ಉಡುಪಿ | ಹಿಜಾಬ್ ತೆಗೆಸುವಾಗ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ, ಸಂವಿಧಾನ ವಿರೋಧಿ ಆಗಿಲ್ವಾ ?

Date:

ಸಿಇಟಿ ಪರೀಕ್ಷೆಗೆ ಹಾಜರಾಗುವ ಜನಿವಾರ ತೆಗೆಸಿದ್ದನ್ನು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುದೇಂದ್ರ ತೀರ್ಥರು ತೀವ್ರವಾಗಿ ಖಂಡಿಸಿದ್ದಾರೆ, ಜನಿವಾರವೆಂಬುದು ಧರ್ಮ, ಸಂಪ್ರದಾಯ, ಹಾಗೂ ಬ್ರಾಹ್ಮಣತ್ವದ ಪ್ರತೀಕ ಎಂದಿದ್ದಾರೆ. ಜನಿವಾರ ತೆಗೆಸಿದ್ದರಿಂದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ. ಇದು ಸಂವಿಧಾನ ವಿರೋಧಿ ನಡೆಯೂ ಆಗಿದೆ, ಸಂವಿಧಾನದಲ್ಲಿ ಎಲ್ಲಾ ಧರ್ಮವನ್ನೂ ಆಚರಿಸುವ ಅವಕಾಶ ಕಲ್ಪಿಸಲಾಗಿದೆ ಎಂದಿರಿ. ಒಪ್ಪಿಕೊಳ್ಳೋಣ ಅಂದು ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಹಾಕಿದ್ದರಿಂದ ಶಾಲೆಯಿಂದ ಹೊರಗಟ್ಟಿದರಲ್ಲಾ ಆಗ ತಮಗೆ ಇದು ಸಂಪ್ರದಾಯ ವಿರೋಧಿ ಧರ್ಮ ವಿರೋಧಿ ಅನಿಸಲಿಲ್ವಾ. ಶಾಲೆಗೆ ಹೋಗುವ ಮಕ್ಕಳನ್ನು ಹಿಜಾಬ್ ಧರಿಸಿ ಕ್ಲಾಸಿಗೆ ಬರುವ ಹಾಗಿಲ್ಲಾ ಎಂದು ಶಾಲೆಯಿಂದ ಹೊರಹಾಕಿ ಆ ಹೆಣ್ಣು ಮಕ್ಕಳ ಶಿಕ್ಷಣದ ಭವಿಷ್ಯಕ್ಕೇ ಕೊಳ್ಳಿ ಇಟ್ಟಾಗ ತಮಗೆ ಇದು ಸಂವಿಧಾನ ವಿರೋಧಿ ಅನಿಸಲಿಲ್ವೇ ಸ್ವಾಮೀಜಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಜಾಪುರ ಜಿಲ್ಲೆಯಲ್ಲಿ ಅಂದು ದಲಿತ ಐದು ವರ್ಷದ ಬಾಲಕ ಪಂಚ ಕಜ್ಜಾಯದ ಪಾತ್ರೆ ಮುಟ್ಟಿದ ಎಂದು ಸೌಟಲ್ಲಿ ಹೊಡೆದು ಕೊಂದರಲ್ಲಾ ಆಗ ತಮಗೆ ಹಿಂದೂ ಧರ್ಮದ ನೆನಪು ಬರಲಿಲ್ವೇ, ತಪ್ಪು ಅನಿಸಲಿಲ್ವೇ, ಅರಿವಿಲ್ಲದೆ ದಲಿತ ಬಾಲಕರು ಗೆಜ್ಜೆ ಕೋಲು ಬಿದ್ದದ್ದನ್ನು ಎತ್ತಿಕೊಟ್ಟಿದ್ದೆ ಅಪರಾಧ ಎಂದು ಥಳಿಸಿ, ದಂಡ ಹಾಕಿ ಬಹಿಷ್ಕಾರ ಹಾಕಿದರಲ್ಲಾ ಆಗ ಎಲ್ಲಿ ಹೋಗಿತ್ತು ತಮ್ಮ ಮನುಷ್ಯತ್ವ ಧರ್ಮ ರಕ್ಷಣೆಯ ಜವಾಬ್ದಾರಿ ಎಂದು ಹೇಳಿದರು ‌

ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚಬೇಡಿ ಸ್ವಾಮೀಜಿಯವರೇ ಭಾರತದ ಪ್ರಜಾಪ್ರಭುತ್ವದಲ್ಲಿ, ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...