ಶಿವಮೊಗ್ಗ DCC ಬ್ಯಾಂಕ್ ಅವ್ಯವಹಾರದ ಕೇಸಿನಲ್ಲಿ ನ್ಯಾಯಾಂಗ ಬಂದನದಲ್ಲಿರುವ DCC ಬ್ಯಾಂಕ್ ಮಾಜಿ ಅಧ್ಯಕ್ಷರು ಹಾಗೂ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ RM ಮಂಜುನಾಥ ಗೌಡರಿಗೆ ಈ ಕಾನೂನು ಸಮರದಲ್ಲಿ ಶೀಘ್ರ ನ್ಯಾಯಸಿಗಲಿ .ಈ ಆರೋಪದಿಂದ ಶೀಘ್ರವಾಗಿ ನಮ್ಮ ನಾಯಕರು ಬಿಡುಗಡೆಯಾಗಲಿ ಎಂದು ಮಂಜುನಾಥ್ ಗೌಡರ ಅಭಿಮಾನಿಯಾದ ಕುರುವಳ್ಳಿ ನಾಗರಾಜ್ ಪ್ರಾರ್ಥಿಸಿಕೊಂಡು ನಾಗಮಂಗಲ ತಾಲೂಕಿನ ಶ್ರೀ ಆದಿಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಅನ್ನದಾನ ಸೇವೆ ನಡೆಸಲಾಗಿದೆ.
ಮಂಜುನಾಥ ಗೌಡರು ಶೀಘ್ರವಾಗಿ ಸಾರ್ವಜನಿಕರ ಸೇವೆಯಲ್ಲಿ ಪಾಲ್ಗೊಳ್ಳಲಿ ಎಂದು ಪ್ರಾರ್ಥಿಸಿ ಶ್ರೀ ಕ್ಷೇತ್ರ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮಿ ಅವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ ಶ್ರೀಕಾಂತ್ ಅವರು ಸಂಪೂರ್ಣ ಸಹಕಾರ ನೀಡಿದರು, ಹಾಗೂ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಪುರುಷೋತ್ತಮ್ ಹಾಗೂ ಲೋಕೇಶ್ ರವರ ನೇತೃತ್ವದಲ್ಲಿ ಕಾಲಭೈರೇಶ್ಪರನ ದರ್ಶನ ಪಡೆದು ಪ್ರಾರ್ಥಿಸಲಾಯಿತು





