ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಸಮೀಪದ ಬೆಕಲ್ಲು ಸಿದ್ದೇಶ್ವರ ನಗರದಲ್ಲಿನ ಮನೆಯೊಂದರಲ್ಲಿ ಕಪ್ಪು ಆಮೆ ಪತ್ತೆಯಾಗಿದೆ.
ಅರಣ್ಯ ಸಂಚಾರಿದಳ ಸಾಗರದ ಪಿಎಸ್‌ಐ ವಿನಾಯಕ ನೇತೃತ್ವದಲ್ಲಿ ಸಂಚಾರಿ ದಳದ ಸಿಬ್ಬಂದಿ ದಿಢೀರ್ ದಾಳಿ ನಡೆಸಿದೆ.

ಪ್ರಕರಣದಲ್ಲಿ ಮಹಮ್ಮದ್ ಸಮೀವುಲ್ಲಾ ಬಿನ್ ಹಮೀದ್ ಎಂಬ ಆರೋಪಿಯನ್ನು ಬಂಧಿಸಿ, ಆಮೆಯನ್ನು ವಶಪಡಿಸಿಕೊಂಡಿದೆ. ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಾಗಿದೆ





