ಶಿವಮೊಗ್ಗ, ಇಬ್ಬರು ಪುಟಾಣಿ ಮಕ್ಕಳು ಅಂಗನವಾಡಿಯಲ್ಲಿ ಜಗಳಾಡಿದ್ದರಿಂದ ಕುಪಿತಗೊಂಡ ಸಹಾಯಕಿ, ಚಾಕುವನ್ನು ಕಾಯಿಸಿ ಒಂದು ಮಗುವಿಗನ ಮುಖಕ್ಕೆ ಬರೆ ಕೊಟ್ಟಿರುವ ಘಟನೆ ಸೊರಬ ‘ತಾಲ್ಲೂಕಿನ ಇಂಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಸವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸಂಭವಿಸಿದೆ.
ಸಹಾಯಕಿಯೊಬ್ಬರು ಮೂರೂವರೆ ವರ್ಷದ ಮಗುವಿಗೆ ಬರೆ ಕೊಟ್ಟಿದ್ದು, ಮಗು ಸುಟ್ಟ ಗಾಯದಿಂದ ಬಳಲಿದೆ’ ಎಂದು ಪಾಲಕರು ದೂರಿದ್ದಾರೆ. ಮಗುವಿನ ಮುಖದಲ್ಲಿ ಸುಟ್ಟ ಗಾಯಗಳಾಗಿದ್ದು, ಬೊಬ್ಬೆಗಳು ಬಂದಿವೆ. ಪಟ್ಟಣದ ಸಾರ್ವಜನಿಕಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
‘ಮಕ್ಕಳನ್ನು ಆರೈಕೆ ಮಾಡಬೇಕಿರುವ ಸಹಾಯಕಿಯರು ಈ ರೀತಿ ವರ್ತಿಸಿದರೆ ಯಾವ ಧೈರ್ಯದ ಮೇಲೆ ಅಂಗನವಾಡಿಗೆ ಪಾಲಕರು ಕಳಿಸಬೇಕು ಎಂದು ಪ್ರಶ್ನಿಸಿರುವ ಪಾಲಕರು,
ಈ ಕುರಿತು ಕೂಡಲೇ ಕ್ರಮ ವಹಿಸಿ ತಪ್ಪಿತಸ್ಥ ಸಹಾಯಕಿ ವಿರುದ್ಧ ಕ್ರಮ ಕೈಗೊಳ್ಳಬೇಕುಎಂದು ಒತ್ತಾಯಿಸಿದ್ದಾರೆ. ಅಂಗನವಾಡಿ ಸಹಾಯಕಿ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಪಾಲಕರು ದೂರು ನೀಡಿದ್ದಾರೆ.
ಈ ಬಗ್ಗೆ ಮೂರು ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಿ ಸಹಾಯಕಿಗೆ ನೋಟಿಸ್ ನೀಡಲಾಗಿದೆ ಎಂದು ಸಿಡಿಪಿಒ ದೇನ್ಯಾ ನಾಯ್ಕ ತಿಳಿಸಿದ್ದಾರೆ.





