ರಾಮನಗರ | ವಿನೂತನವಾಗಿ ಮಗುವಿನ ಹುಟ್ಟುಹಬ್ಬ: ಗಮನಸೆಳೆದ ವೋಟ್‌ ಚೋರಿ ಫಲಕ, ಕ್ರಾಂತಿಗೀತೆಗಳು

Date:

ರಾಮನಗರದಲ್ಲಿ ಮಗುವಿನ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಿದ್ದು, ಆ ಮಗುವಿನ ಪೋಷಕರು ಪ್ರಸ್ತುತ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಮೇಘನಾ ಮತ್ತು ಅಕ್ಷಯ್‌ ಎಂಬ ಸಂಗಾತಿಗಳು ಸಮಾನ ಮನಸ್ಕರೊಂದಿಗೆ ಸೇರಿಕೊಂಡು ತಮ್ಮ ಮಗು(ಸೂಫಿ)ವಿನ ಮೂರನೇ ವರ್ಷದ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಿದ್ದಾರೆ.

ಬಿಹಾರದ ಚುನಾವಣೆ ವೇಳೆ ನಡೆದಂತಹ ಮತಗಳ್ಳತನವನ್ನು ವಿರೋಧಿಸಿ ʼವೋಟ್‌ ಚೋರಿʼ ಎಂಬ ಫಲಕವನ್ನು ಅಳವಡಿಸಿದ್ದ ದೃಶ್ಯ ಹುಟ್ಟುಹಬ್ಬದಲ್ಲಿ ಗಮನ ಸೆಳೆಯಿತು. ಅಲ್ಲದೆ ಬುದ್ಧ, ಬಸವ, ಅಂಬೇಡ್ಕರ್‌, ಮಂಟೇಸ್ವಾಮಿಯವರ ಕುರಿತ ಕ್ರಾಂತಿಗೀತೆಗಳು ಸ್ಥಳೀಯರನ್ನು ನಿಬ್ಬೆರಗಾಗಿಸಿದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದೇ ವೇಳೆ ಅಕ್ಷಯ್‌ ಅವರು ಮಾತನಾಡಿ, ಪ್ರಸ್ತುತ ವ್ಯವಸ್ಥೆ, ಪ್ರಜಾಪ್ರಭುತ್ವ ದೇಶದಲ್ಲಿ ನಡೆಯುತ್ತಿರುವ ದುಃಸ್ಥಿತಿಗಳ ಕುರಿತು ಹೇಳುತ್ತ ಗದ್ಗದಿತರಾದರು.

ವೋಟ್‌ ಚೋರಿ ಫಲಕ

ಬಳಿಕ ಮಗುವಿನ ಕೈಯಲ್ಲಿ ಕೇಕ್‌ ಕತ್ತರಿಸಿ ನೆರೆದಿದ್ದ ಎಲ್ಲರಿಗೂ ಸಿಹಿ ಹಂಚಿದರು. ಬಳಿಕ ಎಲ್ಲರಿಗೂ ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು. ನೆರೆದಿದ್ದ ಎಲ್ಲ ಸಮಾನ ಮನಸ್ಕರು, ಮಕ್ಕಳು ಹಾಗೂ ಸ್ಥಳೀಯರು, ಕಲಾವಿದರು ಮಗುವಿಗೆ ಶುಭಾಷಯಗಳನ್ನು ತಿಳಿಸಿ ಹಾರೈಸಿದರು. ರುಚಿಯಾದ ಭೋಜನ ಸವಿದು ತೆರಳಿದರು.

ಈ ಸುದ್ದಿ ಓದಿದ್ದೀರಾ? ಬೆಳಗಾವಿ : ಸಾರಿಗೆ ಇಲಾಖೆಗೆ ಒಂದೇ ದಿನ ಗಡುವು: ನಾಳೆ ಬಸ್ ಬಿಟ್ಟಿಲ್ಲ ಎಂದರೆ ವಿದ್ಯಾರ್ಥಿಗಳಿಂದ ಪ್ರತಿಭಟನೆಯ ಎಚ್ಚರಿಕೆ

ಕೌಶಲ್ಯ ತರಬೇತಿಗಾರ್ತಿ ಅಮೃತ, ಬಿ ಟಿವಿ ವರದಿಗಾರ ಆನಂದ, ಟಿವಿ 9 ವರದಿಗಾರರಾದ ಮಹೇಶ್, ಸೋಮಶೇಖರ್‌, ಪೀಪಲ್‌ ಮೀಡಿಯಾ ಕ್ಯಾಮೆರಾ ಪರ್ಸನ್‌ ವಿಜಯ್‌, ಅಭಿ, ವರದಿಗಾರ್ತಿ ಶ್ರವಂತಿ, ಕಲಾವಿದ ಶ್ರೀನಿವಾಸ್, ಅಡವಿ ಸಂಸ್ಥಾಪಕ
ಹನುಮಂತ, ಸ್ಪಂದನ ಸಂಸ್ಥಾಪಕಿ ಮಾಲಿನಿ ಅಂತರ್ಜನಂ, ಸ್ಪಂದನ ಒಡನಾಡಿಗಳಾದ ಅಶ್ವಥ, ಕಾವ್ಯ, ಆಶಾ, ಸಿಐಟಿಯು ರಾಜ್ಯ ಕಾರ್ಯದರ್ಶಿ ರಾಘವೇಂದ್ರ, ಸಿಐಟಿಯು ರಾಮನಗರ ತಾಲೂಕು ಕಾರ್ಯದರ್ಶಿ ಇಬ್ರಾಹಿಂ, ಕ್ರಿಸ್ಟಲ್ ಗ್ರಾನೈಟ್ ಮತ್ತು ಮಾರ್ಬಲ್ ಪ್ರೈವೇಟ್ ಲಿಮಿಟೆಡ್ ಕಾರ್ಮಿಕರ ಸಂಘದ ಅಧ್ಯಕ್ಷ ಗೋಪಾಲ್, ರಾಕೇಶ್, ಕಲಾವಿದರಾದ ಚೆಲುವರಾಜು, ಮಂಟೇದ ಲಿಂಗಯ್ಯ, ವೀರ ಸ್ವಾಮಿ, ತರುಣ್, ಗೋವಿಂದರಾಜು ಸೇರಿದಂತೆ ನೆರೆಹೊರೆಯವರಾದ ವರಲಕ್ಷ್ಮಿ, ಪ್ರಮೀಳಾ, ಶಾಂತಮ್ಮ, ವೀಣಾ, ಸ್ವಾಮಿ ಸೇರಿದಂತೆ ಪುಟಾಣಿ ಮಕ್ಕಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...