ಶಿವಮೊಗ್ಗ ನಗರದ ಗಾಂಧಿ ಬಜಾರ್ ನಲ್ಲಿ ಬೀದಿ ಬದಿ ವ್ಯಾಪಾರ ಮಾಡುವವರು ಫುಟ್ ಪಾತ್ ಒತ್ತುವರಿ ಮಾಡಿಕೊಂಡಿದ್ದು ಹಲವಾರು ವರ್ಷಗಳಿಂದ ಬಗೆಹರಿಯದಿದ್ದ ಸಮಸ್ಯೆಯನ್ನ ಶಿವಮೊಗ್ಗ ನಗರಕ್ಕೆ ಕೆಲವು ತಿಂಗಳ ಹಿಂದೆ ಸರ್ಕಲ್ ಇನ್ಸ್ಪೆಕ್ಟರ್ ಆಗಿ ವರ್ಗಾವಣೆಯಾಗಿ ಬಂದಂತ ದೇವರಾಜ್ ಅವರ ಪರಿಶ್ರಮದಿಂದ ಇಂದು ಒತ್ತುವರಿ ತೆರವು ಕಾರ್ಯ ಯಶಸ್ವಿಯಾಗಿದೆ.
ಇದರಿಂದ ಸಾರ್ವಜನಿಕರು, ವಾಹನ ಸವಾರರು ಹಾಗೂ ವ್ಯಾಪಾರಿಗಳು ನಿಟ್ಟುಸಿರು ಬಿಡುವಂತೆ ಆಗಿದೆ, ಸಾಕಷ್ಟು ಅಡೆತಡೆಗಳ ನಡುವೆ ನಗರದಲ್ಲಿ ತಮ್ಮದೇ ಆದ ಶೈಲಿಯಲ್ಲಿ ಸಾಕಷ್ಟು ಒಳ್ಳೆಯ ಕೆಲಸಕ್ಕೆ ಪಣ ತೊಟ್ಟಿದ್ದಾರೆ,

ಕೆಲವು ತಿಂಗಳು ಹಿಂದೆ ರೈಲ್ವೆ ನಿಲ್ದಾಣದಲ್ಲಿ ಆಟೋಗಳಿಂದ ಪ್ರಯಾಣಿಕರಿಗೆ ಆಗುತ್ತಿದ್ದ ಸಮಸ್ಯೆ ಅವಲೋಕಿಸಿ ಆಟೋ ಚಾಲಕರಿಗೆ ಖಡಕ್ ವಾರ್ನಿಂಗ್ ನೀಡುವ ಮೂಲಕ ರೈಲ್ವೆ ನಿಲ್ದಾಣದಲ್ಲಿ ಸಮಸ್ಯೆ ಬಗೆಹರಿಸಿದ್ದರು.
ಹೀಗೆಯೇ ಇನ್ನು ಮುಂದೆ ನಗರದ ರಾಘವೇಂದ್ರ ಸ್ವಾಮಿ ಮಠ ರಸ್ತೆ, ಆರ್ ಎಂ ಆರ್ ರಸ್ತೆ ಹೀಗೆ ನಗರದಲ್ಲಿ ಹಲವಾರು ಕಡೆ ಪಾರ್ಕಿಂಗ್ ಸಮಸ್ಯೆ ಹಾಗೂ ಇನ್ನಿತರೇ ಸಮಸ್ಯೆಗಳು ಇದೆ. ಇದನ್ನು ಸಹ ತಮ್ಮ ಅಧಿಕಾರದ ಪರಿಮಿತಿಯಲ್ಲಿ ನಾಗರೀಕರಿಗೆ ವಾಹನ ಸವಾರರಿಗೆ ಅನುಕೂಲ ಮಾಡಲಿದ್ದಾರೆ ಎಂಬ ಭರವಸೆ ನಗರದ ಜನತೆಯಲ್ಲಿ ಮೂಡಿರುವುದಂತು ಸುಳ್ಳಲ್ಲ.
ಅದಕ್ಕೆ ಉದಾಹರಣೆ ಎಂದರೆ ಇಂದು ಅವರು ಗಾಂಧಿ ಬಜಾರ್ ನಲ್ಲಿ ಒತ್ತುವರಿ ತೆರವು ಮಾಡಿರುವ ಫೇಸ್ಬುಕ್ ಶಿವಮೊಗ್ಗ ಸಂಚಾರಿ ಪೊಲೀಸ್ ವಿಡಿಯೋಗೆ ಪ್ರಜ್ಞಾವಂತ ಜನರು ಅತ್ಯುತ್ತಮ ಕಾರ್ಯ ಮುಂದುವರಿಯಲಿ ಎಂದು ಶ್ಲಾಘನೆ ಮಾಡಿದ್ದಾರೆ.

ದೇವರಾಜ್ ಅವರು ಪ್ರಚಾರ ಪ್ರಿಯರಲ್ಲ, ಕೆಲಸ ಮಾಡಿ ತೋರಿಸುವ ಪ್ರಾಮಾಣಿಕ ಅಧಿಕಾರಿಯಾಗಿದ್ದಾರೆ ಎಂಬುದು ಜನಜನಿತವಾದ ಮಾತಾಗಿದೆ.
ಹಾಗೆಯೇ ನಗರದಲ್ಲಿ ಮತ್ತಷ್ಟು ಅತ್ಯುತ್ತಮ ಕಾರ್ಯ ದೇವರಾಜ್ ಅವರಿಂದ ಆಗುವ ನಿರೀಕ್ಷೆಯಲ್ಲಿದ್ದಾರೆ.





