ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪ ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಕಳ್ಳ ಬೇಟೆ ನಡೆಯುತ್ತಿದೆ, ಮರಗಳವು ಆಗುತ್ತಿದೆ ಎಂಬ ಮಾಧ್ಯಮಗಳ ವರದಿ ಉಲ್ಲೇಖಿಸಿ, ಈ ಬಗ್ಗೆ ಸಿಸಿಎಫ್ ದರ್ಜೆಯ ಅಧಿಕಾರಿಯಿಂದ ಖುದ್ದು ಪರಿಶೀಲನೆ ನಡೆಸಿ, ಮೂರು ದಿನಗಳ ಒಳಗಾಗಿ ವರದಿ ದಿ.28.09.2025ರ ಟಿಪ್ಪಣಿ ಸಂಖ್ಯೆ ಅಜೀಪ/1725/2025-26ರಲ್ಲಿ ಸೂಚಿಸಲಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ಪತ್ರ ಬರೆದಿರುತ್ತಾರೆ.

ಈ ಮಧ್ಯೆ ಲಕ್ಕಿನಕೊಪ್ಪ ಪ್ರದೇಶದಲ್ಲಿ ಕೆಲವು ಪ್ರಭಾವಿಗಳು ಅರಣ್ಯ ಭೂಮಿ ಒತ್ತುವರಿ ಮಾಡಿರುವುದಾಗಿ ನಮ್ಮ ಕಚೇರಿಗೆ ಸ್ಪಷ್ಟ ಮಾಹಿತಿ ಬಂದಿರುತ್ತದೆ ಎಂದು ತಿಳಿಸಿರುತ್ತಾರೆ, ಹಾಗೂ ಕಳ್ಳಬೇಟೆ ತನಿಖೆಯ ಜೊತೆಗೆ ಒತ್ತುವರಿ ಕುರಿತಂತೆಯೂ ಸಮಗ್ರ ತನಿಖೆ ನಡೆಸಿ ಒತ್ತುವರಿ ಆಗಿದ್ದಲ್ಲಿ ಅಥವಾ ಅರಣ್ಯ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ್ದಲ್ಲಿ ಸೂಕ್ತ ಕ್ರಮ ಜರುಗಿಸಲು ಮತ್ತು ಒತ್ತುವರಿಯ ಸಂಪೂರ್ಣ ವರದಿಯನ್ನು ಸಲ್ಲಿಸಲು ಸೂಚಿಸಿದೆ ಎಂದು,
ಆರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ ಬಿ. ಖಂಡ್ರೆ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು, ಬೆಂಗಳೂರು ಇವರಿಗೆ ಪತ್ರ ಬರೆದು ಅದೇಶಿಸಿದ್ದಾರೆ.





