ಶಿವಮೊಗ್ಗ, ಕುಳುವ ಯುವ ಸೇನೆಯಿಂದ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಈ ಮಾಹಿತಿ ತಿಳಿಸಿದ್ದಾರೆ. ಅದೇನಂದರೆ ಸರ್ಕಾರವೇ ಗುರುತಿಸಿದ ಕೊರಮ, ಕೊರಚ ಸಮುದಾಯಗಳು ಸೇರಿದಂತೆ 51 ಅಲೆಮಾರಿಗಳ ಅರೆ ಅಲೆಮಾರಿ ಪಟ್ಟಿಯಿಂದ ಹೊರಗಿಟ್ಟು, ಸಾಮಾಜಿಕ ಬಹಿಷ್ಕಾರದಂತಹ ಪೂರ್ವಯೋಜಿತ ಸಮಾವೇಶಕ್ಕೆ ಮುಂದಾಗಿ ಸಭೆಯಲ್ಲಿ ಸದರಿ ಸಮುದಾಯಗಳನ್ನು ಅಪಮಾನಿಸಿದ್ದಲ್ಲದೆ, ಅದೇ ಸಮುದಾಯದ ಮಹಿಳೆಯರ ಮೇಲೆ ಹಾಗೂ ಅಲೆಮಾರಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿಯವರುಗಳ ಮೇಲಿನ ಹಲ್ಲೆ ಖಂಡನೀಯ. ಇದು ನಾಗರೀಕ ಸಮಾಜದ ವಿರೋಧವಾಗಿದೆ ಈ ಸದರಿ ಘಟನೆಯ ಸಮಗ್ರ ತನಿಖೆಗೆ ಕುಳುವ ಯುವ ಸೇನೆ, ಶಿವಮೊಗ್ಗ ಒತ್ತಾಯಿಸುತ್ತದೆ ಎಂದಿದ್ದಾರೆ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ಘಟನೆ ಪೂರ್ವಯೋಜಿತವಾದದ್ದು ಹಾಗೂ ಅಲೆಮಾರಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿಯವರ ಮೇಲಿನ ಹಲ್ಲೆ ಖಂಡನೀಯ, ತನಿಖೆಗೆ ಈ ಮೂಲಕ ದೂರು ದಾಖಲಿಸಿ ಕುಳುವ ಯುವ ಸೇನೆ ಆಗ್ರಹಿಸುತ್ತದೆ ಎಂದು ದಿನಾಂಕ 5-07-2025 ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯರವರ ನೇತೃತ್ವದ ವಿವಾದಿತ ಖಾಸಗಿ ಕಾರ್ಯಕ್ರಮದ ಮೂಲಕ ಅಲೆಮಾರಿ ಪಟ್ಟಿಯಿಂದ ಕೊರಮ, ಕೊರಚ ಸಮುದಾಯಗಳನ್ನು ತುಳಿದು.

ವಿವಿಧ ಬೇಡಿಕೆಗಳಿಗೆ ಅರ್ಹವಲ್ಲದ ಜನರಿವರು, ಒಂದೆಡೆ ಒಳ ಮೀಸಲಾತಿಯು ಕೊಡದಿರಿ, ಇನ್ನೊಂದೆಡೆ 51 ಸಮುದಾಯಗಳ ಅಲೆಮಾರಿ ಪಟ್ಟಿಯಲ್ಲಿ ಇವೆರೆಡು ಬದುಕುಗಳಿಗೆ ಗೋರಿ ಕಟ್ಟಿಬಿಡಿ ಎನ್ನುವ ಪರೋಕ್ಷ ಹಾಗೂ ಪ್ರತ್ಯೇಕ್ಷ ಸಾಕ್ಷೀಭೂತ ಸಂದೇಶವನ್ನು ರಾಜ್ಯ ಸರ್ಕಾರಕ್ಕೆ ಹಾಗೂ ನಾಗರೀಕ ಸಮಾಜಕ್ಕೆ ರವಾನಿಸಿದ ಮಾಜಿ ಸಚಿವ ಹೆಚ್.ಆಂಜನೇಯನವರು 49 ಅಲೆಮಾರಿಗಳ ಪಂಗಡಗಳನ್ನು ಕೊರಮ, ಕೊರಚ ಸಮುದಾಯಗಳನ್ನು ಎತ್ತಿಕಟ್ಟಿ ಪ್ರಚೋದಿಸಿದ್ದು ಯಾವ ಸಾಮಾಜಿಕ ನ್ಯಾಯ ಎಂಬುದನ್ನು ಇದೀಗ ಕೇಸು ದಾಖಲಿಸಿಕೊಂಡು ತನಿಖಿಸುತ್ತಿರುವ ಹೈಂಡ್ ಪೊಲೀಸರು ಇದೊಂದು ಸಾಮಾಜಿಕ ಬಹಿಷ್ಕಾರ ಎಂದೇ ಪರಿಗಣಿಸಬೇಕಾಗುತ್ತದೆ,ಇದೊಂದು ರಾಜ್ಯದಲ್ಲಿರುವ ಕೊರಮ.ಕೊರಚ ಸಮುದಾಯಗಳಿಗೆ ನೋವು ತರಿಸಿದ್ದು ಕುಳುವ ಯುವ ಸೇನೆಯ ಮನವಿ ದೂರನ್ನು ಸ್ವೀಕರಿಸಿ ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಗಾಂಧಿ ಭವನದಲ್ಲಿ ಕೊರಮ, ಕೊರಚ ಸಮುದಾಯಗಳ ಮಹಿಳೆಯರ ಮೇಲಿನ ಹಲ್ಲೆ ಹಾಗೂ ಸಮುದಾಯಗಳನ್ನು ಪ್ರಚೋದಿಸುವ ಹುನ್ನಾರ,
ಹಾಗೂ ಓರ್ವ ಪ್ರಬುದ್ಧಮಾನದ ಅಲೆಮಾರಿ ನಿಗಮದ ಅಧ್ಯಕ್ಷೆ ಬಿ.ಪಲ್ಲವಿಯವರ ಸಮಾಜನ ಮುಖ್ಯವಾಹಿನಿಯ ನಾಯಕತ್ವ ಸಹಿಸದ ಅಸಹಿಷ್ಣುತೆ, ಸಮಾಜದಲ್ಲಿ ಈ ಸಮುದಾಯಗಳ ಮೇಲಿನ ಬಹಿರಂಗ ತುಳಿತ, ಶೋಷಣೆಗಳನ್ನು ಯಥವತ್ತಾಗಿ ಬಿಂಬಿಸಿದ ಘಟನೆ ಇದಾಗಿದೆ. ಇದೊಂದು ಪೂರ್ವಯೋಜಿತ ಷಡ್ಯಂತ್ರ, ಹುನ್ನಾರವಾ ಈ ಘಟನೆಯಲ್ಲಿ ಹಲ್ಲೆಗೆ ಯತ್ನಿಸಿದ ರಂಗೇನಹಳ್ಳಿಯ ಲೋಹಿತಾಕ್ಷ, ದಾವಣಗೆರೆಯ ವೀರೇಶ್, ಬಳ್ಳಾರಿಯ ಶಿವು, ಬೆಂಗಳೂರಿನ ಬಸವರಾಜ್, ಸುಭಾಷ್ ಚೌಹಾಣ್, ಶಂಕರ್ ಕುಮಾರ್, ಶಿವಮೊಗ್ಗದ ಚಾವಡೆ ಲೋಕೇಶ್ ರವರುಗಳ ವಿಚಾರಣೆಗೊಳಪಡಿಸಿ ಇದಕ್ಕೆ ಪ್ರಚೋದಿಸಿದವರು ಯಾರು..? ಎನ್ನುವುದನ್ನು,
ತನಿಖೆ ನಡೆಸುವ ಮೂಲಕ ಅದರ ಮೇಲು ಕೇಸು ದಾಖಲಿಸುವಂತೆ ಕುಳುವ ಯುವ ಸೇನೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೂರು ಮನವಿ ಅರ್ಪಿಸಿ ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.





