ಶಿವಮೊಗ್ಗ | ರೈಲ್ವೆ ನಿಲ್ದಾಣದಲ್ಲಿ ಪ್ರಿಪೇಯ್ಡ್ ಆಟೋ ವ್ಯವಸ್ಥೆ ; ನಗರದಲ್ಲಿ ಸಂಚಲನ ಮೂಡಿಸುತ್ತಿರುವ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್

Date:

ಶಿವಮೊಗ್ಗ, ಪ್ರೀ ಪೇಯ್ಡ್ ಆಟೋ ವ್ಯವಸ್ಥೆಗೆ ಬಹುವರ್ಷದ ಕನಸು ಇತ್ತು. ಈಗ ಈ ವ್ಯವಸ್ಥೆ ಜಾರಿಗೆ ಬಂದಿದ್ದು ಕನಸು ನನಸಾಗಿದೆ.ಕೊನೆಗೂ ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಪ್ರೀ ಪೇಯ್ಡ್ (Pre Paid) ಆಟೋ ವ್ಯವಸ್ಥೆ ಜಾರಿಗೆ ಬಂದಿದೆ. ರೈಲ್ವೆ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಪ್ರಯಾಣಿಕರು ನೇರವಾಗಿ ಈ ಕೌಂಟರ್‌ಗಳತ್ತ ಆಗಮಿಸಿ ರಶೀದಿ ಪಡೆದು ಖುಷಿಯಿಂದ ಆಟೋ ಹತ್ತುತ್ತಿದ್ದಾರೆ.

ಸಂಚಾರಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ (ಸಿಪಿಐ) ದೇವರಾಜ್ ಅವರ ಖಡಕ್ ನಿರ್ಧಾರದ ಹಿನ್ನಲೆಯಲ್ಲಿ ಇಂದಿನಿಂದ ರೈಲ್ವೆ ನಿಲ್ದಾಣದಲ್ಲಿ ಪ್ರೀಪೇಯ್ಡ್ ಆಟೋ ಆರಂಭವಾಗಿದೆ. ಸದ್ಯಕ್ಕೆ ಇದೊಂದು ಟ್ರಯಲ್ ಎಂದು ಹೇಳಲಾಗುತ್ತಿದೆ.

ಮನಸೋ ಇಚ್ಛೆ ಹಣ ವಸೂಲಿ ಮಾಡುತ್ತಿದ್ದ ಕೆಲವು ಆಟೋ ಚಾಲಕರಿಗೆ ಮೂಗುದಾರ ಬಿದ್ದಂತಾಗಿದೆ. ಪೊಲೀಸರ ಈ ಕ್ರಮದಿಂದಾಗಿ ನಾಗರಿಕರು ನಿರಾಳವಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1002431710

ಕಳೆದ 10 ವರ್ಷದಿಂದ ಶಿವಮೊಗ್ಗದಲ್ಲಿ ಪ್ರೀಪೇಯ್ಡ್ ಆರಂಭಿಸಬೇಕು ಎಂದು ತೀರ್ಮಾನಿಸಿ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ಆರಂಭಿಸಬೇಕು ಎಂಬುದನ್ನ ನಿರ್ಧರಿಸಲಾಗಿತ್ತು. ಆದರೆ ಅನೇಕ ಅಡಚಣೆಯಿಂದಾಗಿ ಆರಂಭವಾಗಿರಲಿಲ್ಲ. ಇದಕ್ಕೆಲ್ಲ ಒಂದು ಇಚ್ಛಾಶಕ್ತಿಯಕೊರತೆಯ ಕಾರಣವಾಗಿತ್ತು. ಆ ಇಚ್ಛಾಶಕ್ತಿ ಸಿಪಿಐ ದೇವರಾಜ್ ರಿಂದ ನೆರವೇರಿದೆ. ಮತ್ತಷ್ಟು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಭರವಸೆ ಪ್ರಜ್ಞಾವಂತ ಜನರಲ್ಲಿ ಹೆಚ್ಚಾಗಿದೆ.

ರೈಲ್ವೆ ನಿಲ್ದಾಣದಿಂದ ವಿವಿಧ ಬಡಾವಣೆಗಳಿಗೆ ತೆರಳಲು ಆಟೋ ಚಾಲಕರು ನಿಗದಿಗಿಂತಲು ಹೆಚ್ಚು ಹಣ ಪಡೆಯುತ್ತಿದ್ದರು. ಲಗೇಜು, ಕುಟುಂಬ ಸಹಿತ ಬಂದವರು, ತುರ್ತು ತೆರಳಬೇಕಿರುವವರು ಅನಿವಾರ್ಯವಾಗಿ ದುಬಾರಿ ಹಣ ಕೊಟ್ಟು ಆಟೋ ಹತ್ತುವಂತಾಗಿತ್ತು.

ಈಗ ರೈಲ್ವೆ ನಿಲ್ದಾಣದ ಆವರಣದಲ್ಲಿ ಎರಡು ಬದಿಯಲ್ಲಿ ಪ್ರೀ ಪೇಯ್ಡ್ ಆಟೋ ಕೌಂಟರ್ ಆರಂಭಿಸಲಾಗಿದೆ. ಪ್ರಯಾಣಿಕರು ರೈಲು ಇಳಿದು ಈ ಕೌಂಟರ್‌ಗಳಿಗೆ ತೆರಳಿ ರಶೀದಿ ಪಡೆಯಬಹುದು.

ಪ್ರಸ್ತುತ ರಶೀದಿ ನೀಡಲು ಹೋಂ ಗಾರ್ಡ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪ್ರಯಾಣಿಕರು ಪ್ರೀ ಪೇಯ್ಡ್ ಕೌಂಟರ್‌ಗೆ ತೆರಳಿ ತಾವು ತೆರಳಬೇಕಿರುವ ಸ್ಥಳದ ಹೆಸರು ತಿಳಿಸಬೇಕು.ಹೋಂ ಗಾರ್ಡ್ ಸಿಬ್ಬಂದಿ ರಶೀದಿ ನೀಡಲಿದ್ದಾರೆ. ಅದರಲ್ಲಿ ನಿಗದಿತ ಮೊತ್ತ ಮುದ್ರಿತವಾಗಿರಲಿದೆ. ಆಟೋ ಇಳಿಯುವಾಗ ಅಷ್ಟು ಮೊತ್ತವನ್ನು ನೀಡಬೇಕು. ಆಟೋ ಚಾಲಕರು ನಿಗದಿಗಿಂತಲು ಹೆಚ್ಚು ಹಣ ಕೇಳಿದರೆ ಕಂಟ್ರೋಲ್ ರೂಂ ನಂಬರ್‌ಗೆ ಕರೆ ಮಾಡಬಹುದಾಗಿದೆ.

ಹಬ್ಬಕ್ಕೆ ಸರಿಯಾಗಿ ರೈಲ್ವೆ ನಿಲ್ದಾಣದಲ್ಲಿ ಟ್ರಯಲ್ ಪ್ರೀಪೇಯ್ಡ್ ಆಟೋ ಆರಂಭಿಸಲಾಗಿದ್ದು, ಒಂದು ಬಿಲ್ ನ್ನೂ ಸಹ ಹಾಕಲಾಗಿದೆ. ಪ್ರಯಾಣಿಕರೊಬ್ಬರು ರೈಲ್ವೆ ನಿಲ್ದಾಣದಿಂದ KSRTC ಬಸ್ ನಿಲ್ದಾಣದವರೆಗೆ 62 ರೂ. ಹಣ ನೀಡಿದ್ದಾರೆ.

1002431724

ಈ ಮೊದಲು ರೈಲ್ವೆ ನಿಲ್ದಾಣದ ಮುಂಭಾಗ ಯದ್ವತದ್ವ ಆಟೋ ನಿಲ್ಲಿಸಿ, ಪ್ರಯಾಣಿಕರಿಗೆ ಸಮಸ್ಯೆ ಉಂಟು ಮಾಡಲಾಗುತ್ತಿತ್ತು. ಈಗ ಅದೆಲ್ಲದಕ್ಕು ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಅವರ ಕಾರ್ಯಕ್ಷಮತೆಯಿಂದ ಬ್ರೇಕ್ ಬಿದ್ದಿದೆ. ಪ್ರೀ ಪೇಯ್ಡ್ ಆಟೋ ವ್ಯವಸ್ಥೆ ಜಾರಿಗೊಳಿಸಿ ಮನಸೋಯಿಚ್ಛೆ ಹಣ ವಸೂಲಿಗು ಟ್ರಾಫಿಕ್ ಪೊಲೀಸ್ ಬ್ರೇಕ್ ಹಾಕಿದ್ದಾರೆ.

ಇದೇ ರೀತಿಯೆ ಶಿವಮೊಗ್ಗದ ಕೆ.ಎಸ್‌.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು ಇರುವ ಬಸ್‌ ನಿಲ್ದಾಣದ ಎದುರು ಇರುವ ಆಟೋ ನಿಲ್ದಾಣಗಳಲ್ಲಿ ಸಮಸ್ಯೆ ಇಲ್ಲೂ ಪ್ರೀ ಪೇಯ್ಡ್ ಕೌಂಟರ್ ತೆರಯಬೇಕು ಇಲ್ಲೂ ಸಹಾ ರಾತ್ರಿ ಸಮಯದಲ್ಲಿ ಬರುವ ಪ್ರಯಾಣಿಕರಿಂದ ಆಟೊ ಚಾಲಕರ ಮನೋಸೋ ಇಚ್ಚೆ ಹಣ ಪಿಕುತ್ತಿದ್ದಾರೆ.

ಅದರಲ್ಲೂ ಬೆಳಗಿನ ಜಾವ ಇವರು ಕೇಳಿದಷ್ಟು ಹಣ ನೀಡಬೇಕು ಇಲ್ಲದಿದ್ದರೆ ಮುಂದೆ ಹೊಗಿ, ಆಟೊ ಹತ್ತಲು ಬಿಡುವುದಿಲ್ಲ ಜಗಳಕ, ಕೆಟ್ಟ,ಕೊಳಕು ಮಾತಿಗೆ ಇಳಿಯುತ್ತಾರೆ.

ಪ್ರಯಾಣಿಕರು ಕುಟುಂಬದ ಹೆಂಡತಿ ಮಕ್ಕಳು ಎದುರು ಜಗಳವೇಕೆ ಎಂದು ಕೇಳಿದಷ್ಟು ಹಣ ನೀಡಿ ಹೋಗುತ್ತಾರೆ ಅದರಲ್ಲೂ ವಯಸ್ಸು ಆದವರ ಮೇಲು ಆಟೋದವರ ದಬ್ಬಾಳಿಕೆ ಜಗಳ ಸಕಾಷ್ಟು ಸಲ ಅದರು ಜಿಲ್ಲಾಡಳಿತದ ಗಮನಕ್ಕೂ ತಂದರು ಕ್ರಮವಯಿಸಿಲ್ಲ ಎಂಬುದು ಆರೋಪವಾಗಿದೆ. ಇನ್ನಾದರು ಇಲ್ಲಿ ಪ್ರೀ ಪೇಯ್ಡ್ ಕೌಂಟರ್ ತೆರೆಯಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಶಿವಮೊಗ್ಗ ನಗರದಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಹಿಡಿದು ಆಟೋ ಪ್ರಿಪೇಯ್ಡ್ ಹಾಗೂ ಸುಗಮ ಸಂಚಾರ ನಿಯಮಕ್ಕೆ ಮತ್ತು ನೊ ಪಾರ್ಕಿಂಗ್ ವ್ಯವಸ್ಥೆ ಪ್ರತಿಯೊಂದನ್ನು ಹಂತ ಹಂತವಾಗಿ ಸರಿಪಡಿಸಲು ಕಾಲಿಗೆ ಚಕ್ರ ಹಾಕಿಕೊಂಡು ಕರ್ತವ್ಯ ಮಾಡುತ್ತಿದ್ದಾರೆ.

ಮೊನ್ನೆ ದಿವಸ ಗಾಂಧಿ ಬಜಾರ್ ನಲ್ಲಿ ಪುಟ್ ಪಾತ್ ಒತ್ತುವರಿ ತೆರವುಗೊಳಿಸಿದ್ದರು. ನಂತರ ನಗರದ ಗೋಪಿ ಸರ್ಕಲ್ ಎಂ ಜಿ ಪ್ಯಾಲೇಸ್ ನಲ್ಲಿ ಸಹ ಸಭೆ ನಡೆಸುವ ಮೂಲಕ ನಗರದ ಎಲ್ ಎಲ್ ಆರ್ ರಸ್ತೆ, ಆರ್ ಎಂ ಆರ್ ರಸ್ತೆ ಅನೇಕ ಸ್ಥಳಗಳಲ್ಲಿ ಸುಗಮ ಸಂಚಾರಕ್ಕೆ ನಿಮ್ಮೆಲರ ಸಹಕಾರ ಆಗತ್ಯವೆಂದು ಸಭೆಯಲ್ಲಿ ಮಾಹಿತಿ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ.

ನಮ್ಮ ಈದಿನ ಡಾಟ್ ಕಾಮ್ ಕೆಲವು ದಿನಗಳ ಹಿಂದೆ ಟ್ರಾಫಿಕ್ ಸಂಬಂಧ ಸುದ್ದಿ ಮಾಡಿದ್ದೂ ಅದರಂತೆ ನಾಗರಿಕರಿಗೆ ಆಗುತ್ತಿರುವ ದಿನ ನಿತ್ಯದ ಸಮಸ್ಯೆಗೆ, ಸ್ಪಂದಿಸಿ ನಾವು ನೀವು ಮಾಧ್ಯಮ ಎಲ್ಲರೂ ಒಟ್ಟಾಗಿ ಇದಕ್ಕೆ ಪರಿಹಾರ ಒದಗಿಸೋಣ ಎಂದು ತಿಳಿಸಿದ್ದರು.

ಅದರಂತೆ ಎಲ್ಲೂ ಪ್ರಚಾರದಗೀಳಿಗೆ ಬೀಳದೆ ತಮ್ಮ ಪ್ರಾಮಾಣಿಕ ಕೆಲಸವನ್ನು ಮಾಡುತ್ತ ಬರುತ್ತಿದ್ದಾರೆ ಮುಂದಿನ ದಿನಗಳಲ್ಲಿ ದೇವರಾಜ್ ಅವರಿಂದ ಮತ್ತಷ್ಟು ಬದಲಾವಣೆ ನಿರೀಕ್ಷೆಯಲ್ಲಿ ನಾಗರೀಕರು.

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...