ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಹೊಟೆಲ್ ಬಂದ್ ಮಾಡುವ ವೇಳೆ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಹೊಟೇಲ್ ಮಾಲೀಕನತ್ತ ಮಚ್ಚು ಬೀಸಿದ ಘಟನೆ ಭದ್ರಾವತಿಯಲ್ಲಿ ನಡೆದಿದೆ.
ರಾತ್ರಿ ೧೦ ಗಂಟೆ ಹೊತ್ತಿಗೆ ಹೊಟೇಲ್ ಬಂದ್ ಮಾಡುವಾಗ ವ್ಯಕ್ತಿಯೊಬ್ಬ ಮಚ್ಚು ಹಿಡಿದು ಬಂದಿದ್ದ. ಊಟ ಕೊಡುವಂತೆ ಕೇಳಿದ್ದ. ಹೊಟೇಲ್ ಬಂದ್ ಮಾಡುತ್ತಿರುವುದರಿಂದ ಊಟವಿಲ್ಲ ಎಂದು ಮಾಲೀಕ ರವೀಂದ್ರ ತಿಳಿಸಿದ್ದರು.
ಹೊಟೇಲ್ ಬಾಗಿಲು ಹಾಕಿ ಮಾಲೀಕ ರವೀಂದ್ರ ಹೊರಗೆ ತೆರಳುತ್ತಿದ್ದಂತೆ ಅಲ್ಲಿಯೇ ಇದ್ದ ವ್ಯಕ್ತಿ ಏಕಾಏಕಿ ಮಚ್ಚು ಬೀಸಿದ್ದಾನೆ. ರವೀಂದ್ರ ಪಾರಾಗಿ ಕೆಳಗೆ ಬಿದ್ದಿದ್ದಾರೆ. ಆದೃಷ್ಟವಶಾತ್ ಹೊಟೇಲ್ ಮಾಲೀಕ ಪಾರಾಗಿದ್ದಾರೆ.
ಭದ್ರಾವತಿಯ ವೀರಶೈವ ಸಭಾಭವನದ ಸಮೀಪ ರಾಮಾವರಂ ಹೊಟೇಲ್‌ನಲ್ಲಿ ಘಟನೆ ನಡೆದಿದೆ.ಹೊಟೇಲ್ ಸಿಬ್ಬಂದಿ ತಕ್ಷಣ ರಕ್ಷಣೆಗೆ ಧಾವಿಸಿದ್ದರು. ಆಗ ಮಚ್ಚು ಹಿಡಿದುಕೊಂಡಿದ್ದ ವ್ಯಕ್ತಿ ಕಾರಿನಲ್ಲಿ ತೆರಳಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ಭದ್ರಾವತಿ ಹಳೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





