ಶಿವಮೊಗ್ಗ | ನೆರವಿನ ಹಸ್ತಕ್ಕಾಗಿ ಎದುರು ನೋಡುತ್ತಿದೆ ಬಡ ಕುಟುಂಬ

Date:

ಶಿವಮೊಗ್ಗ ನಗರದ ವಿನೋಬನಗರದ ಇಂದಿರಾ ಗಾಂಧಿ ಬಡಾವಣೆಯ 100 ಫೀಟ್ ರಸ್ತೆಯಲ್ಲಿ ಎಪಿಎಂಸಿ ಮಾರುಕಟ್ಟೆ ಎದುರು ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿರುವ ಒಂದು ಕುಟುಂಬದ ಸದಸ್ಯರು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಒಂದು ಹೊತ್ತು ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ.

ದಲಿತ ಮಹಿಳೆಯೊಂದಿಗೆ ಅಂತರ್ಜಾತಿ ವಿವಾಹವಾಗಿ ಒಂದು ಮಟ್ಟಿಗೆ ಉತ್ತಮವಾಗಿ ಜೀವನ ಸಾಗಿಸುತ್ತಿದ್ದ ಈ ವಿದ್ಯಾವಂತ ಕುಟುಂಬದಲ್ಲಿ ಈಗ ಎಲ್ಲವೂ ನೀರವ ಮೌನದಂತಾಗಿದೆ. ಗಂಡನಿಗೆ ರಕ್ತನಾಳಗಳು ಹೆಪ್ಪುಗಟ್ಟುವಿಕೆ(ಡಿವಿಟಿ)ಯ ಖಾಯಿಲೆಯಿದ್ದು, ಇದರಿಂದ ಇವರಿಗೆ ನಿಂತು ಕೆಲಸ ಮಾಡಲು ಆಗುತ್ತಿಲ್ಲ. ಪದೇ ಪದೆ ತಲೆ ಸುತ್ತುವುದರಿಂದ ಅರೋಗ್ಯಕರವಾಗಿ ಕೆಲಸಮಾಡಲಾಗುತ್ತಿಲ್ಲ.

ಇತ್ತೀಚೆಗೆ ಕಳೆದ 5 ತಿಂಗಳಲ್ಲಿ ಹೆಂಡತಿ ಅಶ್ವಿನಿಯವರಿಗೆ ಎರಡು ಬಾರಿ ಹೃದಯಾಘಾತವಾಗಿ ಸ್ಟಂಟ್ ಅಳವಡಿಸಿದ್ದಾರೆ. ಬದುಕಿ ಉಳಿದಿರುವುದೇ ಹೆಚ್ಚು ಎನ್ನುವಂತಿದೆ. ಇನ್ನು ಇವರಿಗೆ 30 ವರ್ಷದ ಒಬ್ಬ ಮಗನಿದ್ದಾನೆ. ಇವನು ಬುದ್ಧಿಮಾಂದ್ಯತೆಯಿದ್ದು, ಶೇ.70ಕ್ಕೂ ಅಧಿಕ ಮಾನಸಿಕವಾಗಿ ದುರ್ಬಲವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನೊಬ್ಬ ಮಗಳು 10ನೇ ತರಗತಿ ಓದುತ್ತಿದ್ದು, ಮಗಳಿಗೆ ವಿದ್ಯಾಭ್ಯಾಸ ಮಾಡಿಸುವುದು ತೀರಾ ಕಷ್ಟಸಾಧ್ಯವಾದ ಕೆಲಸವಾಗಿದೆ. ಎರಡನೇ ಬಾರಿ ಹೆಂಡತಿಗೆ ಹೃದಯಾಘಾತವಾದಾಗ ತುಂಬಾ ಅಸಹಾಯಕ ಪರಿಸ್ಥಿತಿಲಿದ್ದರೂ ಕೂಡಾ ಹೇಗೋ ಮಾಡಿ ಹೆಂಡತಿಯನ್ನು ಬದುಕಿಸಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಬುದ್ದಿಮಾಂದ್ಯ ಮಗ

ಎರಡನೇ ಬಾರಿ ಹೃದಯಘಾತ ಆಗುವುದಕ್ಕು ಕಾರಣ ಔಷಧಿ ತರಲು ಹಣವಿಲ್ಲದೆ ಔಷದಿ ಬಿಟ್ಟಿದ್ದರು. ವೈದ್ಯರು ಬರೆದ ಎಲ್ಲ ಔಷಧಿ ಇವರಿಗೆ ಉಚಿತವಾಗಿ ಸಿಗದಂತಾಯಿತು. ಹಣ ಇಲ್ಲ ಮನೆ ಬಾಡಿಗೆ ಕಟ್ಟಿಲ್ಲ. ಕಳೆದ 5 ತಿಂಗಳಿಂದ ಮನೆ ಮಾಲೀಕ ಮನೆ ಬಾಡಿಗೆ ನೀಡಿ, ಮಗಳ ವಿದ್ಯಾಭ್ಯಾಸ ಮುಗಿಸಿ ಮಾರ್ಚ್‌ ನಂತರ ಮನೆ ಬಾಡಿಗೆ ಸಂಪೂರ್ಣ ಪಾವತಿ ಮಾಡಿ ಮನೆ ಖಾಲಿ ಮಾಡಲು ತಿಳಿಸಿದ್ದಾರೆ” ಎಂದು ಅವಲತ್ತುಕೊಂಡಿದ್ದಾರೆ.

“ಕಳೆದ 15 ದಿನದಿಂದ ಮನೆ ಮುಂದೆ ಕುರ್ಚಿ ಹಾಗೂ ಒಂದು ಟೇಬಲ್ ಮೇಲೆ ಮಂಡಕ್ಕಿ, ಬಜ್ಜಿ ಹಾಕಿ ಸಂಜೆವೇಳೆ ಮಾರುತ್ತಿದ್ದರೂ ಇಲ್ಲಿ ಇವೆಲ್ಲ ಮಾರಬೇಡಿ ಎಂದು ಕೆಲವರು ಕಾಟ ನೀಡುತ್ತಿದ್ದಾರೆ. ಇದೆಲ್ಲದರ ನಡುವೆ ಮನೆಯವರಿಗೆಲ್ಲ ಆರಾಮಿಲ್ಲೆ ಕಾರಣ ಕಳೆದ ಕೆಲವು ತಿಂಗಳು ಹಿಂದೆ ಔಷಧಿ ಮತ್ತು ಮನೆಗೆ ಕೆಲವು ಮನೆ ಸಾಮಗ್ರಿ ತರಲೆಂದು ಮಾನಸಿಕ ಅಸ್ವಸ್ತ ಮಗನಿಗೆ ಹಣ ನೀಡಿ ಕಳುಹಿಸಲಾಗಿತ್ತು. ಆದರೆ ಮಗ ಎಷ್ಟೊತ್ತಾದರೂ ಮನೆಗೆ ಬಾರದಿರುವ ಕಾರಣ ಭಯಗೊಂಡ ತಂದೆ ಮಗನ ಹುಡುಕಾಟಕ್ಕೆ ಹೋದಾಗ ರಾತ್ರಿ 11ರ ಸಮಯ ಆದಿ ಚುಂಚನಗಿರಿ ಶಾಲೆ ಫುಟ್‌ಪಾತ್ ಬಳಿ ಮೂರ್ಛೆ ಹೋಗಿ ಬಿದ್ದಿದ್ದು ಕಂಡುಬಂದಿತ್ತು. ರಾತ್ರಿವೇಳೆಯಲ್ಲಿ ಕೂಡಲೇ ಮಗನನ್ನು ಆಸ್ಪತ್ರೆ ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದೇವೆ. ಮಗಳ ಮುಂದಿನ ಭವಿಷ್ಯ, ಹಾಗೂ ಉತ್ತಮವಾಗಿ ಓದುತ್ತಿರುವ ಅವಳ ವ್ಯಾಸಂಗ ಖರ್ಚು ಭರಿಸಲು ಪರಿತಪಿಸುವಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಬಡ ಕುಟುಂಬ 1

“ಬಿಕ್ಕಿ ಬಿಕ್ಕಿ ಅತ್ತರು ನಮ್ಮ ನೆರವಿಗೆ ಯಾರೂ ಬರುತ್ತಿಲ್ಲ. ಹೇಗೋ ಔಷಧಿ, ಮನೆ ಬಾಡಿಗೆ, ಮನೆ ಮುಂದೆ ಒಂದು ಗಾಡಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುವಷ್ಟು ಸಹಾಯ ಮಾಡಿದರೆ ಸಾಕೆಂಬ ನಿರೀಕ್ಷಿಯಲ್ಲಿದ್ದೇವೆ. ಮತ್ತೆ ನಾಡಿದ್ದು ಹೆಂಡತಿಯ ಹೃದಯ ಸಂಬಂಧ ಚಿಕಿತ್ಸೆಗೆ ಆಸ್ಪತ್ರೆಗೆ ಹೋಗಬೇಕಿದೆ. ಆದರೆ, ಕೈಯಲ್ಲ ಹಣವಿಲ್ಲ. ಸಂಜೆ ಮಾಡುವ ಮಂಡಕ್ಕಿ ಬೋಂಡಾ ಉಳಿದರೆ ಅದೇ ಮನೆಯಲ್ಲಿ ಎಲ್ಲರಿಗೂ ಊಟ. ಇನ್ನೂರು ಮುನ್ನೂರು ರೂಪಾಯಿ ವ್ಯಾಪಾರವಾದರೆ ಅದೇ ಹೆಚ್ಚು ಎನ್ನುವಂತಾಗಿದೆ. ಬಂದ ಹಣದಲ್ಲಿ ಮತ್ತೆ ಮಾರನೇ ದಿನದ ವ್ಯಾಪಾರಕ್ಕೆ ತರಕಾರಿ, ಕೆಲವು ದಿನಸಿ ಪದಾರ್ಥಗಳನ್ನು ತರಬೇಕು. ಇಂತಹ ಶೋಚನಿಯ ಪರಿಸ್ಥಿತಿಲಿ ಬದುಕು ದೂಡುವಂತಾಗಿದೆ” ಎಂದು ಕಣ್ಣೀರಿಟ್ಟರು.

ಈ ಸುದ್ದಿ ಓದಿದ್ದೀರಾ? ಬಾಗಲಕೋಟ | ದಲಿತಪರ ಸಂಘಟನೆಗಳ ಒಕ್ಕೂಟ: ಜ. 20ರಂದು ಬಾಗಲಕೋಟೆ ಬಂದ್ ಕರೆ

ಈ ದಿನ ಮಾಧ್ಯಮ ಮೂಲಕ ನಮ್ಮ ಓದುಗರಲ್ಲಿ ಕೇಳಿಕೊಳ್ಳುವುದೇನೆಂದರೆ ಯಾರಾದರೂ ನಿಮ್ಮಲ್ಲಿ ಸಹಾಯ ಮಾಡುವ ಮನಸಿದ್ದರೆ
ಈ ಕೆಳಗಿನ ಬ್ಯಾಂಕ್ ಅಕೌಂಟ್‌ಗೆ ಹಣ ಪಾವತಿಸಬಹುದಾಗಿದೆ. ಹಾಗೆ ಒಮ್ಮೆ ಆ ಕುಟುಂಬವನ್ನು ಭೇಟಿಯಾಗ ಬಯಸಿದಿರೆ ಅವರ ಮನೆಯ ವಿಳಾಸವನ್ನೂ ನೀಡಲಾಗಿದೆ. Phonepe/Googlepe/ಬ್ಯಾಂಕ್ ಟ್ರಾನ್ಸ್ಫರ್ ಮುಖಾಂತರ ಹಣ ನೀಡಬಹುದು.
ಸಹಾಯ ಮಾಡ ಬಯಸುವರು ಈ ಒಂದು ಕಡು ಬಡವರ ಕುಟುಂಬಕ್ಕೆ ನಿಮ್ಮ ಕೈಯಲ್ಲಾಗುವ ಸಹಾಯ ಮಾಡಬಹುದು.

ಬ್ಯಾಂಕ್‌ ಮಾಹಿತಿ

Account Name : ASHWINI BORA W/O LALITH’S BORA

Account Number : 89270100025267

IFSC : BARBOUJSHSR

MICR Code:577012204

Branch Name: Bank of Baroda
SR RASHTE, SHIMOGA, TIPPESWAMY, COMPLEX SR RASTHE SHIMOGA, SHIMOGA, KARNATAKA, INDIA

Branch Email ID :vjster@barkofbaroda.com

NO.69 2ND CROSS VINDBHA NAGARA

ಮೊಬೈಲ್ ಸಂಖ್ಯೆ : 9008685482

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...