ಶಿವಮೊಗ್ಗ ಹೊರವಲಯದ ಹರಿಗೆ – ಶುಗರ್ ಫ್ಯಾಕ್ಟರಿ ಮಧ್ಯೆ ರಸ್ತೆಯಲ್ಲಿ ಬೈಕ್ ಸವಾರ ಮತ್ತೊಂದು ಬೈಕ್ ಗೆ ಡಿಕ್ಕಿಯಾಗಿ ನಂತರ ಆಟೋಗೆ ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿರುತ್ತದೆ.
ಈ ಅಪಘಾತದಲ್ಲಿ ಆಟೋ ಚಾಲಕ ಬೈಕ್ ಅಪಘಾತ ತಪ್ಪಿಸುವ ಸಲುವಾಗಿ ರಸ್ತೆಯಿಂದ ಆಚೆಗೆ ಆಟೋ ಏಳಿದಿದ್ದು ಆಟೋದಲ್ಲಿದ್ದ ಪ್ರಯಾಣಿಕರೊಬ್ಬರು ಅಪಘಾತದಿಂದ ಪಾರಾಗಿದ್ದಾರೆ ಎಂಬ ಮಾಹಿತಿಯಾಗಿದೆ.
ಅಪಘಾತದಲ್ಲಿ ಬೈಕ್ ಸವಾರ ಹಾಗೂ ಹಿಂಬದಿ ಸವಾರನಿಗೆ ಪೆಟ್ಟಾಗಿದೆ. ಬೈಕ್ ಸವಾರನಿಗೆ ತುಂಬಾ ಪೆಟ್ಟಾದ ಕಾರಣ ಮುಂಚಿತವಾಗಿ ಸ್ಥಳೀಯರು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿರುತ್ತದೆ.
ಅಪಘಾತ ಸಂಬಂಧ ಸ್ಥಳಕ್ಕೆ ERSS ಪೊಲೀಸ್ ಸಿಬ್ಬಂದಿಗಳು ಮತ್ತು ಆಂಬುಲೆನ್ಸ್ ಆಗಮಿಸಿದ್ದು, ಬೈಕ್ ಹಿಂಬದಿ ಸವಾರನನ್ನ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ರವಾನಿಸಿದ್ದಾರೆ.
ಅಪಘಾತದಲ್ಲಿ ಯಾವದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಈ ಸಂಬಂಧ ಪೊಲೀಸ್ ತನಿಖೆ ಮೂಲಕ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.
ಹಲವು ವರ್ಷಗಳಿಂದ ಈ ರಸ್ತೆ ಗುಂಡಿ ಬಿದ್ದಿದೆ, ರಾಜಕಾರಣಿಗಳು ಮತ್ತು ಅಧಿಕಾರಿಗಳು ರಸ್ತೆ ಡಾಂಬರಿಕರಣ ಮಾಡುವ ಗೋಜಿಗೆ ಹೋಗುತ್ತಿಲ್ಲ.ರಾತ್ರಿ ವೇಳೆಯಲ್ಲಿ ಬೀದಿ ದೀಪಗಳಿಲ್ಲ ಇದರಿಂದ ರಸ್ತೆ ಗುಂಡಿ ಕಾಣಿಸಲ್ಲವಾಗಿದೆ.
ಈ ರಸ್ತೆಯಲ್ಲಿ ಅಪಘಾತ ಸರ್ವೇ ಸಾಮಾನ್ಯವಾಗಿದೆ ಹಾಗೂ ಮೊನ್ನೆ ಕೆಲವು ದಿನಗಳ ಹಿಂದೆ ಯುವತಿಯೊಬ್ಬಳು ಇದೆ ರಸ್ತೆಯಲ್ಲಿ, ಅಪಘಾತದಲ್ಲಿ ಮೃತಾಪಟ್ಟಿದ್ದಲು. ಇಷ್ಟೆಲ್ಲಾ ಆಗುತ್ತಿದ್ದರು, ಇನ್ನೆಷ್ಟು ಬಲಿಗೆ ಅಧಿಕಾರಿಗಳು ರಾಜಕಾರಣಿಗಳು ಕಾದು ಕೂತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.





