ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸೌಹಾರ್ದತೆ, ಸಹೋದರತ್ವ ಮತ್ತು ಪರಸ್ಪರ ಗೌರವವನ್ನು ಬಲಪಡಿಸುವ ಉದ್ದೇಶದಿಂದ ಜಮಾತೆ ಇಸ್ಲಾಮಿ ಹಿಂದ್ ಮಹಿಳಾ ಘಟಕ ಶಿವಮೊಗ್ಗದ ವತಿಯಿಂದ ಸೌಹಾರ್ದ ಇಫ್ತಾರ್ ಕೂಟವನ್ನು ಶಿವಮೊಗ್ಗ ನಗರದ ವಿಸ್ಡಮ್ ಶಾಲೆ ಆವರಣದಲ್ಲಿ ಆಯೋಜಿಸಲಾಗಿತ್ತು. ಪವಿತ್ರ ಕುರ್‌ಆನ್ ಪಠಣದ ಮೂಲಕ ಕಾರ್ಯಕ್ರಮದ ಆಯೋಜಿಸಲಾಗಿತ್ತು.
ಇಫ್ತಾರ್ ಕೂಟದಲ್ಲಿ ಜುಬೇದ ಅವರು “ರಂಜಾನ್‌ನ ಮಹತ್ವ” ವಿಷಯದ ಕುರಿತು ಉಪನ್ಯಾಸ ನೀಡಿ “ರಂಜಾನ್ ತಿಂಗಳು ಮಹತ್ವವಾದದ್ದು , ಉಪವಾಸದ ಮಹಿಮೆ ಹಾಗೂ ಮಾನವೀಯತೆ ಮತ್ತು ಸಹಾನುಭೂತಿಯ ಮಾನವರಲ್ಲಿ ಅಗತ್ಯ. ಉಪವಾಸದಿಂದ ಬಡವರ ಹಸಿದವರಿಗೆ ಕಷ್ಟ ತಿಳಿಯುವ ಪ್ರಯತ್ನ ಹಾಗೂ ದಾನಧರ್ಮಗಳ ಮಹತ್ವ, ಸಂದೇಶವನ್ನು ತಿಳಿಸುತ್ತದೆ” ಎಂದು ಹೇಳಿದರು.

ವಕೀಲರಾದ (ಅಡ್ವೊಕೇಟ್) ಸರೋಜಮ್ಮ ಹಾಗೂ ಶ್ರೀಮತಿ ರಾಜಮ್ಮ ಅವರು ಮಾತನಾಡಿ “ಇಂತಹ ಸೌಹಾರ್ದ ಕೂಟಗಳು ಸಮಾಜದಲ್ಲಿ ಒಗ್ಗಟ್ಟು, ಶಾಂತಿ ಹಾಗೂ ಸಹೋದರತ್ವವನ್ನು ಹೆಚ್ಚಿಸುತ್ತವೆ. ಎಲ್ಲೆಡೆ ಇದನ್ನು ಆಯೋಜಿಸಬೇಕು” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್; ದಾವಣಗೆರೆಗೆ ಕೊಟ್ಟಿದ್ದೆಷ್ಟು? ನಿರೀಕ್ಷೆಗಳೇನಿತ್ತು
ಈ ಕಾರ್ಯಕ್ರಮದಲ್ಲಿ ಸರ್ಜಿ ಆಸ್ಪತ್ರೆಯ ವೈದ್ಯರಾದ ಡಾ. ಸುಮನ್ ಸಿಂಗ್, ಅಧ್ಯಕ್ಷರಾದ ನಾಜಿಮಾ ಸುಲ್ತಾನ, ಮುಮ್ತಾಜ್ ಖಾನಂ, ವಜಿಹ ನಿಶಾತ್, ಶುಮಾಯಿಲ ಇರಂ, ಮದಿಹಾ ತುಬ, ಆಯಿಶಾ ಸೇರಿದಂತೆ ಸುಮಾರು 70 ಮಂದಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಸ್ಲಿಂ, ವಿವಿಧ ಸಮುದಾಯಗಳ ಸಹೋದರಿಯರು ಭಾಗವಹಿಸಿ ಪರಸ್ಪರ ಪ್ರೀತಿ, ಒಗ್ಗಟ್ಟು ಹಾಗೂ ಸಹಕಾರದ ಸಂದೇಶವನ್ನು ಹಂಚಿಕೊಂಡರು.





