ಬಂಗಾರದ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ
ಮಹಿಳೆಯ ಮಾಂಗಲ್ಯ ಸರ ಕದಿಯಲು ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರುನಗರದಲ್ಲಿ ಶನಿವಾರ ರಾತ್ರಿ ಪ್ರಯತ್ನ ನಡೆದಿದೆ. ಸ್ಕೂಟಿಯಲ್ಲಿ ಬರೋ ಕಳ್ಳನಿಂದ ಪ್ರಯತ್ನ ನಡೆದಿದ್ದು, ಈ ವೇಳೆ ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಕಳ್ಳ ತಕ್ಷಣ ಪರಾರಿಯಾಗಿದ್ದು ಮಹಿಳೆಯರು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.
ಬಂಗಾರದ ಬೆಲೆ ದಿನೇ ದಿನೇ ಏರುತ್ತಿದ್ದು, ಮಹಿಳೆಯರ ಮಾಂಗಲ್ಯ ಸರ, ಆಭರಣ ಸೇರಿ ಬಂಗಾರ ಕದಿಯುವ ಹಾಗೂ ದರೋಡೆ ಪ್ರಕರಣಗಳು, ಕಳ್ಳರ ಸಂಖ್ಯೆಯೂ ಹೆಚ್ಚುತ್ತಿವೆ. ಸಾಗರ ನಗರದ ನೆಹರುನಗರದಲ್ಲಿ ಶನಿವಾರ ರಾತ್ರಿ 8.30 ರ ಸಮಯದಲ್ಲಿ ಮಹಿಳೆಯೊಬ್ಬರು ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಸ್ಕೂಟಿಯಲ್ಲಿ ಬಂದ ಕಳ್ಳನೊಬ್ಬ ನೇರವಾಗಿ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಕದಿಯಲು ಪ್ರಯತ್ನ ನಡೆಸಿದ್ದಾನೆ. ಮಹಿಳೆ ಕೂಗಿ ಕರೆದು ಪ್ರತಿರೋಧ ವ್ಯಕ್ತಪಡಿಸಿದಾಗ ಸಾರ್ವಜನಿಕರು ಸೇರುವ ಭಯದಿಂದ ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾನೆ.
ಆದರೂ ಧೈರ್ಯದಿಂದ ಮಹಿಳೆಯು ಅವನನ್ನು ತುಂಬಾ ದೂರದವರೆಗೂ ಅವನನ್ನು ಹಿಂಬಾಲಿಸಿದ್ದು, ಕಳ್ಳ ಮಾತ್ರ ಸಿಗದೇ ಪರಾರಿಯಾದ್ದಾನೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕೃಷಿಗಾಗಿ ಮಣ್ಣು ಸಾಗಿಸಲು ಅನುಮತಿ ನೀಡುವಂತೆ ರೈತ ಸಂಘ ಪ್ರತಿಭಟನೆ
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಗೆ ಎಎಸ್ಪಿ ಬೆನಕ ಪ್ರಸಾದ್ ಸೂಚಸಿದ್ದು, ಸ್ಥಳಕ್ಕೆ ಬಂದ ಇನ್ಸ್‌ಪೆಕ್ಟರ್ ಪುಲ್ಲಯ್ಯ ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲನೆ ಮಾಡಿ ತನಿಖೆ ಪ್ರಾರಂಭಿಸಿದ್ದಾರೆ. ಪೊಲೀಸರು ಆದಷ್ಟೂ ಬೇಗನೇ ಸ್ಕೂಟಿಯಲ್ಲಿ ಬರೋ ಕಳ್ಳನನ್ನು ಪತ್ತೆ ಹಚ್ಚಿ ಬಂಧಿಸಿ, ಆತಂಕ ದೂರ ಮಾಡಬೇಕಿದೆ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.





