ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಅವರು ಮಂಗಳವಾರ ನಿಧನರಾದರು. ಅವರ ನಿಧನಕ್ಕೆ ನಟ ಶಿವರಾಜ್‌ಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.
ಶಿವಮೊಗ್ಗದಲ್ಲಿ ಸಂತಾಪ ಸೂಚಿಸಿರುವ ಅವರು, “ಚಿಕ್ಕವಯಸ್ಸಿನಿಂದಲೂ ದ್ವಾರಕೀಶ್ ಅವರೊಂದಿಗೆ ಒಡನಾಡಿದ್ದೇನೆ. ಅಪ್ಪಾಜಿ ಜತೆಗಿನ ಅವರ ಒಡನಾಟ ಹೆಚ್ಚಾಗಿತ್ತು. ದ್ವಾರಕೀಶ್ ಅವರ ಪ್ರೊಡಕ್ಷನ್ಸ್‌ನಲ್ಲಿ ನಾನು ‘ಆಯುಷ್ಮಾನ್‌ಭವ’ ಸಿನಿಮಾ ಮಾಡಿದ್ದೇನೆ. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಲೋಕಸಭಾ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಿಪಿಐ ಬೆಂಬಲ ಘೋಷಣೆ
“ದ್ವಾರಕೀಶ್ ಅವರ ನಗು ಮುಖವನ್ನೇ ಸದಾ ನೆನೆಯುತ್ತ ಬೀಳ್ಕೊಡುವೆ. ಹೋಗಿಬನ್ನಿ ದ್ವಾರಕೀಶ್ ಮಾಮ” ಎಂದು ಸಂತಾಪ ಸೂಚಿಸಿದ್ದಾರೆ.





