ಶಿವಮೊಗ್ಗ | ಟ್ರಾವೆಲ್ ಝೋನ್ ನಿಂದ ಅನ್ಯಾಯ ; ವಿನೋಬನಗರ ಠಾಣೆಗೆ ದೂರು

Date:

ಶಿವಮೊಗ್ಗ, ನಮ್ಮ ವಿದೇಶಿ ಪ್ರವಾಸದಲ್ಲಿ ನಿಬಂಧನೆಯಂತೆ ನಡೆದುಕೊಳ್ಳದೆ, ನಮಗೆ ಸಾಕಷ್ಟು ಕಿರಿಕಿರಿಯನ್ನು ಉಂಟು ಮಾಡಿದ ಹಾಗೂ ತೊಂದರೆ ನೀಡಿದ ಶಿವಮೊಗ್ಗ ವಿನೋಬನಗರ ಸವಿ ಬೇಕರಿ ಬಳಿಯ ಟ್ರಾವೆಲ್ ಜೋನ್ ವಿರುದ್ಧ ಕ್ರಮ ಕೈಗೊಂಡು, ನಮಗೆ ನಾವು ಕಟ್ಟಿರುವ ಅರ್ಧದಷ್ಟು ಹಣವನ್ನು ವಾಪಸ್ ಕೊಡಿಸಬೇಕೆಂದು ವಿನಂತಿಸಿ ವಿನೋಬನಗರ ಪೊಲೀಸ್ ಪಿಐ ಸಂತೋಷ್ ಕುಮಾರ್ ಅವರಿಗೆ ಕಾಶಿಪುರದ ಎಸ್ ಮಂಜುನಾಥ್ ಹಾಗೂ ಪ್ರವಾಸ ಹೋಗಿದ್ದ 43 ಸ್ನೇಹಿತರು ಇಂದು ಮಧ್ಯಾಹ್ನ ದೂರು ನೀಡಿದರು.

ನಾವು 43 ಜನ ಸ್ನೇಹಿತರು ಥೈಲ್ಯಾಂಡ್ ದೇಶದ ಟ್ರಾಬಿ, ಪಟ್ಟಾಯ ಹಾಗೂ ಪುಕೇಟ್ ಗೆ ಕಳೆದ ಅಕ್ಟೋಬರ್ ಮೂರರಂದು ಶಿವಮೊಗ್ಗದಿಂದ ಪ್ರವಾಸ ಹೋಗಿದ್ದು, ನಮ್ಮ ಪ್ರವಾಸ ವ್ಯವಸ್ಥೆಯನ್ನು ಈ ಟ್ರಾವೆಲ್ ಜೋನ್ ಗೆ ನೀಡಿದ್ದೆವು. 70000 ನಿರ್ಧಾರವಾಗಿದ್ದು, ಅದನ್ನು ನೀಡಿದ್ದೆವು. ಅದಕ್ಕೆ ಪೂರಕವಾಗುವಂತೆ ಪ್ರವಾಸ, ವಸತಿ, ತಿಂಡಿ, ಊಟ, ಕ್ರೂಸ್ ಸೇರದಂತೆ ಎಲ್ಲಾ ಜವಾಬ್ದಾರಿಗಳನ್ನು ಒಪ್ಪಿಕೊಂಡಿದ್ದರು.

ಆದರೆ ನಾವು ಪ್ರವಾಸಕ್ಕೆ ಹೋಗಿದ್ದಾಗ ಯಾವುದೇ ವ್ಯವಸ್ಥೆಯನ್ನು ಮಾಡದೆ ನಮಗೆ ವಸತಿಯನ್ನು ಸಹ ಸಿಗದಂತೆ ಮಾಡಿ ಊಟ ಹಾಗೂ ತಿಂಡಿ ವ್ಯವಸ್ಥೆಯನ್ನು ಸರಿಯಾಗಿ ಮಾಡಿಲ್ಲ ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಾವು ಕೇಳಿದರೆ ಶಿವಮೊಗ್ಗದಿಂದಲೇ ಹಾರಿಕೆ ಉತ್ತರ ನೀಡುತ್ತಾ ನಮ್ಮ ಇಡೀ ಪ್ರವಾಸವನ್ನು ನಿಜಕ್ಕೂ ಅತ್ಯಂತ ಕೆಟ್ಟದನಿಸುವಂತೆ ಮಾಡಿದರು. ಬಸ್ ನಲ್ಲಿಯೇ ಉಪವಾಸ ಕೂರಬೇಕಾದಂತ ಪರಿಸ್ಥಿತಿ ನಮಗೆ ನಿರ್ಮಾಣವಾಗಿತ್ತು ಎಂದರು.

ಈ ಸಂಬಂಧ ನಾವು ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದಾಕ್ಷಣ ನಮ್ಮಿಂದ ವಂಚನೆಯಾಗಿದೆ ಎಂದು ಅನಗತ್ಯ ದೂರು ನೀಡುವ ಪ್ರಯತ್ನ ಅವರಿಂದ ನಡೆಯಿತು. ಕೂಡಲೇ ತಾವುಗಳು ಈ ಟ್ರಾವೆಲ್ ಜೋನ್ ಅವರನ್ನು ಕರೆಸಿ ನಾವು ಪ್ರವಾಸಕ್ಕೆ ಹೋಗಿರುವ ಪ್ರಯಾಣದ ವೆಚ್ಚ ಹೊರತುಪಡಿಸಿ ಉಳಿದ ಅರ್ಧದಷ್ಟು ಹಣವನ್ನು ನಮಗೆ ವಾಪಸ್ ಕೊಡಿಸಬೇಕು ಹಾಗೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಂಜುನಾಥ್, ನರಸಿಂಹ, ಆರ್ಮುಗಂ, ಸಂದೀಪ್, ಕೆ., ನಾಗರಾಜ್, ಅರುಣ್, ಲೋಹಿತ್, ರಮೇಶ್, ಲೋಕೇಶ್, ಶಂಕರ್, ರಾಜು, ಆದರ್ಶ್, ರಾಜು, ಶರತ್, ಮೋಹನ್ ರಾಜ್, ಬಂಡೆ ಶೀನಣ್ಣ ಹಾಗೂ ಇತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...