ಸುರತ್ಕಲ್‌ನ ಮುಂಚೂರು ಸಮೀಪದ ಮೋದಿನಗರ ಮತ್ತು ಪದ್ಮಶ್ರೀ ಲೇಔಟ್‌ನಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಕಳ್ಳರು ಬಡಾವಣೆಯ 4 ಮನೆಗಳ ಬಾಗಿಲು ಮುರಿದು ಮನೆಯಲ್ಲಿದ್ದ ಬೆಳ್ಳಿ ಸೇರಿದಂತೆ ರೂ.50 ಸಾವಿರಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ.
ಇದರ ಜತೆಗೆ ಬಡಾವಣೆಯ ಕೆಲವು ಮನೆಗಳಲ್ಲಿ ಕಳ್ಳತನಕ್ಕೆ ಗೇಟು ಓಪನ್ ಮಾಡಲು ಯತ್ನಿಸಿರುವ ದೃಶ್ಯ ಮನೆಗಳ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳತನ ಸಂದರ್ಭದಲ್ಲಿ ಖದೀಮರು ಕೈಯಲ್ಲಿ ಕತ್ತಿ, ಬ್ಯಾಗುಗಳಲ್ಲಿ ಆಯುಧ ಇಟ್ಟು ಕೊಂಡಿರುವ ಕಂಡುಬಂದಿದೆ. ಬಾಗಿಲು ಮುರಿಯಲು ಕೆಲವು ಚೂಪಾದ ವಸ್ತುಗಳನ್ನು ಬಳಸಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: ಬಂಟ್ವಾಳ | ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ಯತ್ನ ಆರೋಪ: ನರಸಿಂಹ ಶೆಟ್ಟಿ ಮಾಣಿ ವಿರುದ್ಧ ಎಫ್‌ಐಆರ್
ಖದೀಮರು ಬಡಾವಣೆಯಲ್ಲಿ ಜನರು ವಾಸ ಇಲ್ಲದಂತಹ ಮನೆಗಳನ್ನುಗುರುತಿಸಿ ಈ ಕೃತ್ಯಕ್ಕೆ ಮುಂದಾಗಿದ್ದಾರೆ. ಕಳ್ಳರು ಬರುತ್ತಿದ್ದಂತೆ ನಾಯಿಗಳು ಬೊಗಳುವ ಸದ್ದು ಕೇಳಿ ಹಿಂದಿರುಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.





