ಶಿವಮೊಗ್ಗ, ನಗರದ ಸರಕಾರಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ವ್ಯಕ್ತಿಯೊಬ್ಬರ ಜೇಬಿನಲ್ಲಿದ್ದ ಹಣ ಲಪಟಾಯಿಸಿರುವ ಬಗ್ಗೆ ದೂರು ದಾಖಲಾಗಿದೆ.
ಚನ್ನಗಿರಿಯ ನಾಗರಾಜ್ ಎಂಬುವವರು ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಲ್ಲಿ ತಮ್ಮ ತಾಯಿಯನ್ನು ಚಿಕಿತ್ಸೆಗೆ ಕರೆತಂದಿದ್ದರು.
ಸಂಜೆ ಊರಿಗೆ ಮರಳಲು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಬಸ್ ಹತ್ತುವಾಗ ರಶ್ ಇತ್ತು.
ಬಸ್ ಹತ್ತಿದ ಮೇಲೆ ಜೇಬಿಗೆ ಕೈ ಹಾಕಿದಾಗ ಅದರಲ್ಲಿದ್ದ ೩೪,೦೦೦ ಹಣ ನಾಪತ್ತೆಯಾಗಿತ್ತು ಎಂದು ಆರೋಪಿಸಿದ್ದಾರೆ.





