ಶಿವಮೊಗ್ಗ, ದಸರಾ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತ ಸಾಗರನ ಜೊತೆ ಹೆಜ್ಜೆ ಹಾಕಿದ 35 ವರ್ಷದ ಬಾಲಣ್ಣ ಸ್ಥಿತಿ ಗಂಭೀರವಾಗಿದ್ದು ಕಾಲಿಗೆ ಆದ ನೋವಿಗೆ ಕೊಟ್ಟ ಇಂಜೆಕ್ಷನ್ ಓವರ್ ಡೋಸ್ ಆಗಿ ಬಾಲಣ್ಣನ ಕಿವಿ ಕೊಳೆತು ಹೋಗಿ ಹುಳ ಬಿಳಲು ಪ್ರಾರಂಭಿಸಿವೆ.
ಕಿವಿ ಬಿದ್ದು ಹೋಗಿ ಬಾಲಣ್ಣ ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ ಜೊತೆಗೆ ದಸರಾ ಜಂಬುಸವಾರಿ ಹೊತ್ತ ಸಾಗರ್ ಆನೆಗೂ, ವಿಕ್ರಾಂತ್, ಅಡ್ಕ ಬಡ್ಕ ಹೀಗೆ ಒಟ್ಟು ನಾಲ್ಕು ಆನೆಗಳು ಗಾಯಗೊಂಡಿದ್ದು ಸರಿಯಾದ ಚಿಕಿತ್ಸೆ ಲಭ್ಯವಾಗಿಲ್ಲ ಸೂಕ್ತ ವೈದ್ಯರುಗಳು ಲಭ್ಯರಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ಈ ಆನೆಗಳನ್ನು ನೋಡಿಕೊಳ್ಳುವ DRFO ಹಾಗೂ RFO ರಂತಹ ಅಧಿಕಾರಿಗಳು ಇವರ ಕೈ ಕೆಳಗೆ ಕಾರ್ಯನಿರ್ವಹಿಸುವ ಕಾವಾಡಿಗ, ಮಾವುತರು ಆನೆಗಳನ್ನು ಹೇಗೆ ನೋಡಿಕೊಳ್ಳುತ್ತಿದ್ದಾರೆ, ಅವುಗಳಿಗೆ ಹೇಗೆ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಜವಾಬ್ದಾರಿಯನ್ನು ನಿರ್ವಹಿಸಬೇಕು ಅವರ ದಿವ್ಯ ನಿರ್ಲಕ್ಷಕ್ಕೆ ಉದಾಹರಣೆಯಾಗಿದೆ.

ಈ ಸುದ್ದಿ ಮಾಧ್ಯಮದಲ್ಲಿ ಎಲ್ಲ ಕಡೆ ಬಿತ್ತರವಾಗಿತ್ತು ಸ್ಥಳೀಯ ಪತ್ರಿಕೆಗಳು, ರಾಜ್ಯಮಟ್ಟದ ಪತ್ರಿಕೆಗಳು, ಸುದ್ದಿ ವಾಹಿನಿಗಳಲ್ಲಿ,, ಇದರ ಬಗ್ಗೆ ಸವಿವಿಸ್ತಾರವಾಗಿ ಸುದ್ದಿ ಬಿತ್ತರವಾಗಿತ್ತು ಇವೆಲ್ಲಾ ಸುದ್ದಿಗಳ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರು ಕೂಡ ಸುದ್ದಿಗೆ ಸ್ಪಂದಿಸಿದರು.
ಇದರ ಬೆನ್ನಲ್ಲೇ ಇದೀಗ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕೂಡಲೇ ವೈದ್ಯರ ನೇಮಕವಾಗಬೇಕು ಹಾಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿದ್ದಾರೆ.





