ಶಿವಮೊಗ್ಗ | ಭದ್ರಾವತಿ ಭದ್ರಾ ನದಿ ಪಾಲಾದ ಮಗ,ತಂದೆಗಾಗಿ ಶೋಧ

Date:

ಭದ್ರಾ ನದಿಗೆ ಇಳಿದಿದ್ದ ಮಗನನ್ನ ರಕ್ಚಿಸಲು ಹೋದ ತಂದೆಯೂ ಸಹ ನೀರುಪಾಲಾಗಿದ್ದಾರೆ. ಮಗ ಶವವಾಗಿ ಪತ್ತೆಯಾದರೆ ತಂದೆಯ ಬಗ್ಗೆ ಸುಳಿವು ಸಿಕ್ಕಿಲ್ಲ.

ಘಟನೆ ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭದ್ರಾವತಿಯ ಭೂತನಗುಡಿಯ ನಿವಾಸಿ ಹಫೀಜ್ ಜಾಬರ್ ಮತ್ತು ಅವರ 14 ವರ್ಷದ ಪುತ್ರ ಜಾವದ್ ಮತ್ತು ಕುಟುಂಬ ಬಿಆರ್ ಪಿಗೆ ವಿಹಾರಕ್ಕೆ ತೆರಳಿದ್ದರು. ಊಟ ಮುಗಿಸಿ ಪುತ್ರ ಜಾವಾದ್ ಹಿನ್ನೀರಿನಲ್ಲಿ ಇಳಿದಿದ್ದಾನೆ. ನೀರಿನ‌ ಅಳತೆಯನ್ನ‌ ಅಂದಾಜಿಸದ ಜಾವದ್ ನೀರು ಪಾಲಾಗಿದ್ದಾನೆ. ಆತನನ್ನ ರಕ್ಷಿಸಲು ತಂದೆ ಜಾಬರ್ ನೀರಿಗೆ ಇಳಿದು ನೀರುಪಾಲಾಗಿದ್ದಾರೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾದ ಜಾವದ್ ಶವವಾಗಿ ಪತ್ತೆಯಾದರೆ ತಂದೆ ಜಾಬರ್ ನ ಹುಡುಕಾಟ ನಡೆದಿದೆ.

1001500524

ಘಟನೆಯ ಮಾಹಿತಿ ಪಡೆದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಹಫೀಜ್ ಜಾಬರ್ ಭದ್ರಾವತಿಯ ಪ್ರಸಿದ್ಧ ವ್ಯಾಪಾರಿಯಾಗಿದ್ದಾರೆ. ಸಧ್ಯಕ್ಕೆ ಶೋಧಕಾರ್ಯ ಸ್ಥಗಿತಗೊಂಡಿದೆ. ಬೆಳಿಗ್ಗೆ ನಡೆಯಲಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...