ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಮಲ್ಲಾಪುರದ ಅಕ್ಕಿಮಟ್ಟಿ ಬಳಿ ನಡೆದ ಬೈಕ್‌ಗಳ ಮುಖಾಮುಖಿ ಡಿಕ್ಕಿಯಲ್ಲಿ ಗಾಯಗೊಂಡಿದ್ದ ಯುವಕ ಮೃತಪಟ್ಟಿದ್ದಾರೆ.ಇಟ್ಟಿಗೆಹಳ್ಳಿಯ ಧನಂಜಯ (28) ಸಾವಿಗೀಡಾದವರು.
ಇವರು ಸೋಮವಾರ ಸಂಬಂಧಿಕರೊಬ್ಬರ ಶವ ಸಂಸ್ಕಾರಕ್ಕೆಂದು ತಾಯಿಯನ್ನು ಅಕ್ಕಿಮಟ್ಟಿಗೆ ಬಿಟ್ಟು ಬರುತ್ತಿದ್ದರು. ಮಲ್ಲಾಪುರದ ಕಡೆಗೆ ಹೋಗುವ ಕೆ.ಕೆ. ರಸ್ತೆಯಲ್ಲಿ ಡಿಕ್ಕಿ ಸಂಭವಿಸಿತ್ತು.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಗುರುವಾರ ಸಂಜೆ ಅಸುನೀಗಿದ್ದಾರೆ.
ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





