ಶಿವಮೊಗ್ಗ, ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (APCR)ಒಂದು ರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿದ್ದು, ಇದರ ಜಿಲ್ಲಾ ಶಾಖೆಯನ್ನು ಜುಲೈ 20ರಂದು ಶಿವಮೊಗ್ಗದಲ್ಲಿ ಉದ್ಘಾಟಿಸಲಾಗುವುದು.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಜಿಲ್ಲಾ ಸಂಚಾಲಕ ಆರ್ ಟಿ ನಟರಾಜ್, ದಿಲ್ಲಿ ಸೊಸೈಟಿ ನೋಂದಣಿ ಕಾಯ್ದೆ ಅಡಿಯಲ್ಲಿ ಕಾನೂನಿನಂತೆ ನೋಂದಾಯಿತವಾಗಿದೆ. ಇದಕ್ಕೆ 18ಕ್ಕೂ ಹೆಚ್ಚು ರಾಜ್ಯಗಳಲ್ಲಿ ಚಾಪ್ಟರ್‌ಗಳು ಇದ್ದು, ಪ್ರತಿ ರಾಜ್ಯದಲ್ಲೂ ಶೋಷಿತ, ದಮನಿತ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದೆ ಎಂದರು.

ಕರ್ನಾಟಕದಲ್ಲಿ 24 ಜಿಲ್ಲೆಯಲ್ಲಿ ಸಂಘಟನೆಯು ಕಾನೂನು ಮತ್ತು ಮಾನವೀಯ ಮೌಲ್ಯಗಳ ಪರ ಹೋರಾಟವನ್ನು ಮುಂದುವರಿಸಿದೆ ಎಂದರು.
ಶಿವಮೊಗ್ಗ ಜಿಲ್ಲಾ ಘಟಕವನ್ನು ಪ್ರೆಸ್ ಟ್ರಸ್ಟ್ ಸಭಾಂಗಣದಲ್ಲಿ 20ರ ಬೆಳಗ್ಗೆ 11ಗಂಟೆಗೆ ಹೈಕೋರ್ಟ್ ನ್ಯಾಯವಾದಿ ಸುಧೀರ್ ಕುಮಾರ್ ಮರೊಳ್ಳಿ ಉದ್ಘಾಟಿಸುವರು.ಹೈಕೋರ್ಟ್ ನ್ಯಾಯವಾದಿಗಳಾದ ಸರೋಜ ಪಿ. ಚಂಗೊಳ್ಳಿ, ಕೆ.ಪಿ. ಶ್ರೀಪಾಲ್, ಶಹರಾಜ್ ಸಿದ್ಧಿಕಿಆಗಮಿಸುವರು.. ಅಧ್ಯಕ್ಷತೆಯನ್ನುಜಿಲ್ಲಾ ಸಂಚಾಲಜ ಆರ್.ಟಿ. ನಟರಾಜ್ ವಹಿಸುವರೆಂದರು.
ಕಾನೂನು ಅರಿವು ಅಭಿಯಾನಗಳು
ಹಳ್ಳಿ ಹಳ್ಳಿಗಳವರೆಗೆ ಜನಸಾಮಾನ್ಯರಿಗೆ ಅವರ ಸಂವಿಧಾನಿಕ ಹಕ್ಕುಗಳನ್ನು ಪರಿಚಯಿಸುವ ಕಾರ್ಯಕ್ರಮಗಳು.ಬಡವರು, ಹಿಂದುಳಿದವರು, ಮಹಿಳೆಯರು, ಮಕ್ಕಳು, ದಲಿತರು ಮತ್ತು ಅಲ್ಪಸಂಖ್ಯಾತರಿಗಾಗಿ ನೆರವು ಮತ್ತು ಮಾರ್ಗದರ್ಶನ.ಸಾಮಾಜಿಕ ಕಾರ್ಯಕರ್ತರಿಗೆ ತರಬೇತಿ ಶಿಬಿರಗಳನ್ನು ಸಂಸ್ಥೆ ಏರ್ಪಡಿಸಲಿದೆ ಎಂದರು.
ಮರ್ದಿತ ವ್ಯಕ್ತಿಗಳ ಹಕ್ಕುಗಳನ್ನು ಕಾನೂನು ಮೂಲಕ ರಕ್ಷಿಸುವ ಪ್ರಯತ್ನ. ಅನ್ಯಾಯಕ್ಕೊಳಗಾದ ವ್ಯಕ್ತಿಗಳಿಗೆ ಉಚಿತ ಕಾನೂನು ನೆರವು ಕೊಡಿಸಲಿದೆ ಎಂದರು.





