ಶಿವಮೊಗ್ಗ ನಗರದ ಹೊರವಲಯದ ಮಲವಗೊಪ್ಪ, ಶುಗರ್ ಫ್ಯಾಕ್ಟರಿಯಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತದೆ. ಈ ಸಂಬಂಧ ಟ್ರಾಫಿಕ್ ಪೊಲೀಸ್ ಇಲಾಖೆ ವತಿಯಿಂದ ಈ ಸ್ಥಳವನ್ನ ಬ್ಲಾಕ್ ಸ್ಪಾಟ್ ಎಂದು ಪರಿಗಣಿಸಿದ್ದಾರೆ.
ಬ್ಲಾಕ್ ಸ್ಪಾಟ್ ಅಂದರೆ ಬಳಹಷ್ಟು ಅಪಘಾತ ಆಗುವ ಸ್ಥಳವೆಂದು ಗುರುತಿಸಿದ್ದಾರೆ.ಇದಕ್ಕೆ ಮುಖ್ಯ ಕಾರಣವೇನೆಂದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬಹಳಷ್ಟು ವರ್ಷಗಳಿಂದ ಇಲ್ಲಿ ರಸ್ತೆಯನ್ನು ಸಂಪೂರ್ಣವಾಗಿ ಮಾಡಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.ಅದಷ್ಟೇ ಅಲ್ಲದೆ ಈ ರಸ್ತೆಯು ಬಹಳಷ್ಟು ಗುಂಡಿಗಳಿಂದ ಕೂಡಿದ್ದು ಪ್ರತಿನಿತ್ಯ ಈ ಗುಂಡಿಗಳಿಂದ ಅಪಘಾತ ಪ್ರಾಣಪಾಯ ಆಗುತ್ತಿದ್ದೂ ಜೊತೆಗೆ ವಾಹನ ಸವಾರರು ವಾಹನ ಚಾಲನೆ ಮಾಡಲು ಹೈರಾಣಗುತ್ತಿದ್ದಾರೆ.
ಅಷ್ಟು ಮಾತ್ರವಲ್ಲದೇ ಈ ರಸ್ತೆಯಲ್ಲಿ ಬಹಳಷ್ಟು ವಾಹನ ಸವಾರರು ಅಪಘಾತದಲ್ಲಿ ಕೈಕಾಲು ಮುರಿದುಕೊಂಡು ಹಾಗೂ ಕೆಲವರು ಜೀವವನ್ನು ಕಳೆದುಕೊಂಡಿದ್ದಾರೆ.ಈ ವಿಷಯವು ಬಹಳಷ್ಟು ಸುದ್ದಿ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಸುದ್ದಿಗಳು ಆಗಿರುತ್ತದೆ.ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಭಾಗಕ್ಕೆ ಒಳಗೊಂಡಿರುತ್ತದೆ.
ಇದಿಷ್ಟು ಅಲ್ಲದೆ ಮತ್ತೊಂದು ಮುಖ್ಯವಾದ ವಿಚಾರವೇನೆಂದರೆ ಈ ರಸ್ತೆಯಲ್ಲಿ ರಸ್ತೆಯ ಪಕ್ಕಕ್ಕೇನೆ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದಾರೆ. ಈ ಸಂಬಂಧ ಸಾರ್ವಜನಿಕರು, ಪಾದಚಾರಿಗಳು ರಸ್ತೆಯಲ್ಲಿ ಓಡಾಡುವಂತಗಿದ್ದು.
ರಸ್ತೆಯ ಮಧ್ಯದಲ್ಲಿ ವಾಹನವನ್ನು ದಾಟಿಕೊಂಡು ನಡೆದುಕೊಂಡು ಬರುವಂತಹ ಪರಿಸ್ಥಿತಿ ಎದುರಾಗಿದೆ.ಈ ಸಂದರ್ಭದಲ್ಲಿ ಹಿಂಬದಿಯಿಂದ ಬರುವಂತಹ ವಾಹನಗಳಿಗೆ ಈ ರೀತಿ ಪಾದಚಾರಿಗಳು ಬರುತ್ತಾರೆ ಎಂಬುದು ಅರಿವಿರುವುದಿಲ್ಲ. ಇದರಿಂದ ಅಪಘಾತಗಳು ಮತ್ತಷ್ಟು ಹೆಚ್ಚಾಗುವ ಸಂಭವವಿದೆ.
ಮತ್ತೆ ರಸ್ತೆಯ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ರಸ್ತೆಯ ಮತ್ತೊಂದು ಬದಿಯಲ್ಲಿ ಅಥವಾ ಪಕ್ಕದಲ್ಲಿ ಚರಂಡಿ ಇರುತ್ತದೆ.ಹೀಗಾಗಿ ಪಾದಚಾರಿಗಳು ಚರಂಡಿಲಿ ಇಳಿದು ನಡೆದುಕೊಂಡು ಹೋಗುವುದು ಅಸಾಧ್ಯವಾಗಿರುತ್ತದೆ.

ಹೀಗಾಗಿ ವಾಹನದ ಪಕ್ಕದಲ್ಲಿ ರಸ್ತೆ ಮಧ್ಯದಲ್ಲಿ ನಡೆದುಕೊಂಡು ಬರುತ್ತಾರೆ ಇದರಿಂದ ಬೆಳಗ್ಗೆ ಅಥವಾ ಸಂಜೆ, ರಾತ್ರಿ ವೇಳೆಯಲ್ಲಿ ಕತ್ತಲು ಇದ್ದ ಅಂತ, ಅಥವಾ ಯಾವದೇ ಸಮಯದಲ್ಲಿ ಯಾವುದೇ ಇಂಡಿಕೇಟರ್ ಮತ್ತೊಂದು ಸೂಚನೆ ಯಾವುದೇ ಇಲ್ಲದೆ ವಾಹನಗಳು ನಿಲ್ಲಿಸುತ್ತಿದ್ದಾರೆ.
ಹಿಂಬದಿಯಿಂದ ಬರುವಂತಹ ವಾಹನಗಳಿಗೆ ಇಲ್ಲಿ ವಾಹನ ನಿಂತಿರುತ್ತೆ ಎಂಬುದು ಅರಿವು ಇರುವುದಿಲ್ಲ ಜೊತೆಗೆ ಪಾದಚಾರಿಗಳು ಬರುತ್ತಿದ್ದಾರೆ ಎಂಬ ಕಲ್ಪನೆಗಳು ಇರುವುದಿಲ್ಲ.
ಈ ಸಂದರ್ಭದಲ್ಲಿ ಅಪಘಾತ ಉಂಟಾದಾಗ ಜೀವ ಹಾನಿ ನೋವು ಉಂಟಾದರೆ ಯಾರಾದಾದರೂ ಜೀವಕ್ಕೆ ಅಪಾಯ ಉಂಟಾದಾಗ ಯಾರು ಹೊಣೆ ಆಗುತ್ತಾರೆ ಎಂಬ ಪ್ರಶ್ನೆಯಾಗಿದೆ? ಆ ಕುಟುಂಬದವರಿಗೆ ಯಾರು ಆಸರೆ ಆಗುತ್ತಾರೆ ಪರಿಹಾರ ಘೋಷಣೆ ಮಾಡುವುದಾಗಲಿ ಅಥವಾ ಪ್ರಕರಣ ದಾಖಲು ಮಾಡುವುದರಿಂದ ಸಮಸ್ಯೆ ಬಗ್ಗೆ ಹರಿಯುತ್ತಾ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಷ್ಟೆಲ್ಲಾ ಸ್ಥಿತಿಗತಿಗಳು ದಿನನಿತ್ಯ ನಡೆಯುತ್ತಾನೆ ಇದ್ದರೂ ಕೂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಸಂಬಂಧ ತುರ್ತಾಗಿ ಯಾವುದೇ ಕ್ರಮ ಕೈಗೊಳ್ಳುವ ಮನಸ್ಥಿತಿಯಲ್ಲಿ ಆಗಲಿ ಇಚ್ಚಾ ಶಕ್ತಿಯನ್ನು ತೋರಿಸುತ್ತಿಲ್ಲ,ಇನ್ನೆಷ್ಟು ಬಲಿಗಾಗಿ ಕಾಯುತ್ತಿದ್ದಾರೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಭಾಗವು ಹಾಗೂ ಶಿವಮೊಗ್ಗದ ಸಂಸದರಾಗಿರುವಂತಹ ಮಾನ್ಯ ರಾಘವೇಂದ್ರರವರು ಈ ಕೂಡಲೇ ಸಮಸ್ಯೆಗೆ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸಬೇಕೆಂಬುದು ಸಾರ್ವಜನಿಕರ ಕಳಕಳಿಯ ಮನವಿಯಾಗಿದೆ.
ಜಿಲ್ಲೆಯಲ್ಲಿ ಸಮಗ್ರ ಅಭಿವೃದ್ಧಿ ಮಾಡಿರುವಂತಹ,ಅಭಿವೃದ್ಧಿ ಹರಿಕಾರವೆಂದೇ ಖ್ಯಾತಿ ಪಡೆದಿರುವ ಜನಸಾಮಾನ್ಯರ ಸಮಸ್ಯೆಗೆ ಕಾಳಜಿ ಹೊಂದಿರುವಂತಹ ಸಂಸದರಾಗಿರುವ ರಾಘವೇಂದ್ರ ಅವರು ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡುವ ಮೂಲಕ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿ ಕೊಡಬೇಕು ಎಂಬುದು ಪ್ರಜ್ಞಾವಂತರ ಆಶಯವಾಗಿದೆ.
ಇನ್ನಾದರೂ ಶಿವಮೊಗ್ಗ ಜಿಲ್ಲಾಡಳಿತವು ಸಂಬಂಧಪಟ್ಟ ಅಧಿಕಾರಿಗಳಿಗೆ ತ್ವರಿತಗತಿಯಾಗಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಸ್ತೆ ಡಾಂಬರೀಕರಣ ಮಾಡುವುದು ಹಾಗು ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳಿಗೆ ತಕ್ಕ ನಿರ್ದೇಶನ ನೀಡುವ ಮುಖಾಂತರ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿ ಮತ್ತಷ್ಟು ಜೀವ ಹಾನಿಯಾಗದಂತೆ ತಡಗಟ್ಟಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.




