ಇತ್ತೀಚಿನ ಅಮೆರಿಕಾ ಭಾರತ ನಡುವಿನ ಒಪ್ಪಂದ ರೈತರ ಪಾಲಿಗೆ ಮರಣಶಾಸನವಾಗಿದೆ: ಜಗಜೀತ್‌ಸಿಂಗ್

Date:

ಚಿಕ್ಕಬಳ್ಳಾಪುರ: ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸದಾಗಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಮಾಡಿರುವುದು ರೈತಾಪಿ ವರ್ಗದ ಪಾಲಿಗೆ ಆಘಾತಕಾರಿ ವಿಚಾರವಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಜಗಜೀತ್ ಸಿಂಗ್ ದಲ್ಲೇವಾಲಾ ಅತಂಕ ವ್ಯಕ್ತಪಡಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಕಾನೂನು ಜಾರಿಗಾಗಿ ಕನ್ಯಾ ಕುಮಾರಿಯಿಂದ ಕಾಶ್ಮೀರದವರೆಗೆ ತಾವು ನಡೆಸುತ್ತಿರುವ ರೈತ ಜಾಗೃತಿ ಯಾತ್ರೆಗೆ ಚಿಕ್ಕಬಳ್ಳಾಪುರ ದಲ್ಲಿ ರೈತಮುಖಂಡರು ನೀಡಿದ ಅಭೂತಪೂರ್ವ ಸ್ವಾಗತವನ್ನು ಸ್ವೀಕರಿಸಿದ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸದಾಗಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಮಾಡಿರುವುದು ಆಘಾತಕಾರಿ ವಿಚಾರವಾಗಿದೆ.ಈ ಒಪ್ಪಂದ ರೈತವರ್ಗದ ಬೆನ್ನು ಮೂಳೆ ಮುರಿಯುವ ಶಾಸನವಾಗಿದ್ದು ದೇಶವಾಸಿಗಳನ್ನು ಅಪಾಯ ಕಾರಿ ಆಹಾರ ಸಂಸ್ಕೃತಿಗೆ ಒಗ್ಗಿಸಲು ಹೊರಟಿರುವ ರೈತರ ಪಾಲಿನ ಮರಣ ಶಾಸನವಾಗಿದೆ. ಇದನ್ನು ವಿರೋಧಿಸಿ ದೇಶದ ರೈತರು ಫೆ.15ನೇ ತಾರೀಕು ಹಳ್ಳಿ ಹಳ್ಳಿಗಳಲ್ಲಿ ಅಮೆಕಾದ ಒಪ್ಪಂದ ಪತ್ರ ಸುಡುವ ಚಳುವಳಿ ನಡೆಸಬೇಕು ಎಂದು ಕರೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಾಜಕೀಯೇತರ ರೈತ ಸಂಘಟನೆಯಾದ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ)ದ ರಾಷ್ಟ್ರೀಯ ನೇತಾರ ಜಗಜಿತ್ ಸಿಂಗ್ ದಲ್ಲೆವಾಲ ಮಾತನಾಡಿ ಕಳೆದ ವರ್ಷ ದೆಹಲಿ ಗಡಿಯಲ್ಲಿ ಕೊರವ ಚಳಿಯಲ್ಲಿ ರೈತರ ಒಳಿತಿಗಾಗಿ ಸ್ವಾಮಿನಾಥ್‌ನ್ ವರದಿ ಜಾರಿಗೆ ಆಗ್ರಹಿಸಿ 131 ದಿವಸ ಉಪವಾಸ ನಡೆಸಿದ ಪರಿಣಾಮವಾಗಿ ಸರ್ವೋಚ್ಛ ನ್ಯಾಯಾಲಯವು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ನವಾಬ್ಸಿಂಗ್ ನೇತೃತ್ವದ ಸಮಿತಿಯು ರೈತರ ಪರವಾಗಿ ವರದಿ ನೀಡಿದೆ.

ಈ ವೇಳೆ ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ 5 ಬಾರಿ ರೈತಮುಖಂಡರೊಂದಿಗೆ ಸಭೆಯನ್ನು ನಡೆಸಿದ ಕೇಂದ್ರ ಸಚಿವ ಪಿಯೂಷ್ ಗೋಯಿಲ್ 5 ಕೃಷಿ ಉತ್ಪನ್ನಗಳಿಗೆ ಮಾತ್ರ ಎಂಎಸ್‌ಪಿ ಖಾತರಿ ಕೊಡುತ್ತೇನೆ ಎಂದು ಹೇಳಿದರೂ ನಾವು ಒಪ್ಪಲಿಲ್ಲ. ಬದಲಿಗೆ ರೈತ ಬೆಳೆಯುವ ಸಮಗ್ರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲು ಒತ್ತಾಯಿಸಿದೆವು. ಈಗಲೂ ಮ್ಮ ಬದ್ದತೆಯಲ್ಲಿ ಬದಲಾವಣೆ ಇಲ್ಲ ಎಂದು ಸ್ಮರಿಸಿದರು.

ಹಿಂದೆ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಡಾ. ಸ್ವಾಮಿನಾಥನ್ ಅಧ್ಯಕ್ಷತೆಯಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸಮಿತಿ ರಚಿಸಿತು. ಈ ಸಮಿತಿ ತನ್ನ ವರದಿಯನ್ನು 2007ರಲ್ಲಿ ಸರಕಾರಕ್ಕೆ ಸಲ್ಲಿಸಲಾಗಿತ್ತು.ಆದರೂ ವರದಿಯನ್ನು ಜಾರಿ ಮಾಡುವಲ್ಲಿ ಕಾಂಗ್ರೆಸ್ ಸೋತಿದೆ.

2014ರಲ್ಲಿ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತರುವ ಭರವಸೆ ನೀಡಿ ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದರು. 3ನೇ ಅವಧಿಗೆ ಪ್ರಧಾನಿ ಆದರೂ ಸ್ವಾಮಿನಾಥನ್ ವರದಿ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ. ಹೀಗಾಗಿ ಮಾತುಕೊಟ್ಟು ಸೋತ ಸರ್ಕಾರವನ್ನು ಎಚ್ಚರಿಸಲು ದೇಶಾದ್ಯಂತ ರೈತ ಜಾಗೃತಿ ಯಾತ್ರೆ ಮಾಡುತ್ತಿದ್ದೇವೆ. ಹಳ್ಳಿ ಹಳ್ಳಿಗಳಲ್ಲಿ ರೈತರಿಂದ ಸಹಿ ಸಂಗ್ರಹ ಮಾಡಿಸಿ ಅದನ್ನು ಮಾರ್ಚ್ 19ರಂದು ದೆಹಲಿಯಲ್ಲಿ ರಾಮಲೀಲಾ ಮೈದಾನದಲ್ಲಿ ಬೃಹತ್ ರೈತರ ಸಮಾವೇಶ ನಡೆಸಿ ಪ್ರಧಾನಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಮಾ.19ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರಮಾಣದಲ್ಲಿ ರೈತರ ಸಮಾವೇಶ ನಡೆಸಿ ದೇಶದ ಉದ್ದಗಲಕ್ಕೂ ರೈತರು ಸಹಿ ಮಾಡಿ ನೀಡಿರುವ ಮನವಿ ಪತ್ರವನ್ನು ಪ್ರಧಾನಿಗಳಿಗೆ ಸಲ್ಲಿಸಿ ಎಂಎಸ್ಪಿ ಕಾನೂನು ಜಾರಿ ಮಾಡಲು ಒತ್ತಾಯಿಸಲಾಗುವುದು. ಈ ಹೋರಾಟದಲ್ಲಿ ದೇಶದ ಎಲ್ಲಾ ರೈತರು ಭಾಗಿಯಾಗಬೇಕು ಎಂದು ಮನವಿ ಮಾಡಿದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ರೈತಸ್ವಾವಲಂಭಿಯಾಗಿ ಬದುಕು ಕಟ್ಟಿಕೊಳ್ಳಲಾಗದೆ ಕೃಷಿಯಿಂದ ವಲಸೆ ಹೋಗುತ್ತಿದ್ದಾರೆ.ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆದೊರೆಯದೆ ಸಾಲಗಾರನಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. ಇವೆಲ್ಲಾ ಬೆಳವಣಿಗೆ ನೋಡಿದರೆ ಕೃಷಿ ಕ್ಷೇತ್ರ ಅವನತಿಯತ್ತ ಸಾಗುತ್ತಿದೆ ಎಂದು ಹೇಳಲು ನೋವಾಗುತ್ತಿದೆ ಎಂದರು.

ದಲ್ಲೆವಾಲಾ ಅವರ ನೇತೃತ್ವದಲ್ಲಿ ದೇಶಾದ್ಯಂತ ಎಂಎಸ್‌ಪಿ ಜಾರಿಗೆ ಒತ್ತಾಯಿಸಿ ರೈತ ಜಾಗೃತಿ ಯಾತ್ರೆ ಕಾರ್ಯಕ್ರಮ ನಡೆಯುತ್ತಿದೆ. ಇದರ ನಡುವೆ ಭಾರತ ಸರಕಾರ ಅಮೆರಿಕಾ ಜತೆಗೂಡಿ ಆರ್ಥಿಕ ಒಪ್ಪಂದ ಮಾಡಿಕೊಂಡಿದೆ. ಇದು ನಮ್ಮ ರೈತಾಪಿ ವರ್ಗದ ಪಾಲಿಗೆ ಅಪಾಯಕಾರಿಯಾದ ಒಪ್ಪಂದವಾಗಿದ್ದು ಕೇಂದ್ರ ಸರಕಾರಕ್ಕೆ ತನ್ನ ತಪ್ಪಿನ ಅರಿವಾಗಬೇಕಾದರೆ ಫೆ.15ರಂದು ಒಪ್ಪಂದ ಪತ್ರವನ್ನು ಹಳ್ಳಿ ಹಳ್ಳಿಗಳಲ್ಲಿ ರೈತರು ಬಹಿರಂಗವಾಗಿ ಸುಡಬೇಕು ಎಂದು ಕರೆ ನೀಡಿದರು.

ಈ ಒಪ್ಪಂದವನ್ನು ನಾವು ಒಪ್ಪಿದ್ದೇ ಆದಲ್ಲಿ ಭಾರತ ದೇಶದ ಶೇ 65 ರಷ್ಟಿರುವ ರೈತರು ಬೆಳೆಯುವ ಬೆಳೆಗಳಿಗೆ, ಹಾಲಿನ ಉತ್ಪನ್ನಗಳು, ತರಕಾರಿ ಹಣ್ಣುಗಳಿಗೆ ವೈಜ್ಞಾನಿಕ ಬೆಲೆ ಸಿಗುವುದಿಲ್ಲ.ಇದನ್ನು ವಿರೋಧಿಸಿ ಬೇರು ಮಟ್ಟದಲ್ಲಿಯೇ ಹೊಸಕಿ ಹಾಕಬೇಕಿದೆ. ಎರಡನೆಯದಾಗಿ ಕೇಂದ್ರವು ಎಂಎಸ್‌ಪಿ ಗ್ಯಾರೆಂಟಿ ಕಾನೂನು ಜಾರಿ ಮಾಡಬೇಕು.ಹೀಗೆ ಮಾಡುವುದಾದರೆ ಎಲ್ಲಾ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ದೊರೆಯಲಿದೆ.ರೈತರ ಸಾಲ ಯಾಕೆ ಪಡೆಯುತ್ತಾನೆ ಎಂದರೆ ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರೆಯುವುದಿಲ್ಲ. ಹೀಗಾಗಿ ಒಂದು ವರ್ಷಕ್ಕೆ ದೇಶದ ರೈತರಿಗೆ 15 ಲಕ್ಷಕೋಟಿ ರೂಪಾಯಿ ಬೆಳೆ ನಷ್ಟವಾಗುತ್ತಿದೆ. ಇದೆಲ್ಲಾ 140 ಕೋಟಿ ಜನಕ್ಕೆ ಬೇಕಾದ ಆಹಾರ ಬೆಳೆದುಕೊಡುವ ಕಾರಣಕ್ಕೆ ಆಗಿರುವ ನಷ್ಟದ ಬಾಬತ್ತು ಆಗಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ನಾಟಕ ಮಾಡುತ್ತಾ ತಮಗೆ ಬೇಕಾದ ಕಾಯ್ದೆ ಕಾನೂನು ಜಾರಿ ಮಾಡುತ್ತಿವೆ.ಇಷ್ಟಾದರೂ ರೈತರು ಸುಮ್ಮನೆ ಕೂತರೆ ಅವರ ಎದೆಗಳ ಮೇಲೆ ಸಮಾಧಿ ಕಟ್ಟುವುದು ಖಚಿತ ಎಂದರು.ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ನಮ್ಮೊಂದಿಗಿಲ್ಲ. ಆದರೆ ರೈತಾಪಿಗಳಿಗಾಗಿ ತಮ್ಮಿಡೀ ಬದುಕನ್ನು ಮೀಸಲಾಗಿಟ್ಟಿರುವ ದಲ್ಲೇವಾಲ ರೈತರ ಪಾಲಿನ ಮಹಾತ್ಮ ರಾಗಿದ್ದಾರೆ. ಇವರ ಉಪವಾಸ ಸತ್ಯಾಗ್ರಹ ಮದ್ಯ ಪ್ರವೇಶಿಸಿ ರೈತರ ಸಮಸ್ಯೆಗಳಿಗೆ ಪರಿಹಾರ ಕಾಣಿಸುವ ಸಲುವಾಗಿ ಸಮಿತಿ ರಚನೆ ಮಾಡಿತು. ಸರಕಾರ ಇನ್ನೂತನಕ ರೈತರಪರವಾದ ಎಂಎಸ್‌ಪಿ ಕಾನೂನು ಜಾರಿಗೆ ಅಹೋರಾತ್ರಿ ಹೋರಾಟ ನಡೆಸುತ್ತಿದ್ದಾರೆ. ಅವರೊಟ್ಟಿಗೆ ಕುರುಬೂರು ಶಾಂತಕುಮಾರ್ ಸಂಘಟನೆ ಇರಲಿದೆ ಎಂದರು.

ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಬೇಕು. ಏಕೆಂದರೆ ಕಾರ್ಪೊರೇಟ್ ಕಂಪನಿಗಳ ಲಕ್ಷಾಂ ತರ ಕೋಟಿ ಮನ್ನಾ ಮಾಡಿವ ಸರಕಾರಕ್ಕೆ ರೈತರ ಮೇಲಿನ ಋಣ ತೀರಿಸುವುದು ದೊಡ್ಡದಲ್ಲ. ರೈತರ ಸಮಾವೇಶದಲ್ಲಿ ಭಾಗಿಯಾಗಲು ದೆಹಲಿಗೆ ಹೋಗುವಾಗ ಅಪಘಾತಕ್ಕೆ ತುತ್ತಾದೆ.ಶಾಂತಕುಮಾರ್ ಉಳಿಯುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು. ಆದರೆ ನಾನು ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದು ಉಳಿದು ಹೋರಾಟದಲ್ಲಿ ಭಾಗಿಯಾಗಿದ್ದೇನೆ.ನನ್ನ ಕೊನೆ ಉಸಿರು ಇರುವವರೆಗೂ ರೈತರಿಗಾಗಿ ಹೋರಾಟ ಮಾಡುತ್ತೇನೆ ಎಂದರು.

ಇದನ್ನು ಓದಿದ್ದೀರಾ..? ಕಾರ್ಮಿಕರ ವಿರೋಧಿ ನೀತಿಗಳ ವಿರುದ್ಧ ಬೃಹತ್ ಪ್ರತಿಭಟನೆ

ಕಾರ್ಯಕ್ರಮಕ್ಕೂ ಮೊದಲು ದಲ್ಲೆವಾಲಾ ಅವರನ್ನು ನಾದಸ್ವರದೊಂದಿಗೆ ಅಂಬೇಡ್ಕರ್ ಭವನ ದವರೆಗೆ ಮೆರವಣಿಗೆಯಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಕರೆ ತರಲಾಯಿತು.

ಈ ವೇಳೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು, ಬರಡನಪುರ ನಾಗರಾಜ್, ಸಂಘಟನೆಯ ಜಿಲ್ಲಾಧ್ಯಕ್ಷ ಶ್ರೀನಿವಾಸಲು, ಉಪಾಧ್ಯಕ್ಷ ಸತ್ಯನಾರಾಯಣ,ಕಾರ್ಯದರ್ಶಿ ಬೈರೆಡ್ಡಿ, ಕಾರ್ಯಾಧ್ಯಕ್ಷ ರಾಜಣ್ಣ ಮಂಡಿಬೆಲೆ, ಮಹಿಳ ಸಂಘದ ಅಧ್ಯಕ್ಷೆ ಶಾಂತಮ್ಮ, ಗೌರವಾಧ್ಯಕ್ಷ ಟಿ.ಆರ್.ಕೃಷ್ಣಪ್ಪ, ದಾವಣಗೆರೆ ಬಲ್ಲೂರು ರವಿಕುಮಾರ್, ಬೆಳಗಾವಿ ಸುರೇಶ್ ಪಾಟೀಲ್, ತುಮಕೂರು ಶಿವಕುಮಾರ್, ಶಿವಮೊಗ್ಗ ದೇವಕುಮಾರ್, ಅಭಿಮನ್ಯು ಕೋಹರ್, ಇಂದ್ರಜಿತ್, ಎಂ.ಪಿ.ಸಹರನ್,ಸೋನು ಪಂಜಾಬ್, ಅರುಣ್‌ಪಟೇಲ್, ಸಲಂದರ್ ಸಿಂಗ್. ಚಿಂತಾಮಣಿ ತಾಲೂಕು ಅಧ್ಯಕ್ಷ ವೆಂಕಟರಾಮಯ್ಯ, ಕಾರ್ಯದರ್ಶಿ ಶ್ರೀರಾಮರೆಡ್ಡಿ, ಮಹಿಳಾ ಸಂಘದ ಅಧ್ಯಕ್ಷೆ ಗುಟ್ಟಂಪಲ್ಲಿ ಶಾಂತಮ್ಮ, ಪ್ರಭಾವತಿ, ಗಡಿನಾಡು ರೈತ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್, ತಾಲೂಕು ಅಧ್ಯಕ್ಷ ರಾಮಕೃಷ್ಣ,ಗೌರವಾಧ್ಯಕ್ಷ ಮೈಲಪನಹಳ್ಳಿ ರಾಜಶೇಖರ್ ಮತ್ತಿತರರು ಇದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...