ಶಿವಮೊಗ್ಗ ಜಿಲ್ಲೆಯ ರೋಟರಿ ಕ್ಲಬ್ ಪೂರ್ವ ಸಂಸ್ಥೆ ಸಾರಥ್ಯದಲ್ಲಿ ನಗರದ ಶಿವಮೊಗ್ಗ ಅರೆಕಾನಟ್ ಮರ್ಚೆಂಟ್ಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನ. 8 ಮತ್ತು 9ರಂದು ರೋಟರಿ ದತ್ತಿನಿಧಿ ಮತ್ತು ಪೊಲಿಯೋ ಪ್ಲಸ್ ಕುರಿತ ʼಸಮೃದ್ಧಿ 2025ʼ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕಾರ್ಯಾಗಾರ ಚೇರ್ಮನ್ ಚಂದ್ರಹಾಸ್ ರಾಯ್ಕರ್, “ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಮತ್ತು ಹಾಸನ ಒಳಗೊಂಡು ಸಮೃದ್ಧಿ 2025 ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ನಾಲ್ಕು ಜಿಲ್ಲೆಗಳಿಂದ 700ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಳ್ಳಲಿದ್ದಾರೆ. ರವಿಶಂಕರ್ ದಾಕೋಜು ನವೆಂಬರ್ 8ರಂದು ಸಂಜೆ 5.30ಕ್ಕೆ ನಿಯೋಜಿತ ಜಿಲ್ಲಾ ಗವರ್ನರ್ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ” ಎಂದರು.
“ಜಿಲ್ಲಾ ಗವರ್ನರ್ ಕೆ ಪಾಲಾಕ್ಷ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಜಿಲ್ಲಾ ಗವರ್ನರ್ ಸಾಂಬಶಿವ ರಾವ್ ಪತಿಬಂಧ, ರಾಜಾರಾಮ್ ಭಟ್ ಬಿ, ಡಿ ಎಸ್ ರವಿ, ಬಿ ಎನ್ ರಮೇಶ್, ಜಿಲ್ಲಾ ಗವರ್ನರ್ ಬಿ ಎಂ ಭಟ್, ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ವಲಯ 11ರ ಸಹಾಯಕ ಗವರ್ನರ್ ಲಕ್ಷಣಗೌಡ ಬಿ, ವಲಯ 10ರ ಸಹಾಯಕ ಗವರ್ನರ್ ಕೆ ಪಿ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು” ಎಂದು ವಿವರಿಸಿದರು.
ಇದನ್ನೂ ಓದಿ: ಶಿವಮೊಗ್ಗ | ಕನ್ನಡ ಭಾಷೆಗೆ ವಿಶಿಷ್ಟವಾದ ಸ್ಥಾನವಿದೆ : ಪ್ರೊ. ಶರತ್ ಅನಂತಮೂರ್ತಿ
ನ.9ರ ಬೆಳಗ್ಗೆ 9:30ರಿಂದ ಡಾ. ಆರ್ ಎಸ್ ನಾಗಾರ್ಜುನ ಮತ್ತು ವಿನಯ್ ಕುಮಾರ್ ಪೈ, ಕೆ ಕೃಷ್ಣ ಶೆಟ್ಟಿ, ಕಾಶಿನಾಥ್ ಪ್ರಭು, ಡಾ. ನಾರಾಯಣ ಅವರು ಉಪನ್ಯಾಸ ನೀಡಲಿದ್ದಾರೆ.
“ನವೆಂಬರ್ 9ರಂದು ಮಧ್ಯಾಹ್ನ 1ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಈ ಕಾರ್ಯಗಾರದ ಚೇರ್ಮನ್ ಆಗಿ ಚಂದ್ರಹಾಸ್ ಪಿ ರಾಯ್ಕರ್, ಕಾರ್ಯದರ್ಶಿಯಾಗಿ ಡಾ. ಗುಡದಪ್ಪ ಕಸಬಿ, ಪ್ರಮೋಷನ್ ಕಮಿಟಿ ಚೇರ್ಮನ್ ಜಿ ವಿಜಯಕುಮಾರ್, ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಡಿ ಕಿಶೋರ್ ಕುಮಾರ್, ಕಾರ್ಯದರ್ಶಿ ಧನಂಜಯ ರಾಂಪುರ, ಡಿ ಎಂ ಜಲೇಂದ್ರ, ಪ್ರದೀಪ್ ಜಿ ಎಸ್ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿರುವರು” ಎಂದು ಮಾಹಿತಿ ನೀಡಿದರು.





