ಶಿವಮೊಗ್ಗ ತಾಲೂಕಿನ ಹೊಳೆಬೆನವಳ್ಳಿ ಗ್ರಾಮಕ್ಕೆ ಗ್ರಾಮಠಾಣಾ ಕಲ್ಪಿಸುವಂತೆ ಆಗ್ರಹಿಸಿ ನವೆಂಬರ್ 11ರಿಂದ ಹೊಳೆಬೆನವಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು ಎಂದು ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಹೊಳೆಬೆನವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವಂತಹ ನಾವುಗಳು ಸುಮಾರು 11ರಿಂದ 12 ವರ್ಷಗಳಿಂದ ಈವರೆಗೂ ನಮಗೆ 11-ಎ ಖಾತೆಗಳು ದೊರಕಿರುವುದಿಲ್ಲ. ನಮ್ಮ ಗ್ರಾಮದಲ್ಲಿ ಗ್ರಾಮಠಾಣಾ ಇರುವುದಿಲ್ಲ. ಈ ವಿಚಾರವಾಗಿ ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ. ಕೇಳಿದರೆ ಇಲ್ಲಸಲ್ಲದ ಕಾರಣಗಳನ್ನು ಕೊಡುತ್ತ ಉಡಾಫೆ ಉತ್ತರ ಕೊಡುತ್ತ ಕಾಲಹರಣ ಮಾಡಿರುತ್ತಾರೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕೇಂದ್ರ ಸರ್ಕಾರ ರೈತರ ಕಬ್ಬಿಗೆ ಎಫ್‌ಆರ್‌ಪಿ ನಿಗದಿ ಮಾಡಲಿ: ಕೃಷಿ ಸಚಿವ ಚಲುವರಾಯಸ್ವಾಮಿ
“ಹೊಳೆಬೆನವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಠಾಣಾ ಇದ್ದರೆ, ಅದನ್ನು ಗುರುತಿಸಿಕೊಡಬೇಕು. ಒಂದು ವೇಳೆ ಗ್ರಾಮಠಾಣಾ ಇದ್ದಲ್ಲಿ ಅರ್ಹರಿಗೆ ನಿರ್ದೇನವನ್ನು ಮಂಜೂರು ಮಾಡಿ ಹಂಚಿಕೆ ಮಾಡಿಕೊಡಬೇಕು” ಎಂದು ಆಗ್ರಹಿಸಿದ್ದಾರೆ.





