೆ ಬೀಳುವುದು ಅವರು ಹೋದ ನಂತರ ಅವರನ್ನು ಬಾಯಿಗೆ ಬಂದಂತೆ ಬೈಯುವ ಚಾಳಿಯನ್ನು ಇಟ್ಟುಕೊಂಡಿದ್ದಾರೆ. ಅವರು ಅನೇಕ ಬಾರಿ ಅಧಿಕಾರಿಗಳ ವಿರುದ್ದ ಬೇರೆ ಸಮುದಾಯದ ನಾಯಕರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಸಂಪುಟದ ಸಚಿವರಾಗಿ ಕೆಲಸ ಮಾಡಿದ ಅವರು ಸಂವಿಧಾನದ ಚೌಕಟ್ಟನ್ನು ದಾಟಿ ಕೀಳು ಮಟ್ಟದ ಕೆಲಸ ಮಾಡಿದ್ದು ಖಂಡನೀಯ. ಅವರ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಉಂಟಾಗಿ ಕಲಹಕ್ಕೆ ಕಾರಣವಾಗುತ್ತೆ ಕೂಡಲೇ ಕೆ.ಶಿವನಗೌಡ ನಾಯಕ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಧಾರಾಕಾರ ಮಳೆ;12 ಎಕರೆ ಪಪ್ಪಾಯಿ ಬೆಳೆ ನಾಶ, ರೈತನಿಗೆ 20 ಲಕ್ಷ ನಷ್ಟ
ಪ್ರತಿಭಟನೆ ಯಲ್ಲಿ ಒಕ್ಕೂಟದ ರಾಜ್ಯ ಗೌರವಾಧ್ಯಕ್ಷ ಸತ್ಯನಾರಾಯಣ, ಜಿಲ್ಲಾಧ್ಯಕ್ಷ ಮಂಚಾಲ ಭೀಮಣ್ಣ, ಕಾರ್ಯಾಧ್ಯಕ್ಷ ವಿಶ್ವನಾಥ ಪಟ್ಟಿ, ಕೆ.ಇ ಕುಮಾರ ಮತ್ತಿತರರು ಇದ್ದರು





