ಆರ್‌ಎಸ್‌ಎಸ್, ಬಿಜೆಪಿ ಚಿಂತನೆಗಳಿಗೆ ಕಲ್ಯಾಣ ಶರಣರ ನಾಡು ಅವಕಾಶ ಕೊಡುವುದಿಲ್ಲ : ಪ್ರಿಯಾಂಕ್‌ ಖರ್ಗೆ

Date:

ವಚನ ಚಳವಳಿಯ ಮೂಲಕ ನಾಡಿಗೆ ವಿಚಾರ ಕ್ರಾಂತಿಯನ್ನು ಪರಿಚಯಿಸಿದ ಕಲ್ಯಾಣ ಕರ್ನಾಟಕವು ಅಂದಿನಿಂದ ಇಂದಿನವರೆಗೂ ವೈಚಾರಿಕ ಪ್ರಜ್ಞೆಯಲ್ಲಿ ಸದಾ ಮುಂದಿದ್ದಾರೆ. ಇಂತಹ ಕಲ್ಯಾಣ ಶರಣರ ನಾಡು ಎಂದಿಗೂ ಆರ್‌ಎಸ್‌ಎಸ್, ಬಿಜೆಪಿಯವರ ಮಲಿನ ಚಿಂತನೆಗಳಿಗೆ ಅವಕಾಶ ಕೊಡುವುದಿಲ್ಲ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ʼಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಶಕ್ತಿಯನ್ನು ನಂಬಿರುವ ಕಲಬುರಗಿಯ ಜನರು ನನ್ನ ಪರವಾಗಿ ಬೃಹತ್ ಮಟ್ಟದ ವೈಚಾರಿಕ ಬೆಂಬಲವನ್ನು ದಾಖಲಿಸಿದ್ದು ನನ್ನ ಋಣಭಾರವನ್ನು ಇನ್ನಷ್ಟು ಹೆಚ್ಚಿಸಿದೆ. ʼಸಭೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದʼ ಎಂದು ಅವರು ತಿಳಿಸಿದ್ದಾರೆ.

ʼಕಲಬುರಗಿಯ ಪ್ರಬುದ್ಧ ಜನರೇ, ಸತ್ಯದ ಹಾದಿಯಲ್ಲಿ ನಡೆಯುವವರಿಗೆ, ಜನಹಿತಕ್ಕಾಗಿ ಬದುಕುವವರಿಗೆ ಎಂದಿಗೂ ಬೆಂಬಲ ಇದ್ದೇ ಇರುತ್ತದೆ ಎಂಬುದನ್ನು ನೀವು ಮತ್ತೊಮ್ಮೆ ಸಾಬೀತುಪಡಿಸಿದ್ದೀರಿ. ನನ್ನನ್ನು ಕೇವಲ ರಾಜಕಾರಣಿಯನ್ನಾಗಿ ನೋಡದೆ, ನಿಮ್ಮಲ್ಲಿ ಒಬ್ಬ ಎಂದು ಪರಿಗಣಿಸಿ ತೋರಿಸುತ್ತಿರುವ ಪ್ರೀತಿ, ಕಾಳಜಿ ನನ್ನನ್ನು ಮೂಕವಿಸ್ಮಿತನನ್ನಾಗಿಸಿದೆ. ರಾಜಕೀಯವಾಗಿ, ಸೈದ್ದಂತಿಕವಾಗಿ, ವೈಚಾರಿಕವಾಗಿ ನನ್ನನ್ನು ಎದುರಿಸಲು ಸಾಧ್ಯವಾಗದ ಬಿಜೆಪಿಯವರು ವೈಯಕ್ತಿಕ ದಾಳಿಗಳ ಮೂಲಕ ನನ್ನ ತೇಜೋವಧೆಗೆ ಪ್ರಯತ್ನಿಸುತ್ತಿರುವುದನ್ನು ಕಂಡು ಸಹಿಸದೇ ಪ್ರಜ್ಞಾವಂತ ನಾಗರಿಕರಾದ ನೀವು ಸಿಡಿದೆದ್ದಿದ್ದೀರಿʼ ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ʼನನ್ನ ಮೇಲೆ ಅಪಾರ ವಿಶ್ವಾಸ ಇರಿಸಿರುವ ನೀವು, ನನ್ನಲ್ಲಿನ ಸ್ಥೈರ್ಯ ಕೊಂಚವೂ ಕುಗ್ಗದಂತೆ ಬಲ ತುಂಬಿದ್ದೀರಿ. ನಿಮ್ಮ ಈ ಅಭಿಮಾನ, ಪ್ರೀತಿಯನ್ನು ವರ್ಣಿಸಲು ನನ್ನಲ್ಲಿ ಪದಗಳಿಲ್ಲ. ನನ್ನ ಮೇಲಿನ ಪ್ರತಿ ದಾಳಿಗೂ ಸಾವಿರಾರು ವಿರೋಧದ ಧ್ವನಿಗಳು ಅನುರಣಿಸುತ್ತವೆ, ಕೀಳು ತಂತ್ರಗಳಿಗೆ ಎದಿರೇಟು ನೀಡುವ ಜನಶಕ್ತಿ ನನ್ನೊಂದಿಗೆ ಇದೆ ಎಂಬುದನ್ನು ಮನುವಾದಿಗಳಿಗೆ ಮನವರಿಕೆ ಮಾಡಿದ್ದೀರಿ. ನಾವೆಲ್ಲರೂ ಬಾಬಾ ಸಾಹೇಬರ ಆದರ್ಶಗಳು, ಸಂವಿಧಾನದ ತತ್ವಗಳನ್ನು ಪಾಲಿಸುವವರು. ನಮ್ಮ ಹೋರಾಟಗಳು ಸತ್ಯದ ಪರವಾಗಿರುತ್ತದೆ. ಆಚಾರವಿಲ್ಲದ ನಿಮ್ಮ ನಾಲಿಗೆ ಆಡುವ ಹೊಲಸು ಮಾತುಗಳಿಂದ ನಮ್ಮನ್ನು ಹಣಿಯಲು ಸಾಧ್ಯವಿಲ್ಲ ಎಂಬುದನ್ನು ಮನುಸ್ಮೃತಿ ಆರಾಧಕರಿಗೆ ಮತ್ತೊಮ್ಮೆ ಅರ್ಥಮಾಡಿಸಿದ್ದೀರಿʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿಯವರು ಕಲಬುರಗಿಗೆ ಮಣಿಕಂಠ, ಛಲವಾದಿ ನಾರಾಯಣಸ್ವಾಮಿ ಎಂಬ ಎರಡು ವೈರಸ್ ಬಿಟ್ಟಿದ್ದಾರೆ

ಸಮಾಜದ ಸ್ವಾಸ್ಥ್ಯ ಕೆಡಿಸುವ ಮನುವಾದದ ಮನಸ್ಥಿತಿಯವರ ಕುತಂತ್ರಗಳು ಸಫಲವಾಗುವುದಿಲ್ಲ. ಪ್ರಿಯಾಂಕ್ ಖರ್ಗೆ ಒಂಟಿಯಲ್ಲ, ನನ್ನೊಂದಿಗೆ ಬಾಬಾ ಸಾಹೇಬರನ್ನು ಅನುಸರಿಸುವ ಹಾಗೂ ಬಸವಣ್ಣನನ್ನು ಆರಾಧಿಸುವ ಸಾವಿರಾರು ಪಡೆಗಳಿವೆ ಎನ್ನುವ ಸಂಗತಿ ನನ್ನಲ್ಲಿ ಮತ್ತಷ್ಟು ಶಕ್ತಿ, ಆತ್ಮವಿಶ್ವಾಸ ತುಂಬಿದೆ. ಎಲ್ಲರ ಪ್ರೀತಿ, ಅಭಿಮಾನ, ಅಭೂತಪೂರ್ವ ಬೆಂಬಲವು ನನ್ನಲ್ಲಿ ಮತ್ತಷ್ಟು ಶಕ್ತಿ ತುಂಬಿದೆ, ಸಾಮಾಜಿಕ ಪಿಡುಗಿನಂತಾಗಿರುವ ಮನುವಾದಿಗಳನ್ನು ಎದುರಿಸುವ ಕೆಲಸವನ್ನು ನಿಮ್ಮೆಲ್ಲರ ಬೆಂಬಲದೊಂದಿಗೆ ನಾನು ಮುಂದುವರೆಸುತ್ತಲೇ ಇರುತ್ತೇನೆ, ಅಸಹಾಯಕರ, ಶೋಷಿತರ ಏಳಿಗೆಗಾಗಿ ನನ್ನ ಪ್ರಾಮಾಣಿಕ ಪ್ರಯತ್ನವನ್ನು ಮುಂದುವರೆಸುತ್ತಿರುತ್ತೇನೆʼ ಎಂದು ತಮ್ಮ ʼಎಕ್‌ʼ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...