ಶಿವಮೊಗ್ಗ, ಇತ್ತೀಚೆಗೆ ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ತೀರ್ಥಹಳ್ಳಿಯ ಶಾಂತವೇರಿ ನಿತಿನ್ ಆಯ್ಕೆಗೊಂಡು ಸಾಧನೆ ಮಾಡಿದ್ದ ಬೆನ್ನಲ್ಲೆ ಇದೀಗ ಮತ್ತೊಬ್ಬ ಯುವ ಪ್ರತಿಭೆ ಜ್ಞಾನಪ್ರಭು ಕ್ರಿಕೆಟ್ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾನೆ.ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನೇತೃತ್ವದಲ್ಲಿ ನಡೆಯುತ್ತಿರುವ 16 ವರ್ಷಕ್ಕಿಂತ ಕಡಿಮೆ ವಯೋಮಾನದ ಕ್ರಿಕೆಟ್ ಪಂದ್ಯಾವಳಿಯಲ್ಲಿ, ತೀರ್ಥಹಳ್ಳಿಯ ಸಿಟಿ ಕ್ರಿಕೆಟ್ ಕ್ಲಬ್ ಪರವಾಗಿ ಆಡುತ್ತಿರುವ ಜ್ಞಾನಪ್ರಭು ತಮ್ಮ ಅದ್ಭುತ ಆಟದಿಂದ ಗಮನ ಸೆಳೆದಿದ್ದಾರೆ.
ಸಾಗರ ತಂಡದ ವಿರುದ್ಧ ೧೬೪ ರನ್ ಗುರಿ ಬೆನ್ನತ್ತಿದ ತೀರ್ಥಹಳ್ಳಿ ತಂಡದ ಪರವಾಗಿ ಜ್ಞಾನಪ್ರಭಮ ೭೨ ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ ಶತಕ (100 ರನ್ ) ಸಿಡಿಸಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.
ಜ್ಞಾನಪ್ರಭು ಪ್ರಸ್ತುತ ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಬೆಂಗಳೂರಿನಲ್ಲಿ ಕ್ರಿಕೆಟ್ ತರಬೇತಿ ಪಡೆಯುತ್ತಿದ್ದು, ಬೆಂಗಳೂರಿನಲ್ಲಿ ಪ್ರಥಮ ಪಿಯೂಸಿ ಓದುತ್ತಿದ್ದಾನೆ.
ಈತ ತೀರ್ಥಹಳ್ಳಿಯ ಬೊಮ್ಮಸಯ್ಯನ ಅಗ್ರಹಾರದ ನಿವಾಸಿಯಾಗಿರುವ ಶಿವಮೊಗ್ಗ ಜಿಲ್ಲಾ ಧಾರ್ಮಿಕ ದತ್ತಿ ಸದಸ್ಯೆ ವರಲಕ್ಷ್ಮಿ ಹಾಗೂ ಪ್ರಕಾಶ್ ದಂಪತಿಗಳ ಪುತ್ರನಾಗಿದ್ದಾನೆ





