ಶಿವಮೊಗ್ಗ | ಒಳಮೀಸಲಾತಿಯಡಿ ನೇಮಕಾತಿಗೆ ಆಗ್ರಹಿಸಿ ಮಾದಾರ ಮಹಾಸಭಾ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ

Date:

ಕಳೆದ 35 ಹೋರಾಟ ವರ್ಷಗಳ ಹೋರಾಟದ ಫಲವಾಗಿ ಹಾಗೂ ಸುಪ್ರೀಂ ಕೋರ್ಟಿನ ಆದೇಶದಂತೆ ಜಾರಿಯಾದ ಒಳ ಮೀಸಲಾತಿಯಂತೆ ಮಾದಿಗ ಸಂಬಂಧಿತ ಜಾತಿಗಳಿಗೆ ನೇಮಕಾತಿ ನೀಡಬೇಕು. ಒಳಮೀಸಲಾತಿ ಇಲ್ಲದೆ ನೇಮಕಾತಿ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಮಾದರ ಮಹಾಸಭಾ ನೇತೃತ್ವದಲ್ಲಿ ದಲಿತ ಸಂಘಟನೆಗಳು ಇಂದು ಶಿವಮೊಗ್ಗ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

1003912481

ಮಾದಿಗ ಸಮಾಜದ ಮುಖಂಡ ಆರ್ ಶಿವಣ್ಣ ಮಾತನಾಡಿ “ಮಾದಿಗ ಸಮುದಾಯದ ಸಂಬಂಧಿತ 17 ಜಾತಿಗಳನ್ನು ಶತಮಾನಗಳಿಂದಲೂ ಕೀಳಾಗಿ ಕಂಡು ಶೋಷಣೆಗೊಳಪಡಿಸಿದ್ದಾರೆ. ಈ ನೆಲೆಯಲ್ಲಿ ನಮ್ಮ ನ್ಯಾಯಕ್ಕಾಗಿ 35 ವರ್ಷಗಳಿಂದಲೂ ಒಳಮೀಸಲಾತಿ ಜಾರಿಗಾಗಿ ಸಂಘಟನೆಗಳು, ಹಿರಿಯರು ಎಲ್ಲರೂ ಸೇರಿ ಹೋರಾಟ ಮಾಡಿದ್ದೇವೆ. ಇದೆಲ್ಲದರ ಪರವಾಗಿ ಸದಾಶಿವ ಆಯೋಗದಂತೆ ನಮಗೆ ಶೇಕಡ ಏಳರಷ್ಟು ಒಳಮೀಸಲಾತಿ ದೊರಕಬೇಕಿತ್ತು. ಯಾವ ಸರ್ಕಾರಗಳು ನಮಗೆ ನ್ಯಾಯ ಒದಗಿಸಿಲ್ಲ.‌ ಸುಪ್ರೀಂ ಕೋರ್ಟ್ ನ ಆದೇಶದ ನಂತರ ಶೇಕಡಾ ಆರು ಒಳಮೀಸಲಾತಿ ನೀಡಿ ಸರ್ಕಾರ ವಿಧಾನಸಭೆ ಮತ್ತು ರಾಜ್ಯಪಾಲರ ಒಪ್ಪಿಗೆ ಪಡೆದು ಕಾಯ್ದೆ ರೂಪಿಸಿದೆ. ಆದರೆ ಈಗ ಇಲ್ಲದ ನೆಪ ಒಡ್ಡಿ 56 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಒಳಮೀಸಲಾತಿ ಹೊರತುಪಡಿಸಿ ನೇಮಕಾತಿ ಪ್ರಕ್ರಿಯೆಗೆ ಮುಂದಾಗಿದ್ದು. ಇದು ಮಾದಿಗ ಸಮುದಾಯ, ಸಾಮಾಜಿಕ ನ್ಯಾಯಕ್ಕೆ, ದಲಿತರಿಗೆ ಮಾಡಿದ ದ್ರೋಹ” ಎಂದು ಆಕ್ರೋಶ ವ್ಯಕ್ತಪಡಿಸಿದರು.‌

1003912482

“ಹಿಂದಿನಿಂದಲೂ ಮೀಸಲಾತಿಯನ್ನು ಕಬಳಿಸಿದ ಬಲಾಢ್ಯರು ನಮ್ಮ ಸಮುದಾಯಕ್ಕೆ ಒಳಮೀಸಲಾತಿಯ ನ್ಯಾಯ ಪಡೆಯಲು ಬಿಡುತ್ತಿಲ್ಲ. ಹಳೆ ಮೀಸಲಾತಿಯಂತೆ ನೇಮಕಾತಿಗೆ ಒತಾಯಿಸುತ್ತಿದ್ದಾರೆ. ಆದರೆ ನಾಗಮೋಹನ್ ದಾಸ್ ಆಯೋಗದ ವರದಿಯಂತೆ, ರಾಜ್ಯ ಸರ್ಕಾರ ರೂಪಿಸಿರುವ ಕಾಯ್ದೆಯಂತೆ ಒಳಮೀಸಲಾತಿ ನೀಡಿ ನೇಮಕಾತಿ ನಡೆಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಬೀದಿಗಿಳಿದು ಮಾದಿಗ ಮಹಾಸಭಾ ಮತ್ತು ದಲಿತ ಸಂಘಟನೆಗಳು ಉಗ್ರವಾದ ಹೋರಾಟ ನಡೆಸಲಿವೆ. ಇದರ ವಿರುದ್ಧ ಕ್ರಾಂತಿಯೇ ಪ್ರಾರಂಭವಾಗಲಿದೆ” ಎಂದು ಎಚ್ಚರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1003912483

ಜಿಲ್ಲಾ ಮಾದರ ಮಹಾಸಭಾ ಕಾರ್ಯದರ್ಶಿ ತಿರುಕಣ್ಣ ಮಾತನಾಡಿ “ನಮ್ಮ 35 ವರ್ಷದ ಬೇಡಿಕೆ ಮತ್ತು ಹೋರಾಟದ ಫಲವಾಗಿ ಜಾರಿಯಾದ ಒಳಮೀಸಲಾತಿಯಂತೆ ನಮಗೆ ಶೇ. 6 ಒಳಮೀಸಲಾತಿಯಡಿ ನೇಮಕಾತಿ ಮಾಡಿ ಮಾದಿಗ ಸಂಬಂಧಿತ ಜಾತಿಗಳಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಮಾರ್ಚ್ 27ರಿಂದ ಉಗ್ರವಾದ ಹೋರಾಟ ಪ್ರಾರಂಭವಾಗಲಿದೆ. ವಿಧಾನಸೌಧ ಮುತ್ತಿಗೆ ಹಾಕಿ ಪ್ರತಿಭಟಿಸುತ್ತೇವೆ” ಎಂದು ಎಚ್ಚರಿಸಿದರು.

ಶಿವಮೊಗ್ಗ | ಬಜೆಟ್ 2026-27ರಲ್ಲಿ ಜಿಲ್ಲೆಗೆ ನೀಡಿದ ಅನುದಾನ ಹಾಗೂ ಘೋಷಣೆಗಳೆಷ್ಟು?ಈ ಸುದ್ದಿ ಓದಿದ್ದೀರಾ?

ಪ್ರತಿಭಟನೆಯಲ್ಲಿ ಮಾದಾರ ಮಹಾಸಭಾ ಕಾರ್ಯಕರ್ತರು ಶಿವಮೊಗ್ಗ ಜಿಲ್ಲಾ ಮಾದಿಗ ಸಂಬಂಧಿತ ಹಾಗೂ ದಲಿತ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...