ಸಿಂಧನೂರು ನಗರದ ಬಸ್ ನಿಲ್ದಾಣದಲ್ಲಿ ಮಹಿಳೆಯ ಮೇಲೆ ಬಸ್ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಕಾರಟಗಿ ಪಟ್ಟಣದ ಬೇವಿನಾಳ ಗ್ರಾಮದ ದೊಡ್ಡ ಈರಮ್ಮ ಬಸಣ್ಣ ನಾಯಕ (38) ಮೃತ ಮಹಿಳೆ. ರಾಯಚೂರಿನಿಂದ ಬಳ್ಳಾರಿಗೆ ಹೊರಟಿದ್ದ ರಾಯಚೂರಿನ ಮೂರನೇ ಡಿಪೋಗೆ ಸಂಬಂಧಿಸಿದ ಕೆಎ-36 ಎಫ್-1415 ಸಂಖ್ಯೆಯ ಬಸ್ ನಗರದ ಬಸ್ ನಿಲ್ದಾಣ ಪ್ರವೇಶಿಸುವಾಗ ಮಹಿಳೆ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಬಸ್ ಮಹಿಳೆಯ ತಲೆ ಮೇಲೆ ಹರಿದಿದ್ದು, ಮಹಿಳೆಯ ದೇಹದ ಭಾಗಗಳು ನಜ್ಜುಗುಜ್ಜಾಗಿವೆ. ಬಸ್ ಚಾಲಕನ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಮೃತದೇಹವನ್ನು ಆಸ್ಪತ್ರೆಗೆ ಸಾಗಿಸುವ ಮೂಲಕ ಸ್ಥಲದಲ್ಲಿದ್ದ ಟ್ರಾಫಿಕ್ ಪಿಎಸ್‌ಐ ಚಂದ್ರಶೇಖರ ಹಿರೇಮಠ ಸೇರಿ ಸಂಚಾರಿ ಠಾಣೆಯ ಪೊಲೀಸರು ಮಾನವೀಯತೆ ಮೆರೆದರು. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೀದರ | ಬಸವಣ್ಣ-ಅಕ್ಕಮಹಾದೇವಿ ಅವಹೇಳನ : ಕ್ರಮಕ್ಕೆ ಆಗ್ರಹ





