ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿ ಬಾಡಿಗೆಗಾಗಿ ಕಾಯುತ್ತ ಲಾರಿಯಲ್ಲೇ ಮಲಗಿದ್ದ ಡ್ರೈವರ್, ಕ್ಲೀನರ್‌ಗೆ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರ ತೋರಿಸಿ ಬೆದರಿಸಿ ಮೊಬೈಲ್ ಮತ್ತು ನಗದು ದರೋಡೆ ಮಾಡಿರುವ ಘಟನೆ ನಡೆದಿದೆ.
ಮೈಸೂರು ಮೂಲದ ಲಾರಿ ಚಾಲಕ ಚಂದ್ರಶೇಖರ ಮತ್ತು ಕ್ಲೀನರ್ ಹಿತೇಶ್ ನಾಯಕ ಎಂಬುವರು ಬಾಡಿಗೆಗಾಗಿ ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಲಾರಿ ನಿಲ್ಲಿಸಿದ್ದರು. ಬೆಳಗಿನ ಜಾವ 4.30ರ ವೇಳೆ ಲಾರಿಯೊಳಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಲಾಂಗ್ ತೋರಿಸಿ ಬೆದರಿಸಿ, ಲಾರಿಯಲ್ಲಿದ್ದ ಬಾಡಿಗೆ ಹಣ 20,000ರೂ, ಕ್ಲೀನರ್ ಹಿತೇಶ್ ನಾಯಕ ಬಳಿ ಇದ್ದ ಮೊಬೈಲ್ ಫೋನ್ ಕಸಿದುಕೊಂಡು ದುಷ್ಕರ್ಮಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿದ್ದೀರಾ? ಚಿಕ್ಕಮಗಳೂರು l ರೈತ ಸಂಘದ ಹೆಸರೇಳಿಕೊಂಡು ಉಚ್ಚಾಟನೆ ಮಾಡುವುದು ಸರಿಯಲ್ಲ; ರಾಜ್ಯ ರೈತ ಸಂಘ ಎಚ್ಚರಿಕೆ
ಈ ಘಟನೆ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





