ನಿಷ್ಕಪಟ ಮನಸಿನ ಜನನಾಯಕ ಎನ್.ಡಿ ಸುಂದರೇಶ್ – ಒಂದು ನೆನಪು

Date:

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ನಂಬಳ ಗ್ರಾಮದ ಶ್ರೀಮಂತ ಕುಟುಂಬದ ಸಿದ್ದಮ್ಮ, ದುಗ್ಗಪ್ಪಗೌಡ ಅವರ ಮಗನಾದ ಎನ್.ಡಿ ಸುಂದರೇಶ್ ದಿನಾಂಕ 24-08- 1938ರಲ್ಲಿ ಜನ್ಮ ತಾಳಿದವರು. ಇವರು ದಿನಾಂಕ 21-12-1992ರಂದು ಹೃದಯಾಘಾತಕ್ಕೊಳಗಾಗಿ ಅಸುನೀಗಿದರು. ಇವರು ನಮ್ಮನ್ನಗಲಿ 31 ವರ್ಷಗಳಾಗಿವೆ. ಅವರನ್ನು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಸ್ಮರಿಸಿಕೊಂಡಿದ್ದಾರೆ

ರಾಷ್ಟ್ರಕವಿ ಕುವೆಂಪು, ಮುಖ್ಯಮಂತ್ರಿಗಳಾಗಿದ್ದ ಕಡಿದಾಳು ಮಂಜಪ್ಪನವರ ಹತ್ತಿರದ ಸಂಬಂಧಿ ಎನ್.ಡಿ ಸುಂದರೇಶ್. ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಇ. ಓದಿ ಅವಕಾಶಗಳಿದ್ದಾಗ್ಯೂ ಸರ್ಕಾರಿ ಕೆಲಸಕ್ಕೆ ಹೋಗದೆ, ಕೃಷಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಭದ್ರಾವತಿ ತಾಲ್ಲೂಕಿನ ಅಶೋಕನಗರದಲ್ಲಿ ಕಾಡುಗುಡ್ಡದಂತಿದ್ದ ಕಲ್ಲುಭೂಮಿಯನ್ನು ಬೇಸಾಯಕ್ಕೆ ಅಣಿಗೊಳಿಸಿ ಸುಂದರವಾದ ತೋಟವನ್ನಾಗಿ ಮಾರ್ಪಡಿಸಿಕೊಂಡು ಅಲ್ಲೇ ವಾಸವಿದ್ದು, ಕೃಷಿ ಮಾಡುತ್ತಿದ್ದರು. ಅವರ ಸ್ಮಾರಕವೂ ಕೂಡ ಅವರ ತೋಟದಲ್ಲಿಯೇ ಇದೆ.

ವಿದ್ಯಾರ್ಥಿ ಜೀವನದಲ್ಲಿ ಸಾಮಾಜಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಅವರು ಮೈಸೂರಿನ ಮಹಾರಾಜ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಅವಿರೋಧವಾಗಿ ಆಯ್ಕೆಯಾಗಿ ವಿದ್ಯಾರ್ಥಿ ಸಮೂಹವನ್ನು ಒಂದು ತಾತ್ವಿಕ ನೆಲೆಗಟ್ಟಿನಲ್ಲಿ ಹೋರಾಟಕ್ಕೆ ಸಜ್ಜುಗೊಳಿಸುತ್ತಿದ್ದರು. ಕಂದಾಚಾರ, ಮೌಢ್ಯ ವಿರೋಧಿಯಾದ ಇವರು ಡಾ. ರಾಮಮನೋಹರ ಲೋಹಿಯಾ, ಶಾಂತವೇರಿ ಗೋಪಾಲಗೌಡ, ರಾಷ್ಟ್ರಕವಿ ಕುವೆಂಪು ವಿಚಾರಗಳ ಪ್ರಭಾವಕ್ಕೊಳಗಾಗಿ ಪ್ರೊ. ಎಂ.ಡಿ.ಎನ್., ಪೂರ್ಣಚಂದ್ರ ತೇಜಸ್ವಿ, ಪಿ. ಲಂಕೇಶ್, ಕಡಿದಾಳ್ ಶಾಮಣ್ಣ, ಯು.ಆರ್. ಅನಂತಮೂರ್ತಿ ಇತರರನ್ನೊಡಗೂಡಿ ರಾಜ್ಯಾದ್ಯಂತ ಸುತ್ತಾಡಿ, ಸಮಾಜವಾದಿ ಯುವಜನ ಸಭಾದಲ್ಲಿ ಕೆಲಸ ಮಾಡಿದವರು. 1972ರಲ್ಲಿ ರೈತಸಂಘ ಕಟ್ಟಿಕೊಂಡು ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತ ರೈತರಿಗೆ ಆಗುತ್ತಿದ್ದ ಅನ್ಯಾಯವನ್ನು ನಿರಂತರವಾಗಿ ಪ್ರತಿಭಟಿಸುತ್ತಿದ್ದರು. ಸ್ವತಂತ್ರ ಹೋರಾಟಗಾರ ಹೆಚ್.ಎಸ್. ಭದ್ರಪ್ಪನವರು ಚುನಾವಣಾ ರಾಜಕೀಯದಿಂದ ದೂರವಾಗಿ ಚಳುವಳಿ ರಾಜಕಾರಣದಲ್ಲಿ ಗುರುತಿಸಿಕೊಂಡಾಗ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾಗಿ ರುದ್ರಪ್ಪನವರು ಆಯ್ಕೆಯಾದಾಗ ಆ ಸಂಘಕ್ಕೆ ಎನ್.ಡಿ. ಸುಂದರೇಶ್‌ರವರು ಪ್ರಧಾನ ಕಾರ್ಯದರ್ಶಿಯಾಗಿದ್ದರು. ಕಬ್ಬು ಬೆಳೆಗಾರರ ಸಂಘ ಕೇವಲ ಕಬ್ಬುಬೆಳೆಗಾರರ ಹಿತಾಸಕ್ತಿಗಾಗಿ ಹೋರಾಟ ಮಾಡದೆ ಸಮಸ್ತ ರೈತರ ಪರ ಹೋರಾಟ ಮಾಡುವಲ್ಲಿ ಎನ್.ಡಿ. ಸುಂದರೇಶ್‌ರವರ ಪಾತ್ರ ಬಹುಮುಖ್ಯವಾಗಿತ್ತು.

ಪ್ರೊ. ನಂಜುಂಡಸ್ವಾಮಿಯವರ ಜೊತೆ ಸುಂದರೇಶ್
ಪ್ರೊ. ನಂಜುಂಡಸ್ವಾಮಿಯವರ ಜೊತೆ ಸುಂದರೇಶ್

ರಾಜ್ಯದಲ್ಲಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ 1980 ಜುಲೈ 21ರಂದು ನರಗುಂದ, ನವಲಗುಂದದಲ್ಲಿ ನಡೆದ ರೈತ ಬಂಡಾಯದಲ್ಲಿ ಆಗಿನ ಸರ್ಕಾರ ಚಳುವಳಿ ನಿರತ ರೈತ ಸಮುದಾಯದ ಮೇಲೆ ಗುಂಡು ಹಾರಿಸಿ ರೈತರನ್ನು ಬಲಿ ತೆಗೆದುಕೊಂಡಾಗ ಆ ಘಟನೆಯನ್ನು ಮೊದಲನೆಯದಾಗಿ ಖಂಡಿಸಿದವರು ಎನ್.ಡಿ. ಸುಂದರೇಶ್‌ರವರು. ಅಷ್ಟಕ್ಕೆ ಸುಮ್ಮನಾಗದೆ ರಾಜ್ಯಾದ್ಯಂತ ಚಳುವಳಿಗೆ ಕರೆ ನೀಡಿ ನರಗುಂದ, ನವಲಗುಂದಕ್ಕೆ ಕೆಲ ಸಂಗಡಿಗರ ಜೊತೆ ಹೋಗಿ ಗುಂಡೂರಾವ್ ಸರ್ಕಾರವನ್ನು ಕಟುವಾಗಿ ಟೀಕಿಸಿ, ತದನಂತರ, ರಾಜ್ಯಾದ್ಯಂತ ಸುತ್ತಿ ಗುಂಡೂರಾವ್ ಸರ್ಕಾರದ ವಿರುದ್ದ ಗುಡುಗುತ್ತಾ ಕರ್ನಾಟಕ ರಾಜ್ಯ ರೈತಸಂಘ ಸ್ಥಾಪನೆಗೆ ಕಾರಣರಾದವರಲ್ಲಿ ಎನ್.ಡಿ. ಸುಂದರೇಶ್ ಅಗ್ರಗಣ್ಯರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಬ್ಬು ಬೆಳೆಗಾರರ ಸಂಘವನ್ನೇ ಕರ್ನಾಟಕ ರಾಜ್ಯ ರೈತ ಸಂಘ ಎಂದು ಮಾರ್ಪಡಿಸಿ, ಸಂಘದ ಮೊದಲನೇ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿದ್ದರು. ತದನಂತರ ಹೆಚ್.ಎಸ್. ರುದ್ರಪ್ಪನವರ ನೇತೃತ್ವದಲ್ಲಿ ಪ್ರೊ.ಎನ್.ಡಿ.ಎನ್., ಪೂರ್ಣಚಂದ್ರ ತೇಜಸ್ವಿ, ಪಿ. ಲಂಕೇಶ್, ಕಡಿದಾಳ್ ಶಾಮಣ್ಣ, ಪ್ರೊ. ರವಿವರ್ಮಕುಮಾ‌ರ್, ಮಂಜುನಾಥ ದತ್ತ, ಆರ್.ಪಿ. ವೆಂಕಟೇಶಮೂರ್ತಿ ಇತರರ ಜೊತೆ ರಾಜ್ಯದ ಹಳ್ಳಿ ಹಳ್ಳಿಗಳನ್ನು ಸುತ್ತಿ ತಾತ್ವಿಕ ನೆಲೆಗಟ್ಟಿನಲ್ಲಿ ಬೃಹತ್ ರೈತಚಳುವಳಿಗೆ ಕಾರಣರಾದರು.

ಈ ನಾಡು ಕಂಡ ಅಪ್ರತಿಮ ಹೋರಾಟಗಾರರಾಗಿದ್ದ ಎನ್.ಡಿ. ಸುಂದರೇಶ್ ಚಳುವಳಿಯಲ್ಲಿ ತಾಯಿ ಹೃದಯದ ನಾಯಕರಾಗಿದ್ದರು. ಯಾವುದೇ ರಾಜಕೀಯ ಆಸೆ ಆಮಿಷಗಳಿಗೆ ಬಲಿಯಾಗದೆ ಚಳುವಳಿ ರಾಜಕಾರಣದಲ್ಲಿ ನಂಬಿಕೆ ಇಟ್ಟುಕೊಂಡು ದುಡಿಯುವ ಜನರ ಸಮಸ್ಯೆಗಳಿಗೆ ಹೋರಾಟದ ಮೂಲಕವೇ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದರು. ಪ್ರೊ. ರವಿವರ್ಮ ಕುಮಾರ್ ಸುಂದರೇಶ್ ಕುರಿತು ಬರೆದಿರುವ ಲೇಖನವೊಂದರಲ್ಲಿ “ಕರ್ನಾಟಕ ರಾಜ್ಯ ರೈತಸಂಘದ ಇತಿಹಾಸದಲ್ಲಿ ರೈತರು ಕಂಡ ಅತ್ಯಂತ ವರ್ಣರಂಜಿತ ವ್ಯಕ್ತಿತ್ವವೆಂದರೆ ಅದು ಎನ್.ಡಿ. ಸುಂದರೇಶ್ ಅವರದು, ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯದ ಉದ್ದಗಲಕ್ಕೆ ಇಷ್ಟು ಪ್ರಬಲವಾಗಿ ರೈತರನ್ನು ಸಂಘಟನೆ ಮಾಡಲಿಕ್ಕೆ ಸಾಧ್ಯ ಮಾಡಿಕೊಟ್ಟಂತಹ ಕಾರಣ ಪುರುಷ ಎನ್.ಡಿ. ಸುಂದರೇಶ್” ಎಂದು ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ಈ ದಿನ ಸಂಪಾದಕೀಯ | ದೂಷಣೆ ಬಿಡಲಿ, ಆತ್ಮಹತ್ಯೆಯಿಂದ ರೈತರನ್ನು ದೂರ ಮಾಡಲಿ

ಲಂಕೇಶ್‌ರವರು ಎನ್.ಡಿ. ಸುಂದರೇಶ್‌ರವರು ನಿಧನರಾದ ನಂತರ ಅವರ ‘ಲಂಕೇಶ್ ಪತ್ರಿಕೆ’ಯಲ್ಲಿ “ಹೃದಯವಂತ ಸುಂದರೇಶ್‌ಗೆ ಹೃದಯಾಘಾತ” ಎಂಬ ಶೀರ್ಷಿಕೆಯಡಿ ಬರೆದ ಲೇಖನ ಅವರ ಒಟ್ಟು ವ್ಯಕ್ತಿತ್ವವನ್ನು ಸಾರುತ್ತಿತ್ತು. ಸುಂದರೇಶ್ ಸಾವಿಗೆ ಸೇರಿದ್ದ ಜನಸಮೂಹ ಬಹುಶಃ ಶಿವಮೊಗ್ಗ ಜಿಲ್ಲೆಯ ಯಾವ ರಾಜಕಾರಣಿ, ಗಾಂಧಿವಾದಿಗಳಿಗೂ ಸೇರಿರಲಿಲ್ಲ. ಒಂದೂವರೆ ದಿವಸವೂ ಸತತವಾಗಿ ಹರಿದು ಬಂದ ಜನಗಳಲ್ಲದೆ ಅರ್ಧ ಕಿ.ಮೀ. ವರೆಗೆ ನಿಂತಿದ್ದ ವಾಹನಗಳನ್ನು ನೋಡಿ ದಂಗು ಬಡಿದ ಜನ ಮಂತ್ರಿಯೋ, ಶಾಸಕನೋ ಅಥವಾ ಇನ್ಯಾವುದೋ ಹುದ್ದೆಯಲ್ಲಿ ಇಲ್ಲದಿದ್ದ ಈ ಸುಂದರೇಶ್‌ಗೆ ಎಷ್ಟು ಜನ ಸೇರಿದ್ದಾರಲ್ಲ, ಎಂದು ಉದ್ಗಾರ ತೆಗೆಯುತ್ತಿದ್ದರು. ರಾಜ್ಯದ ಅತಿ ದೊಡ್ಡ ಸಂಘಟನೆಯಾಗಿದ್ದ ರೈತಸಂಘದಲ್ಲಿ ಬಹಳ ಗಟ್ಟಿಯಾಗಿ ಕೂಗುವ ಶಕ್ತಿ ಪಡೆದಿದ್ದು ಸುಂದರೇಶ್ ಒಬ್ಬರೇ. ಯಾರೊಬ್ಬರು ಎತ್ತಿ ತೋರಿಸಬಹುದಾದ ತಪ್ಪುಗಳನ್ನೇ ಮಾಡದೆ ತುಂಬಾ ಖಚಿತವಾಗಿದ್ದ ಸುಂದರೇಶ್ ತಾವು ನಂಬಿದ್ದ ವಿಚಾರಗಳಿಗಾಗಿ ರಾಜಿ ಮಾಡಿಕೊಳ್ಳಲೇ ಇಲ್ಲ” ಎಂದು ಬರೆದಿದ್ದಾರೆ.

ನರಗುಂದ-ನವಲುಗುಂದ ರೈತ ಹೋರಾಟದಲ್ಲಿ ಸುಂದರೇಶ್
ನರಗುಂದ-ನವಲುಗುಂದ ರೈತ ಹೋರಾಟದಲ್ಲಿ ಸುಂದರೇಶ್

ಹೃದಯವಂತ, ತಾಯಿ ಹೃದಯದ ನಾಯಕನಾಗಿದ್ದ ನಮ್ಮ ಎನ್.ಡಿ. ಸುಂದರೇಶ್ ನಮ್ಮನಗಲಿ 21-12-2023ರಕ್ಕೆ 31 ವರ್ಷಗಳಾಯಿತು. ಇನ್ನೂ ಅವರ ಪ್ರಭಾವ ರೈತ ಚಳುವಳಿಯ ಮೇಲಿದೆ. ಇಂತಹವರು ಕಟ್ಟಿದ ಚಳುವಳಿ ಇನ್ನೂ ತಾತ್ವಿಕ ನೆಲೆಗಟ್ಟಿನಲ್ಲಿ ಹೋರಾಟ ಮಾಡಿ ದುಡಿಯುವ ರೈತ ಸಮುದಾಯಕ್ಕೆ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ. ಇದೇ ಸುಂದರೇಶ್ ಅವರಿಗೆ ನಿಜವಾಗಿ ಸಲ್ಲಿಸುವ ಗೌರವವಾಗುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...