ಸಾಗರ | ಪರ್ಮಿಟ್‌ ಇಲ್ಲದೇ ಕೆಎಸ್‌ಆರ್‌ಟಿಸಿ ಓಡಾಟ; ಬಸ್ ತಡೆದು ಖಾಸಗಿ ಬಸ್ ಮಾಲಿಕರ ಪ್ರತಿಭಟನೆ

Date:

ಶಿವಮೊಗ್ಗ ಜಿಲ್ಲೆಯ ಸಾಗರದ ಬಿ ಹೆಚ್ ರಸ್ತೆಯ ಹಳೇ ಖಾಸಗಿ ಬಸ್ ನಿಲ್ದಾಣದ ಬಳಿ ರೂಟ್ ಪರ್ಮಿಟ್ ಇಲ್ಲದೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡಿಸುವುದನ್ನು ತಡೆದು ಖಾಸಗಿ ಬಸ್ ಮಾಲಿಕರು ಹಾಗೂ ಚಾಲಕರು ಉಪವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

“ಸಾಗರದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಹೊರ ಜಿಲ್ಲೆಗಳಿಗೂ ಖಾಸಗಿ ಬಸ್ ಓಡಿಸಿ ಮಾಲಿಕರು ಹಾಗೂ ಚಾಲಕರು ತಮ್ಮ ಸೇವೆ ಒದಗಿಸುತ್ತಾ ಅದರಲ್ಲೇ ತಮ್ಮ ಜೀವನ ಕಟ್ಟಿಕೊಂಡಿರುತ್ತಾರೆ. ಆದರೆ ಕೊರೋನಾ ಬಂದ ಬಳಿಕ ಖಾಸಗಿ ಬಸ್‌ಗಳು ಮೂಲೆ ಗುಂಪಾಗಿವೆ. ಸರ್ಕಾರದ ತೆರಿಗೆ, ಚಾಲಕ ನಿರ್ವಾಹಕರ ಸಂಬಳ ಕೊಡಲಾಗದೆ ಬಸ್‌ಗಳನ್ನು ಮಾರುವ ಪರಿಸ್ಥಿತಿ ಬಂದೊದಿಗಿದೆ. ಅಷ್ಟೇ ಅಲ್ಲದೆ ಈ ಬಾರೀ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಶಕ್ತಿ ಯೋಜನೆ ಜಾರಿ ಆಗಿ ಮಹಿಳೆಯರು ಯಾರೂ ಖಾಸಗಿ ಬಸ್ ಬಳಸುತ್ತಿಲ್ಲ. ಅದರ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಯವರು ರೂಟ್ ಪರ್ಮಿಟ್ ಇಲ್ಲದಿದ್ದರೂ ಯಾವಾವುದೋ ಸಮಯಕ್ಕೆ ಬಸ್ ಗಳನ್ನು ಓಡಿಸುತ್ತಿದ್ದಾರೆ. ಇದರಿಂದ ಖಾಸಗಿ ಬಸ್‌ ಮಾಲಿಕರಿಗೆ ನಷ್ಟ ಉಂಟಾಗಿ ಜೀವನ ಹೊರೆ ಬರೆಯಾಗಿ ಪರಿಣಮಿಸಿದೆ” ಎಂದು ಅಳಲು ತೋಡಿಕೊಂಡರು.

ಅಧಿಕಾರಿಗಳು ಖಾಸಗಿ ಬಸ್‌ಗಳ ಕಡೆ ಗಮನ ಹರಿಸುತ್ತಿಲ್ಲ. ವಿಷ ಕುಡಿಯುವ ಪರಿಸ್ಥಿತಿ ನಮ್ಮದಾಗಿದೆ ಎಂದು ತಮ್ಮ ಆಕ್ರೋಶ ಹೊರ ಹಾಕಿ ನಮ್ಮನ್ನು ರಕ್ಷಣೆ ಮಾಡಿ ಇಲ್ಲವಾದರೆ ನಮಗೆ ದಯಾ ಮರಣ ನೀಡಿ ಎಂದು ಸರ್ಕಾರಕ್ಕೆ ಅವಲತ್ತುಕೊಂಡು ಮನವಿ ಸಲ್ಲಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ?: ಸಾಗರ | ಜ.18ರಿಂದ ಕನ್ನಡದಲ್ಲಿ ಸಾರ್ವಜನಿಕ ಕುರ್‌ಆನ್ ಪ್ರವಚನ ಕಾರ್ಯಕ್ರಮ

ಪ್ರತಿಭಟನೆಯಲ್ಲಿ ಖಸಾಗಿ ಬಸ್ ಮಾಲಿಕರ ಸಂಘದ ಅಯಕ್ಷ, ಎಸ್ ಜಿ ಎಂ ಟಿ ಕಂಪನಿ ಮಾಲಿಕ ರಾಧಾ ಸುಭಾಶ್ ನಾಯ್ಕ, ಉಪಾಧ್ಯಕ್ಷ ಯೋಗ ಕುಮಾರ್, ಹಾಗೂ ಕುಮಾರ್ ಗುಡ್ಡೆಮನೆ ನಾಗರಾಜ್ ಗೋಪಾಲ್ ಶೆಟ್ರು, ತಿಮ್ಮಪ್ಪ ಶೆಟ್ರು, ರಫೀಕ್ ರಿಪ್ಪನ್‌ಪೇಟೆ, ಪ್ರತಾಪ್ ಜೆ. ಆರ್. ಬಿ ಹಾಗೂ ಇನ್ನೂ ಹಲವಾರು ಬಸ್ ಮಾಲಿಕರು ಹಾಗೂ ಚಾಲಕರು ಏಜೆಂಟರು ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...