ರಾಮನಗರ | ‘ಆತ್ಮಹತ್ಯೆ ತಡೆ’ಗಟ್ಟುವುದು ನಾಗರಿಕ ಸಮಾಜದ ಕರ್ತವ್ಯ: ಪದ್ಮರೇಖಾ ಎಸ್

Date:

ಅಸಹಾಯಕತೆ ಮತ್ತು ನಿರಾಶಾ ಮನೋಭಾವದ ಮನುಷ್ಯರು ತಮ್ಮ ಜೀವನವನ್ನು ಕೊನೆಗೊಳಿಸಿಕೊಳ್ಳಬೇಕೆಂದು ನಿರ್ಧರಿಸುವ ಅಂತಿಮ ಹಂತದ ಯೋಚನೆ ಅಥವಾ ಹಠಾತ್ ವರ್ತನೆ ಆತ್ಮಹತ್ಯೆಯಾಗಿರುತ್ತದೆ. ಹಾಗಾಗಿ ಜನರನ್ನು ಜಾಗೃತಿಗೊಳಿಸಲು ಸೆಪ್ಟಂಬರ್‌ 10ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಆತ್ಮಹತ್ಯೆ ತಡೆಗಟ್ಟುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಅರೋಗ್ಯ ಇಲಾಖೆಯ ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತೆ ಪದ್ಮರೇಖಾ ಎಸ್ ಅಭಿಪ್ರಾಯಪಟ್ಟರು.

ಬೆಂಗಳೂರು ದಕ್ಷಿಣ(ರಾಮನಗರ) ಜಿಲ್ಲಾ ಮಾನಸಿಕ ಅರೋಗ್ಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ಕುರಿತು ಪಪತ್ರಿಕೆ ಪ್ರಕಟಣೆಗೆ ತಿಳಿಸಿದ್ದು, “ಆತ್ಮಹತ್ಯೆ ಎಂಬುದು ಪ್ರಪಂಚದ ಎಲ್ಲ ದೇಶಗಳನ್ನು ಭಾದಿಸುತಿರುವ ಸಾಮಾಜಿಕ ಸಮಸ್ಯೆಯಾಗಿದೆ. ಅಲ್ಲದೆ ದಿನದಿಂದ ದಿನಕ್ಕೆ ಆತ್ಮಹತ್ಯೆ ಉಲ್ಬಣಿಸುತ್ತಿದ್ದು, ಭಾರತದಲ್ಲಿಯೂ ಕೂಡ ಸಾಮಾಜಿಕ ಪಿಡುಗಾಗಿದೆ. ಎಲ್ಲ ವಯೋಮಾನದವರು ಸಮುದಾಯ, ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಎಂಬ ಭೇದವಿಲ್ಲದೆ ಸಾರ್ವತ್ರಿಕವಾಗಿ ಆತ್ಮಹತ್ಯೆ ಎಲ್ಲರನ್ನೂ ಭಾದಿಸುತ್ತಿರುವ ಸಾಮಾಜಿಕ ಪಿಡುಗಾಗಿದೆ” ಎಂದು ತಿಳಿಸಿದ್ದಾರೆ.

“ಪ್ರತಿ ವರ್ಷ ನಮ್ಮ ದೇಶದಲ್ಲಿ ಒಂದು ಲಕ್ಷಕ್ಕಿಂತಲೂ ಅಧಿಕವಾದ ಆತ್ಮಹತ್ಯೆಯಿಂದ ಸಾವುಗಳು ಸಂಭವಿಸುತ್ತವೆ.
ಕೌಟುಂಬಿಕ ಸಮಸ್ಯೆಗಳು ಆತ್ಮಹತ್ಯೆಗೆ ಮೊದಲ ಪ್ರಮುಖ ಕಾರಣವಾಗಿದೆ. ನಂತರದಲ್ಲಿ ದೀರ್ಘಕಾಲಿಕ ಕಾಯಿಲೆಗಳು, ಮಾದಕ ದ್ರವ್ಯ, ಮಾದಕ ವಸ್ತು ವ್ಯಸನ, ವೈವಾಹಿಕ ಸಮಸ್ಯೆಗಳು, ಪ್ರೀತಿ ಪ್ರೇಮ ಪ್ರಕರಣಗಳು, ಆರ್ಥಿಕ ಸಂಕಷ್ಟಗಳು, ನಿರುದ್ಯೋಗ ಪರೀಕ್ಷೆಗಳಲ್ಲಿ ವಿಫಲತೆ, ಪ್ರೀತಿ ಪಾತ್ರರ ಸಾವು, ಔದ್ಯೋಗಿಕ ಸಮಸ್ಯೆಗಳು, ಆಸ್ತಿ ವಿವಾದಗಳು, ಬಡತನ, ಸಮಾಜದಲ್ಲಿ ತನ್ನ ಗೌರವಕ್ಕೆ ಧಕ್ಕೆ ಬರುವುದು, ವಿವಾಹೇತರ ಸಂಬಂಧಗಳು ಮತ್ತು ಇತರೆ ಅಂಶಗಳು ಆತ್ಮಹತ್ಯೆಗೆ ಕಾರಣಗಳೆಂದು ಗುರುತಿಸಲಾಗಿದೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಸಾಯುವ ಬಗ್ಗೆ ಪದೇಪದೆ ಮಾತನಾಡುವುದು, ಸಾಯಲು ಕಾರಣಗಳನ್ನು ಹುಡುಕುವುದು ಅತಿಯಾದ ನಿರಾಶಾವಾದ ಅಥವಾ ನಾನು ಬದುಕಲು ಕಾರಣಗಳೇ ಇಲ್ಲವೆಂದು ಭಾವಿಸುವುದು, ಕುಟುಂಬಕ್ಕೆ ಮತ್ತು ಸಮಾಜಕ್ಕೆ ಹೊರೆಯಾಗಿದ್ದೇನೆಂಬ ಭಾವನೆ, ಮದ್ಯಪಾನ ಮತ್ತು ಮಾದಕ ವಸ್ತುಗಳ ಹೆಚ್ಚಾದ ಬಳಕೆ, ಅತಿ ಕಡಿಮೆ ಅಥವಾ ಹೆಚ್ಚು ನಿದ್ದೆ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಮಾನಸಿಕವಾಗಿ ಕುಗ್ಗಿದಂತಹ ಮತ್ತು ತಾನು ಒಂಟಿ ಎಂಬ ಭಾವನೆ, ಮರಣಪೂರ್ವ ಪತ್ರ(ಡೆತ್ ನೋಟ್) ಬರೆದಿಡುವುದು, ವಿಲ್ ಮಾಡುವುದು ಮತ್ತು ಇತರೆ ಅಸಾಮಾನ್ಯ ವರ್ತನೆಗಳು, ಕುಟುಂಬದಲ್ಲಿನ ಆತ್ಮಹತ್ಯಾ ಸಾವುಗಳು ಮತ್ತು ಇತರೆ ನಡವಳಿಕೆಯಲ್ಲಿನ ಬದಲಾವಣೆಗಳು ಆತ್ಮಹತ್ಯೆ ಯೋಚನೆಯ ಎಚ್ಚರಿಕೆ ಚಿಹ್ನೆಗಳಾಗಿರುತ್ತವೆ” ಎಂದು ತಿಳಿಸಿದರು.

“ನ್ಯಾಷನಲ್  ಕ್ರೈಂ ರೆಕಾರ್ಡ್ಸ್ ಬ್ಯುರೋ ಆತ್ಮಹತ್ಯೆಗೆ ಸಂಬಂಧಿಸಿದಂತೆ 2022ರಲ್ಲಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಇತ್ತೀಚಿನ ಅಂಕಿ ಅಂಶಗಳಾಗಿದ್ದು, ಇದರ ಪ್ರಕಾರ 2022ರ ವರ್ಷದಲ್ಲಿ ನಮ್ಮ ದೇಶದಲ್ಲಿ 1,70,924 ಆತ್ಮಹತ್ಯಾ ಸಾವುಗಳು ಸಂಭವಿಸಿವೆ. ಈ ಸಂಖ್ಯೆಯು ಪೊಲೀಸ್ ಠಾಣೆಗಳಲ್ಲಿ ದಾಖಲಾದ ಆತ್ಮಹತ್ಯಾ ಪ್ರಕಾರಣಗಳಾಗಿದ್ದು, ಸಾಮಾಜಿಕ ಮತ್ತು ಕೌಟುಂಬಿಕ ಕಾರಣಗಳಿಂದ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗದಿರುವ ಅದೆಷ್ಟೋ ಆತ್ಮಹತ್ಯೆ ಸಾವುಗಳನ್ನು ನಾವು ಕಾಣಬಹುದಾಗಿದೆ. ಆತ್ಮಹತ್ಯೆಯು ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಕಂಡುಬರುತ್ತದೆ” ಎಂದರು.

“ಅತಿಹೆಚ್ಚು ಆತ್ಮಹತ್ಯೆ ಎಂದರೆ 22,746 ಆತ್ಮಹತ್ಯೆಗಳು ಮಹಾರಾಷ್ಟ್ರದಲ್ಲಿ ವರದಿಯಾಗಿದ್ದು, 13,606 ಆತ್ಮಹತ್ಯೆ ಪ್ರಕರಣಗಳು ವರದಿಯಾಗುವ ಮೂಲಕ ಕರ್ನಾಟಕ ಕೂಡ ನಾಲ್ಕನೇ ಸ್ಥಾನದಲ್ಲಿದೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. 18 ರಿಂದ 45 ವರ್ಷದ ವಯೋಮಾನದವರಲ್ಲಿ ಅತಿಹೆಚ್ಚು ಮತ್ತು ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಾಗಿ ಕಂಡುಬರುತ್ತದೆ. 2022ನೇ ವರ್ಷದಲ್ಲಿ 18ರಿಂದ 45 ವರ್ಷ ವಯೋಮಾನದ 80,288 ಪುರುಷರು ಮತ್ತು 33,145 ಮಹಿಳೆಯರ ಆತ್ಮಹತ್ಯಾ ಸಾವುಗಳು ದೇಶಾದ್ಯಂತ ವರದಿಯಾಗಿರುತ್ತದೆ. ಖಿನ್ನತೆಯಿಂದ ಬಳಲುತ್ತಿರುವವರಲ್ಲಿ ಆತ್ಮಹತ್ಯೆಯ ಆಲೋಚನೆಯೂ ಸಾಮಾನ್ಯರಿಗಿಂತ 20 ಪಟ್ಟು ಹೆಚ್ಚಿರುತ್ತದೆ. ಆದ್ದರಿಂದ ಖಿನ್ನತೆಯನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಿ ಆಪ್ತಸಮಾಲೋಚನೆ ಮತ್ತು ಚಿಕಿತ್ಸೆ ಪಡೆದುಕೊಳ್ಳುವುದು ಮುಖ್ಯವಾಗಿರುತ್ತದೆ” ಎಂದು ತಿಳಿಸಿದರು.

ವಿದ್ಯಾರ್ಥಿಗಳಲ್ಲಿ ಹೆಚ್ಚಿದ  ಆತ್ಮಹತ್ಯಾ ಪ್ರವೃತ್ತಿ

“ಹದಿಹರೆಯದ ವಯಸ್ಸಿನಲ್ಲಿ ನೈಸರ್ಗಿಕವಾಗಿ ದೇಹದಲ್ಲಿ ಉಂಟಾಗುವ ಹಾರ್ಮೋನ್‌ಗಳ ವ್ಯತ್ಯಾಸದೊಂದಿಗೆ ಬಾಹ್ಯ ಅಂಶಗಳು ಸೇರಿದಾಗ ಆತ್ಮಹತ್ಯೆಗೆ ಪ್ರಚೋದನೆ ಉಂಟಾಗುತ್ತದೆ. ಉತ್ತಮ ಅಂಕಗಳೊಂದಿಗೆ ಉತ್ತಮ ಶ್ರೇಣಿಯ ಫಲಿತಾಂಶ ಪಡೆಯಬೇಕೆಂದು ಪೋಷಕರು ಹಾಕುವ ಒತ್ತಡ, ಶಾಲೆಯಲ್ಲಿ ಉಂಟಾಗುವ ಒತ್ತಡ, ಸ್ನೇಹಿತರ ಗುಂಪಿನಿಂದ ಉಂಟಾಗುವ ಒತ್ತಡ, ದೋಷಪೂರಿತ ಶಿಕ್ಷಣ ವ್ಯವಸ್ಥೆ, ಇತರೆ  ಪಠ್ಯೇತರ ಚಟುವಟಿಕೆಗಳ ಕೊರತೆ, ಪೋಷಕತ್ವದಲ್ಲಿನ ದೋಷಗಳು, ಕೌಶಲ್ಯದ ಕೊರತೆ, ಕೀಳರಿಮೆ, ಆತ್ಮವಿಶ್ವಾಸದ ಕೊರತೆ, ಹೆಚ್ಚುತ್ತಿರುವ ಮೊಬೈಲ್ ವ್ಯಸನ ಇಂತಹ ಹಲವು ಕಾರಣಗಳು ವಿದ್ಯಾರ್ಥಿಗಳಲ್ಲಿ ಒತ್ತಡ, ಖಿನ್ನತೆ, ಆತಂಕದಂತಹ ಮಾನಸಿಕ ಸಮಸ್ಯೆಗಳು ಹೆಚ್ಚಾಗಲು ಕಾರಣವಾಗುತ್ತದೆ ಮತ್ತು ಇದು ಆತ್ಮಹತ್ಯೆಗೆ ಪ್ರಚೋದನೆಯಾಗುತ್ತಿದೆ” ಎಂದು ಹೇಳಿದರು.

“ಈ ಹಿನ್ನೆಲೆಯಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಎಲ್ಲ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ತರಬೇತಿ ಕೇಂದ್ರಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮಾನಸಿಕ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುವ ನೀತಿಗಳನ್ನು ರೂಪಿಸಬೇಕೆಂದು ಮತ್ತು ಮಾನಸಿಕ ಆರೋಗ್ಯ ಬೆಂಬಲ ಹಾಗೂ ಸುರಕ್ಷಿತ ವಾತಾವರಣ ತಾರತಮ್ಯ ರಹಿತ ಶಿಕ್ಷಣ ನೀಡುವ ಕುರಿತು ನೀತಿಗಳನ್ನು ರೂಪಿಸಬೇಕೆಂದು ಆದೇಶಿಸಿದೆ. ಅದರಂತೆ ನಮ್ಮ ರಾಜ್ಯದಲ್ಲಿಯೂ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದಲ್ಲಿ ಶಿಕ್ಷಣ, ಆರೋಗ್ಯ, ಮಕ್ಕಳ ರಕ್ಷಣಾ ಘಟಕ ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಒಳಗೊಂಡ ಮೇಲ್ವಿಚಾರಣಾ ಸಮಿತಿಯನ್ನು ರಚಿಸುವ ಮೂಲಕ ಆತ್ಮಹತ್ಯೆ ತಡೆಗಟ್ಟುವ ಕಾರ್ಯತಂತ್ರಗಳನ್ನು ಶಿಕ್ಷಣ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ನವೆಂಬರ್‌ನಲ್ಲಿ ಚಾಲುಕ್ಯ ಉತ್ಸವ ಆಯೋಜನೆ: ಸಚಿವ ಆರ್‌ ಬಿ ತಿಮ್ಮಾಪೂರ

“ಆತ್ಮಹತ್ಯೆಯನ್ನು ತಡೆಗಟ್ಟಲು ಯಾವುದೇ ಪೂರ್ವಗ್ರಹಗಳಿಲ್ಲದೆ ವ್ಯಕ್ತಿಯ ಮಾತುಗಳನ್ನು ಆಲಿಸುವುದು, ಯಾವುದೇ ರೀತಿಯ ಆತ್ಮಹತ್ಯೆ ಯೋಚನೆಯನ್ನು ಗುರುತಿಸಿ ಗಂಭೀರವಾಗಿ ಪರಿಗಣಿಸುವುದು, ಆತ್ಮಹತ್ಯೆ ಆಲೋಚನೆಗಳಿಂದ ಹೊರಬರಲು ದೊರೆಯಬಹುದಾದ ಸಹಾಯ ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡುವುದು, ಈ ಆಲೋಚನೆಯೂ ಕ್ಷಣಿಕವಾದದ್ದು ಮತ್ತು ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಹೊರಬರಬಹುದೆಂದು ಅರ್ಥ ಮಾಡಿಸುವುದು, ಸಾಮಾಜಿಕ ಬೆಂಬಲ ನೀಡುವುದು, ಮನೋರೋಗ ತಜ್ಞರು ಮತ್ತು ಮಾನಸಿಕ ಆರೋಗ್ಯ ವೃತ್ತಿಪರರಿಂದ ಮಾರ್ಗದರ್ಶನ ಚಿಕಿತ್ಸೆ ಪಡೆಯಲು ಸಹಾಯ ಮಾಡುವುದು ನಾಗರಿಕ ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ. ಭಾರತದಾದ್ಯಂತ ಯಾವುದೇ ರೀತಿಯ ಮಾನಸಿಕ ಆರೋಗ್ಯ ಸಲಹೆ ಮತ್ತು ಮಾಹಿತಿಗಾಗಿ ಮಾನಸಿಕ ಆರೋಗ್ಯ ಸಹಾಯವಾಣಿ ಲಭ್ಯವಿದ್ದು, 19 ಭಾಷೆಗಳಲ್ಲಿ ಕಾರ್ಯ ನಿರ್ವಹಿಸುವ ಶುಲ್ಕರಹಿತ ದೂರವಾಣಿ ಸಂಖ್ಯೆ 14416 ಸಂಖ್ಯೆಗೆ ಯಾವುದೇ ಸಮಯದಲ್ಲಾದರೂ ಕೂಡ ಕರೆ ಮಾಡಬಹುದು” ಎಂದು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...