ಶಿವಮೊಗ್ಗದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮನೆಯೊಂದರ ಮುಂಭಾಗದಲ್ಲಿದ್ದ ಗಂಧದ ಮರವನ್ನು ಕಳ್ಳತನ ಮಾಡಲಾಗಿದೆ.
ಸಿಟಿ ಮಧ್ಯೆದಲ್ಲಿಯೇ ಶ್ರೀಗಂಧದ ಮರವನ್ನು ಕಳ್ಳತನ ಮಾಡಿರುವುದು ಅಚ್ಚರಿ ಮೂಡಿಸಿದೆ.

ಈ ಸಂಬಂಧ ದೂರುದಾರರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಬಂದು ಪರಿಶೀಲಿಸಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಪ್ರಕರಣದ ವಿಚಾರಣೆ ನಡೆಸಿದೆ.





