ಸಿಎಂಟಿಎಐ ದಕ್ಷಿಣ ಭಾರತ ವಲಯದ ಅಧ್ಯಕ್ಷೆಯಾಗಿ ಸಚಿತಾ ನಂದಗೋಪಾಲ್ ನೇಮಕ

Date:

ಕ್ರಿಯೇಟಿವ್ ಮೂವ್​​ಮೆಂಟ್ ಥೆರಪಿ ಅಸೋಸಿಯೇಷನ್ ಆಫ್ ಇಂಡಿಯಾದ (ಸಿಎಂಟಿಎಐ) ದಕ್ಷಿಣ ಭಾರತ ವಲಯ ಅಧ್ಯಕ್ಷರಾಗಿ ಮಂಗಳೂರು ಮೂಲದ ಡಾನ್ಸ್ ಮೂವ್ ಮೆಂಟ್ ಥೆರಪಿ ಫ್ಯಾಸಿಲಿಟೇಟರ್ ಮತ್ತು ಸಾಮಾಜಿಕ ಕಾರ್ಯಕರ್ತೆ, ಸಚಿತಾ ನಂದಗೋಪಾಲ್ ಅವರು ನೇಮಕಗೊಂಡಿದ್ದಾರೆ.

ಅವರು ದಕ್ಷಿಣದ ರಾಜ್ಯಗಳಲ್ಲಿ ದೆಹಲಿ ಮೂಲದ ಈ ಪ್ಯಾನ್ ಇಂಡಿಯಾ ಸಂಘಟನೆಯ ಕಾರ್ಯನಿರ್ವಹಣೆಯ ಉಸ್ತುವಾರಿ ವಹಿಸಲಿದ್ದಾರೆ.

ಸಚಿತಾ ನಂದಗೋಪಾಲ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ, ಸಂಸ್ಕೃತಿ ಮತ್ತು ಸಾಮಾಜಿಕ ಮಹತ್ವದ ಚಟುವಟಿಕೆಗಳ ಕ್ಷೇತ್ರಗಳಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದು, ಮಕ್ಕಳು ಮತ್ತು ಯುವಕರ ಶಿಕ್ಷಣ, ಜೀವನ ಕೌಶಲ್ಯ ಅಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಿರುವ ಪರ್ಯಾಯ ವಿಧಾನಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ (ಸಿಐಎಲ್) ಎಂಬ ಸಂಸ್ಥೆಯ ಸಹ-ಸ್ಥಾಪಕಿಯೂ ಆಗಿದ್ದಾರೆ. ಅದೇ ರೀತಿ ಮಾನಸಿಕ ಆರೋಗ್ಯ ಮತ್ತು ಸ್ವಾಸ್ಥ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಸ್ಥೆ ‘ಅನ್ವೇಷಣಂ’ ನ ಸ್ಥಾಪಕರು ಮತ್ತು ನಿರ್ದೇಶಕರಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಿಎಂಟಿಎಐ (CMTAI) ಭಾರತದಲ್ಲಿ ಕ್ರಿಯೇಟಿವ್ ಮೂವ್​​ಮೆಂಟ್​ ಥೆರಪಿ ಕ್ಷೇತ್ರವನ್ನು ಬೆಳೆಸುವ ಮತ್ತು ವೃತ್ತಿಪರಗೊಳಿಸುತ್ತಿರುವ ಪ್ರಧಾನ ಸಂಸ್ಥೆಯಾಗಿದೆ. 2014ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಸ್ಥೆಯು ಭಾರತದಲ್ಲಿ ಡಾನ್ಸ್ ಮೂವ್ ಮೆಂಟ್ ಥೆರಪಿ ಮತ್ತು ಇತರ ಸೃಜನಶೀಲ ಕಲಾ ಚಿಕಿತ್ಸೆಗಳ ಕ್ಷೇತ್ರದಲ್ಲಿ ತರಬೇತಿ, ವೃತ್ತಿಪರತೆ, ಮಾನ್ಯತೆ, ಜ್ಞಾನ ಹಂಚಿಕೆ, ವಕಾಲತ್ತು ಮತ್ತು ಸಹಯೋಗಕ್ಕಾಗಿ ಇರುವಂಥ ವೃತ್ತಿಪರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸಿಎಂಟಿಎಐ ಎನ್ನುವುದು ಕಾನ್ಸೀಲ್ ಇಂಟರ್​ನ್ಯಾಷನಲ್ ಡೆ ಲಾ ಡಾನ್ಸೆ (ಸಿಐಡಿ, ಪ್ಯಾರಿಸ್) ಮತ್ತು ಅಮೆರಿಕನ್ ಡಾನ್ಸ್ ಥೆರಪಿ ಅಸೋಸಿಯೇಷನ್ (ಎಡಿಟಿಎ) ಸದಸ್ಯ ಸಂಸ್ಥೆಯೂ ಆಗಿದೆ.

ಸಚಿತಾ ನಂದಗೋಪಾಲ್ ಅವರು ತಮ್ಮ 25 ವರ್ಷಗಳ ವೃತ್ತಿ ಬದುಕಿನಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಪತ್ರಿಕೋದ್ಯಮದ ಉಪನ್ಯಾಸಕಿಯಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು, ಅಲ್ಲಿ ಆ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬಳಿಕ ಅವರು ಬೆಂಗಳೂರಿನ ಸಿಎಂಆರ್ ಸ್ನಾತಕೋತ್ತರ ಮಾಧ್ಯಮ ಅಧ್ಯಯನ ಕೇಂದ್ರದ ಪ್ರಾಂಶುಪಾಲರಾಗಿಯೂ, ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ಲೇಸ್​ಮೆಂಟ್ ಅಧಿಕಾರಿಯಾಗಿಯೂ ಮತ್ತು ಯೆನೆಪೋಯ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಎಥಿಕ್ಸ್​​ನಲ್ಲಿ ಬೋಧಕ ಸಿಬ್ಬಂದಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕಾಲೇಜ್ ಫಾರ್ ಲೀಡರ್​ಶಿಪ್​ ಆ್ಯಂಡ್​ ಹ್ಯೂಮನ್ ರಿಸೋರ್ಸ್ ಡೆವಲಪ್​ಮೆಂಟ್​​ (ಸಿಎಲ್ಎಚ್​​ಆರ್​​ಡಿ) ನಿಂದ ಮಾನವ ಸಂಪನ್ಮೂಲ ಅಭಿವೃದ್ಧಿ ತರಬೇತಿಯ ಪ್ರಮಾಣೀಕೃತ ತರಬೇತುದಾರರಾಗಿರುತ್ತಾರೆ.

ಮಂಗಳೂರು ಟೋಸ್ಟ್ ಮಾಸ್ಟರ್ಸ್ ಕ್ಲಬ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಸಚಿತಾ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮತ್ತು ಇಂಡಿಯನ್ ಸೊಸೈಟಿ ಫಾರ್ ಟ್ರೈನಿಂಗ್ ಆ್ಯಂಡ್ ಡೆವಲಪ್ ಮೆಂಟ್ (ಐಎಸ್​​ಟಿಡಿ)ನ ಆಜೀವ ಸದಸ್ಯರಾಗಿದ್ದಾರೆ. ಇತ್ತೀಚೆಗಷ್ಟೇ ಲಯನ್ಸ್ ಇಂಟರ್​​ನ್ಯಾಷನಲ್ ಡಿಸ್ಟ್ರಿಕ್ಟ್ 317ಡಿ ವತಿಯಿಂದ “ಫೆಮ್​ಫ್ಲ್ಯೂಯೆನ್ಸರ್” ಪ್ರಶಸ್ತಿ ಹಾಗೂ ಹಲವಾರು ಸಂಘ ಸಂಸ್ಥೆಗಳು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿರುವರು.

ಸಮಾಜದ ಮಾನಸಿಕ ಆರೋಗ್ಯ ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ಡಾನ್ಸ್ ಮೂವ್ ಮೆಂಟ್ ಥೆರಪಿಯನ್ನು ವಿವಿಧ ಗುಂಪುಗಳ ಜನರಿಗೆ ತಲುಪಿಸಿರುವುದನ್ನು ಪರಿಗಣಿಸಿ ಸಿಎಂಟಿಎಐ ರಾಷ್ಟ್ರೀಯ ಮಟ್ಟದಲ್ಲಿ ಇವರನ್ನು ಗುರುತಿಸಿದೆ.

ಸಿಎಂಟಿಎಐನ ಚಾಪ್ಟರ್ಸ್ ನಿರ್ದೇಶಕಿ, ಕ್ರಿಯೇಟಿವ್ ಆರ್ಟ್ಸ್ ಥೆರಪಿ ಪ್ರಾಕ್ಟೀಷನರ್ ರಶ್ಮಿ ಬಾಲಕೃಷ್ಣನ್ ಅವರು ಈ ಎಲ್ಲ ನೇಮಕಾತಿಗಳನ್ನು ನಡೆಸಿದ ನಂತರ ಹೊಸ ತಂಡ ಅಧಿಕಾರ ವಹಿಸಿಕೊಂಡಿದೆ.

ಬೆಂಗಳೂರಿನ ಆರೆಂಜ್ ಆರ್ಕ್ ಕಮ್ಯುನಿಟಿ ಸ್ಟುಡಿಯೋ ಸಂಸ್ಥಾಪಕಿ ಮೇಘಾ ಛಲ್ಲಾನಿ ಉಪಾಧ್ಯಕ್ಷರಾಗಿ ನಾಮನಿರ್ದೇಶನಗೊಂಡಿದ್ದರೆ, ಬೆಂಗಳೂರಿನ ಚಲನೆ/ಭಂಗಿ ವಿಶ್ಲೇಷಣೆ ತಂತ್ರಜ್ಞಾನ ಕಂಪನಿ ನೆಕ್ಸ್ಟ್​​ ಕ್ಯೂ ಪ್ರೈವೇಟ್ ಲಿಮಿಟೆಡ್​​ನ ಸಂಸ್ಥಾಪಕರು ಮತ್ತು ಸಿಇಒ ಸುಬ್ರಹ್ಮಣ್ಯಂ ಮುರಮಲ್ಲ ಅವರು ಕಾರ್ಯದರ್ಶಿಯಾಗಿ ನಾಮನಿರ್ದೇಶನಗೊಂಡಿದ್ದಾರೆ.

ಇದನ್ನು ಓದಿದ್ದೀರಾ? ಸಹೋದರ ರಾಹುಲ್ ಗಾಂಧಿ ಹಿಂದೂಗಳ ವಿರುದ್ಧ ಮಾತನಾಡಿಲ್ಲ: ಪ್ರಿಯಾಂಕಾ ಗಾಂಧಿ

ತನ್ನ ಸದಸ್ಯತ್ವ ನೆಲೆಯನ್ನು ಮತ್ತಷ್ಟು ವಿಸ್ತರಿಸುವ ಮತ್ತು ನಮ್ಮ ಸಮಾಜದ ಮಾನಸಿಕ ಆರೋಗ್ಯ ಮತ್ತು ಸಾಮಾನ್ಯ ಯೋಗಕ್ಷೇಮದ ಹಿತದೃಷ್ಟಿಯಿಂದ ನೃತ್ಯ/ಚಲನೆ ಚಿಕಿತ್ಸೆಯನ್ನು ಚಿಕಿತ್ಸಕ ವಿಧಾನವಾಗಿ ಪ್ರಚಾರ ಮಾಡುವಂಥ ಸಿಎಂಟಿಎಐನ ಉದ್ದೇಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ಹೆಜ್ಜೆಯಿಡಲಿದ್ದೇವೆ ಎಂದು ಸಚಿತಾ ನಂದಗೋಪಾಲ್ ತಿಳಿಸಿದ್ದಾರೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...