ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ತೆಲಂಗಾಣದ ಗಟ್ಟು ಗ್ರಾಮದ ಸಮೀಪದ ಬಲ್ಲೇರಾ ಗ್ರಾಮದ ಬಳಿ ಜರುಗಿದೆ.
ಮೃತಪಟ್ಟಿರುವ ಯುವಕರು ರಾಯಚೂರು ತಾಲೂಕಿನ ದೇವನಪಲ್ಲಿ ಗ್ರಾಮದ ಹುಲಿಗೆಪ್ಪ (40) ತಿಮಪ್ಪ ಗೌಸ ನಗರ (35) ಎಂದು ತಿಳಿದು ಬಂದಿದೆ.
ಬಲ್ಲೆರಾ ಸಮೀಪ ಕಾಲುವೆ ಹತ್ತಿರ ಒಂದು ಕಾರು ಕೆಟ್ಟು ನಿಂತಿದ್ದು, ಅವರಿಗೆ ಸಹಾಯ ಮಾಡಲು ಟ್ರಾಕ್ಟರ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಹೋಗಿದ್ದ, ಈ ವೇಳೆಯಲ್ಲಿ ದೇವನಪಲ್ಲಿಯ ಹುಲಿಗೆಪ್ಪ ಮತ್ತು ತಿಮಪ್ಪ ಗೌಸ್ ನಗರ್ ಅವರು ಐಜ್ ಮಂಡಲದ ವರಿಕೋಟೆ ಯಂತ್ರ ತರಲು ಬೈಕ್‌ನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು
ಈ ವೇಳೆ ಬಲ್ಲೆರಾ ಸಮೀಪ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದು ರಾತ್ರಿ ಸಮಯದಲ್ಲಿ ಟ್ರಾಕ್ಟರ್ ಕಾಣದೇ ಇದ್ದಾಗ ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂತರ ಅವರ ಮೃತದೇಹಗಳನ್ನು ಗದ್ವಾಲ್ ಆಸ್ಪತ್ರೆಗೆ ಸಾಗಿಸಲಾಗಿದೆ.





