ಉಡುಪಿ | ಸುಮನಸಾ ಕೊಡವೂರು ನಾಟಕೋತ್ಸವ ‘ರಂಗಹಬ್ಬ-14″ ಉದ್ಘಾಟಿಸಿದ ಸಂಜೀವ ದಂಡಕೇರಿ

Date:

ಕಲಾವಿದ ಕಲಾ ಪ್ರದರ್ಶನ ನೀಡಿದರೆ ಪೂರ್ಣನಾಗುವುದಿಲ್ಲ. ಸಹೃದಯನಾಗಬೇಕು, ವಿಶಾಲ ಹೃದಯಿ ಆಗಿರಬೇಕು. ಆಗ ಮಾತ್ರ ಪೂರ್ಣಕಲಾವಿದನಾಗಿ ರೂಪುಗೊಳ್ಳಲು ಸಾಧ್ಯ ಎಂದು ರಂಗಕರ್ಮಿ ಸಂಜೀವ ದಂಡೆಕೇರಿ ಹೇಳಿದರು.

ಸುಮನಸಾ ಕೊಡವೂರು ಸಾಂಸ್ಕøತಿಕ ಸಂಘಟನೆಯು ಭಾನುವಾರ ಭುಜಂಗ ಪಾರ್ಕ್ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿರುವ 14ನೇ ವರ್ಷದ ರಂಗಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾಟಕಗಳನ್ನು ನೋಡುವವರ ಸಂಖ್ಯೆ ದಿನೇ ದಿನೆ ಕಡಿಮೆಯಾಗುತ್ತಿದೆ. ವೇದಿಕೆಯಲ್ಲಿ ಇರುವಷ್ಟು ವೀಕ್ಷಕರು ಇಲ್ಲದ ಪರಿಸ್ಥಿತಿ ಕೆಲವು ಕಡೆಗಳಲ್ಲಿ ಉಂಟಾಗಿದೆ. ಧಾರಾವಾಹಿಗಳು, ಮೊಬೈಲ್ ಇದಕ್ಕೆ ಕಾರಣ ಇರಬಹುದು. ರಂಗಚಟುವಟಿಕೆ ಜಾಸ್ತಿಯಾಗುತ್ತಾ ಹೋಗಬೇಕು ಎಂದು ಆಶಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಾವು ಮಾಡುವ ಒಳ್ಳೆಯ ಕಾರ್ಯ ಮತ್ತು ಜನರ ಪ್ರೀತಿ ಮಾತ್ರ ಶಾಶ್ವತ. ನಾವು ಬದುಕಿ ಸಾಯುವುದಕ್ಕಿಂತ ಸತ್ತ ಮೇಲೂ ಬದುಕುವಂತೆ ಸಾಧನೆ ಮಾಡಬೇಕು ಎಂದು ತಿಳಿಸಿದರು.

ನಾನು ಬರೆದ ಬಯ್ಯಮಲ್ಲಿಗೆ ನಾಟಕವು ತುಳು, ಕನ್ನಡ, ಹಿಂದಿ, ಕೊಂಕಣಿ, ಮರಾಠಿ, ಇಂಗ್ಲಿಷ್ ಭಾಷೆಗಳಲ್ಲಿ ಪ್ರದರ್ಶನಗೊಂಡಿದೆ. 28 ಸಾವಿರ ಪ್ರದರ್ಶನಗಳವರೆಗೆ ನಾನು ಲೆಕ್ಕ ಇಟ್ಟಿದ್ದೆ. ಆನಂತರ ಲೆಕ್ಕ ಇಟ್ಟಿಲ್ಲ. ಇದೇ ಬಯ್ಯಮಲ್ಲಿಗೆ ಸಿನಿಮಾ ಕೂಡ ಆಯಿತು ಎಂದು ನೆನಪು ಮಾಡಿಕೊಂಡರು.

ರಂಗಸಾಧಕ ಸನ್ಮಾನ ಸ್ವೀಕರಿಸಿದ ರಂಗಕರ್ಮಿ ಸಂತೋಷ್ ಶೆಟ್ಟಿ ಹಿರಿಯಡ್ಕ ಮಾತನಾಡಿ, ರಂಗಭೂಮಿಯು ಆಯಾ ಕಾಲಘಟ್ಟದ ಅನಿವಾರ್ಯತೆಗೆ, ತಲ್ಲಣಗಳಿಗೆ ಸ್ಪಂದಿಸುವ ಪ್ರಬಲ ಮಾಧ್ಯಮ. ಮನರಂಜನೆ ಮಾತ್ರವಲ್ಲ, ಸಾಮಾಜಿಕ ಜವಾಬ್ದಾರಿ. ಕಲಾವಿದ ತನ್ನೊಳಗೆ ಬಗೆದು ನೋಡುವ ಪ್ರಕ್ರಿಯೆ. ಸಮಾಜವನ್ನು ಕಟ್ಟುವ ಪ್ರಕ್ರಿಯೆಯೂ ಹೌದು ಎಂದು ಹೇಳಿದರು.

ರಂಗಭೂಮಿಗೆ ಪ್ರಶ್ನಿಸುವ ಮನೋಭಾವ ಇರುವುದರಿಂದ ಅದು ಆಗಾಗ ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗುತ್ತದೆ. ಆದರೆ ಇತ್ತೀಚೆಗೆ ಪ್ರಪಗಾಂಡ ನಾಟಕಗಳೂ ಬರುತ್ತಿರುವುದರಿಂದ ಎಲ್ಲ ನಾಟಕಗಳು ಒಳ್ಳೆಯವು ಎಂದು ಅದರ ಸ್ವರೂಪದ ಕಾರಣಕ್ಕಷ್ಟೇ ಗುರುತಿಸಲು ಸಾಧ್ಯವಿಲ್ಲ. ನಾಟಕ ರಚನೆಕಾರರ, ನಿರ್ದೇಶಕರ, ನಾಟಕ ಮಾಡಿಸುವವರ ಮನಸ್ಥಿತಿಯನ್ನು ಅವಲಂಬಿಸಿದೆ ಎಂದು ಅಭಿಪ್ರಾಯಪಟ್ಟರು.

ಉಡುಪಿಯಲ್ಲಿ ಸಹೃದಯತೆಯ ಮತ್ತು ಸೌಹಾರ್ದದ ಪರಂಪರೆ ಇದೆ. ಯು.ಎಸ್. ಪಣಿಯಾಡಿ, ಡಾ. ಟಿ.ಎಂ.ಎ ಪೈ, ಹಾಜಿ ಅಬ್ದುಲ್ಲ ಸಾಹೇಬ್ ಇದಕ್ಕೆ ಉದಾಹರಣೆ. ಅವರು ಹಾಕಿಕೊಟ್ಟ ಮೇಲ್ಪಂಕ್ತಿ. ವರ್ತಮಾನ ಮತ್ತು ಭವಿಷ್ಯದ ಹಾದಿಗೆ ಬೆಳಕಾಗಬಲ್ಲದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ನೂತನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಹಾಪ್ರಬಂಧಕ ಗಣೇಶ್ ಶೇರಿಗಾರ್ ಮಾತನಾಡಿ, ಸುಮನಸಾ ಮುಂದಿನ ಪೀಳಿಗೆಯನ್ನು ಸದೃಡಗೊಳಿಸುತ್ತಿದೆ. ಇತ್ತೀಚಿನ ನಾಟಕಗಳಲ್ಲಿ ಯುವ ಪೀಳಿಗೆಗೆ ಅವಕಾಶ ನೀಡುತ್ತಿರುವುದು ಇದಕ್ಕೆ ಸಾಕ್ಷಿ. ಸುಮನಸಾ ಸಂಸ್ಥೆಯ ಸ್ವಂತ ನಿವೇಶನ, ಸ್ವಂತ ಕಟ್ಟಡದ ಕನಸು ಈಡೇರಲಿ ಎಂದು ಹಾರೈಸಿದರು.

ಸಾಕಾರ್ ಕನ್‍ಸ್ಟ್ರಕ್ಷನ್ ಪ್ರವರ್ತಕ ರಾಕೇಶ್ ಜೋಗಿ, ಉದ್ಯಮಿ ನಾಗರಾಜ್ ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಮಾಜಿ ಅಧ್ಯಕ್ಷ ಸಂತೋಷ್ ಉದ್ಯಾವರ, ಸುಮನಸಾ ಕೊಡವೂರು ಗೌರವಾಧ್ಯಕ್ಷ ಎಂ,ಎಸ್, ಭಟ್, ಸಂಚಾಲಕ ಭಾಸ್ಕರ ಪಾಲನ್ ಉಪಸ್ಥಿತರಿದ್ದರು,

ಸುಮನಸಾ ಕೊಡವೂರು ಸಾಂಸ್ಕøತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ಸದಸ್ಯೆ ಅಂಬಿಕಾ ವಂದಿಸಿದರು. ಉಪಾಧ್ಯಕ್ಷ ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...