ಶಿವಮೊಗ್ಗದಲ್ಲಿ ನಡೆದ ಹಬ್ಬಗಳ ಆಚರಣೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಸಮಸ್ಯೆ ತಂದಿಟ್ಟವರ ವಿರುದ್ಧ ಇನ್ನೂ ಸಹ ಕೇಸ್ ಮುಂದುವರಿದಿದೆ.
ಇದಕ್ಕೆ ಸಾಕ್ಷಿ ಎಂಬಂತೆ ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.
ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಅಮೀರ್ ಅಹಮದ್ ಸರ್ಕಲ್ನ ಸಮೀಪ ಸಾರ್ವಜನಿಕರಿಗೆ ತೊಂದರೆ ಕೊಟ್ಟು ನಿಂದಿಸಿದ್ದಷ್ಟೆ ಅಲ್ಲದೆ ಸಾರ್ವಜನಿಕರಜೊತೆಗೆ ಅಸಭ್ಯವಾಗಿ (BNS), 2023 (U/s-292) ಅಡಿಯಲ್ಲಿ ಸಾರ್ವಜನಿಕರಿಗೆ ಉಪದ್ರ ನೀಡಿದ ಆರೋಪದ ಅಡಿಯಲ್ಲಿ ಎರಡು ಕೇಸ್ಗಳು ದಾಖಲಾಗಿವೆ.
ಒಟ್ಟಾರೆ 11 ಮಂದಿ ವಿರುದ್ಧ ಕೇಸ್ ದಾಖಲಿಸಲಾಗಿದ್ದು, ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದು ತಿಳುವಳಿಕೆ ನೀಡಿದರು ಕೇಳದ ಜನರಿಗೆ ಉಪದ್ರ ನೀಡಿದ ಆರೋಪದ ಅಡಿಯಲ್ಲಿ ನ್ಯಾಯಾಲಯ ಅನುಪತಿ ಪಡೆದು ಇಲ್ಲಿನ ಎಎಸ್ಐ ಸುಮೊಟೋ ಕೇಸ್ದ್ ದಾಖಲಿಸಿದ್ದಾರೆ.





